/newsfirstlive-kannada/media/post_attachments/wp-content/uploads/2025/05/Adampur-Air-Base-pm-modi-2.jpg)
ನವದೆಹಲಿ: ರಕ್ತ, ನೀರು ಒಟ್ಟಿಗೆ ಹರಿಯಲ್ಲ. ಟೆರರ್ ಮತ್ತು ಟಾಕ್ ಒಟ್ಟಿಗೆ ನಡೆಯಲ್ಲ. ಕದನ ವಿರಾಮದ ಬಳಿಕ ಭಾರತದ ಪ್ರಧಾನಿ ಪಾಕಿಸ್ತಾನಕ್ಕೆ ಕೊಟ್ಟಿದ್ದ ಖಡಕ್ ಎಚ್ಚರಿಕೆ ಇದು. ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ ಮರುದಿನ ಬೆಳಗ್ಗೆ ಅದಂಪುರ ಏರ್ ಬೇಸ್‌ಗೆ ಭೇಟಿ ನೀಡಿದ್ದಾರೆ. ಯೋಧರ ಜೊತೆ ಚರ್ಚೆ ನಡೆಸಿ ಸುಂದರ ಅನುಭವವನ್ನ ಹಂಚಿಕೊಂಡಿದ್ದಾರೆ.
ಅದಂಪುರ ಏರ್ ಬೇಸ್.. ಪಂಜಾಬ್‌ನ ಜಲಂಧರ್‌ನಿಂದ 28 ಕಿ.ಮೀ ದೂರದಲ್ಲಿದೆ. ಭಾರತದ 2ನೇ ಅತಿ ದೊಡ್ಡ ಏರ್ ಬೇಸ್ ಈ ಅದಂಪುರ ಏರ್ ಬೇಸ್. ಪಾಕಿಸ್ತಾನದ ಮೇಲಿನ ಆಪರೇಷನ್ ಸಿಂಧೂರ ಏರ್ ಸ್ಟ್ರೈಕ್ ವೇಳೆ ನಿರ್ಣಾಯಕ ಪಾತ್ರ ವಹಿಸಿದ್ದೇ ಈ ಅದಂಪುರ ಏರ್ ಬೇಸ್.
ಭಾರತ ಇದೇ ಏರ್ ಬೇಸ್‌ನಿಂದ ಪಾಕ್ ವಿರುದ್ಧ ಕ್ಷಿಪಣಿಗಳನ್ನು ಉಡಾಯಿಸಿದೆ. ಭಾರತದ ಕ್ಷಿಪಣಿಗಳ ದಾಳಿಗೆ ಪಾಕಿಸ್ತಾನದ ಏರ್ ಬೇಸ್‌ಗಳೇ ಛಿದ್ರ, ಛಿದ್ರ ಆಗಿದೆ. ಅಲ್ಲದೇ ಪಾಕಿಸ್ತಾನ ಸೇನೆ ಕೂಡ ಈ ಅದಂಪುರ ಏರ್ ಬೇಸ್ ಅನ್ನು ಟಾರ್ಗೆಟ್ ಮಾಡಿತ್ತು. ಆದರೆ ಭಾರತದ ಏರ್ ಬೈಸ್ ಸಿಸ್ಟಮ್ ಪಾಕಿಸ್ತಾನದ ಮಿಸೈಲ್‌ಗಳು ಅದಂಪುರ ಏರ್ ಬೇಸ್ ತಲುಪದಂತೆ ಹೊಡೆದುರುಳಿಸಿದೆ.
ಪಾಕಿಸ್ತಾನ ಸೇನೆ ನಾವು ಅದಂಪುರ ಏರ್ ಬೇಸ್ ಮೇಲೆ ದಾಳಿ ಮಾಡಿದ್ದೇವೆ ಅನ್ನೋ ಹಸಿ ಸುಳ್ಳು ಹೇಳಿತ್ತು. ಅದಂಪುರ ಏರ್ ಬೇಸ್ ಮೇಲಿನ ಪಾಕ್ ಮಿಸೈಲ್ ದಾಳಿ ವಿಫಲವಾಗಿದ್ದು, ಅದಂಪುರ ಏರ್ ಬೇಸ್ ಈಗ ಸಂಪೂರ್ಣವಾಗಿ ಸುಸ್ಥಿತಿಯಲ್ಲಿದೆ.
