/newsfirstlive-kannada/media/post_attachments/wp-content/uploads/2024/11/Kuki-Militants-1.jpg)
ಸೇನಾ ಪಡೆ ಹಾಗೂ ಶಂಕಿತ ಕುಕಿ ದಂಗೆಕೋರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ 10 ಜನರು ಕುಕಿ ಬಂಡುಕೋರರು ಹತ್ಯೆಯಾಗಿದ್ದಾರೆ. ಮಣಿಪುರದ ಜಿರಿಬಮ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಸಿಆರ್​ಪಿಎಫ್​ನ ಓರ್ವ ಯೋಧ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿರಿಬಮ್ ಪೊಲೀಸ್ ಠಾಣೆಯ ಮೇಲೆ ಕುಕಿ ಬಂಡುಕೋರರು ಎರಡು ಕಡೆಯಿಂದ ಗುಂಡಿನ ದಾಳಿ ನಡೆಸಿದ ವೇಳೆ ಈ ಒಂದು ಎನ್​ಕೌಂಟರ್ ನಡೆದಿದೆ. ಪೊಲೀಸ್ ಠಾಣೆಯ ಹತ್ತಿರದಲ್ಲಿಯೇ ಹಲವು ರೀತಿಯ ಪರಿಹಾರ ಕೇಂದ್ರಗಳಿದ್ದವು. ಅವುಗಳನ್ನೂ ಕೂಡ ಗುರಿಯಾಗಿಸಿಕೊಂಡು ಬಂಡುಕೋರರ ಪಡೆ ಗುಂಡಿನ ದಾಳಿ ನಡೆಸಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ನೆಕ್ಸ್ಟ್​ ಲೆವೆಲ್ ತಲುಪಿದ ಸಂಘರ್ಷ.. ಇಸ್ರೇಲ್ ಮೇಲೆ 160ಕ್ಕೂ ಹೆಚ್ಚು ರಾಕೆಟ್ ದಾಳಿ..
ಈಗಾಗಲೇ ಹಲವು ಬಾರಿ ಜಿರಿಬಮ್ ಪೊಲೀಸ್ ಠಾಣೆಯ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆಸಲಾಗಿದೆ. ಇದೇ ತಿಂಗಳಲ್ಲಿಯೇ ಇಂತಹ ಹಲವು ಘಟನೆಗಳು ನಡೆದಿವೆ. ಇಂದು ಆಟೋ ರಿಕ್ಷಾದಲ್ಲಿ ಬಂದ ಬಂಡುಕೋರರ ಪಡೆ ಪೊಲೀಸ್ ಠಾಣೆ ಹಾಗೂ ಪರಿಹಾರ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ಗುಂಡಿನ ದಾಳಿ ನಡೆಸಿವೆ.
/newsfirstlive-kannada/media/post_attachments/wp-content/uploads/2024/11/Kuki-Militants.jpg)
ಆಟೋ ರಿಕ್ಷಾದಲ್ಲಿ ಬಂದು ಪೊಲೀಸ್ ಠಾಣೆಯ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ, ಬಂಡುಕೋರರ ಪಡೆ ಹಲವಾರು ಗುಂಪುಗಳಾಗಿ ಒಡೆದು ಪೊಲೀಸ್ ಠಾಣೆಯಿಂದ 400 ಮೀಟರ್ ದೂರದಲ್ಲಿರುವ ಜುಕಾರೊಡೊ ಕರೊಂಗ್​ ಕಡೆಗೆ ಚದುರಿಕೊಂಡು ಹೋಗಿವೆ. ಬಳಿಕ ಮತ್ತೆ ಪೊಲೀಸ್ ಠಾಣೆ ಹಾಗೂ ಮನೆಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ಈ ವೇಳೆ ಬಂಡಕೋರರೊಂದಿಗೆ ರಕ್ಷಣಾ ಪಡೆ ಗುಂಡಿನ ಕಾಳಗಕ್ಕೆ ಇಳಿದಿದೆ. ಗುಂಡಿನ