ಆಪರೇಷನ್ ಸಿಂಧೂರದ ಯಶಸ್ಸು, ಕದನ ವಿರಾಮದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರನ್ನು ಭೇಟಿಯಾಗಲು ಅದಂಪುರ ಏರ್ ಬೇಸ್ ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಯೋಧರ ಜೊತೆ ಪ್ರಧಾನಿ ಮೋದಿ; ಒಂದೇ ಒಂದು ಫೋಟೋದ ಮೂಲಕ ಪಾಕ್‌ಗೆ ಖಡಕ್ ಸಂದೇಶ
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವೇಳೆ ಹಾಜರಿದ್ದ ಏರ್ ಪೋರ್ಸ್ ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ವಿವರಣೆ ನೀಡಿದ್ದಾರೆ.
ಇದೇ ವೇಳೆ, ಅದಂಪುರ ಏರ್‌ಬೇಸ್‌ನಲ್ಲಿ ಯೋಧರು ಹಾಗೂ ಪ್ರಧಾನಿ ಮೋದಿ ಅವರಿಂದ ಅಪರೇಷನ್ ಸಿಂಧೂರ ಯಶಸ್ಸಿನ ಸಂಭ್ರಮಾಚರಣೆ ನಡೆದಿದೆ. ಮೋದಿ ಅವರು ವಾಯುಪಡೆ ಯೋಧರ ಭುಜತಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
ಅದಂಪುರ ಏರ್ ಬೇಸ್‌ಗೆ ಭೇಟಿಗೆ 10 ಕಾರಣಗಳು
1. ಅದಂಪುರ ಏರ್ ಬೇಸ್, ಭಾರತ ವಾಯುಪಡೆಯ 2ನೇ ಅತಿ ದೊಡ್ಡ ಏರ್ ಬೇಸ್
2. ಪಾಕ್ ವಿರುದ್ಧದ ಏರ್ ಸ್ಟ್ರೈಕ್ ನಡೆಸಿದ್ದು ಇದೇ ಅದಂಪುರ ಏರ್ ಬೇಸ್‌ನಿಂದ
3. ಅದಂಪುರ ಏರ್ ಬೇಸ್‌ನಲ್ಲೇ ಭಾರತದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಇದೆ
4. ಅದಂಪುರ ಏರ್ ಬೇಸ್‌ನಲ್ಲೇ ಮಿಗ್-29 ಯುದ್ಧ ವಿಮಾನಗಳ ಸ್ಕ್ವಾಡ್ರನ್ ಇದೆ
5. ಅದಂಪುರ ಏರ್ ಬೇಸ್‌ನಿಂದಲೇ ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆ
6. ಅದಂಪುರ ಏರ್ ಬೇಸ್ ಅನ್ನು ಮಿಸೈಲ್ ದಾಳಿಯಲ್ಲಿ ನಾಶ ಮಾಡಿದ್ದೇವೆ ಎಂದಿದ್ದ ಪಾಕ್
7. ಪಾಕ್ ವಾಯುದಾಳಿಗೆ ಅದಂಪುರ ಏರ್ ಬೇಸ್ ನಾಶವಾಗಿಲ್ಲ ಎಂದು ಮೋದಿ ಭೇಟಿಯಿಂದ ಪಾಕ್‌ಗೆ ಸಂದೇಶ
8. ಭಾರತದ ವಾಯುಪಡೆ, ಸೇನೆಯ ಜೊತೆ ಕೇಂದ್ರ ಸರ್ಕಾರ, ಇಡೀ ದೇಶ ಇದೆ ಎಂಬ ಸಂದೇಶ ರವಾನೆ
9. ತ್ರಿಶೂಲದ ಟೋಪಿ ಧರಿಸಿ ಪಾಕ್‌ಗೆ ಎಚ್ಚರಿಕೆಯ ಸಂದೇಶ
10. ಅದಂಪುರ ಏರ್‌ಬೇಸ್‌ನಲ್ಲಿ ವಾಯುಪಡೆಯ ಯೋಧರನ್ನು ಅಭಿನಂದಿಸಿ ಬೆನ್ನು ತಟ್ಟಿ ಹುರಿದುಂಬಿಸಿದ ಮೋದಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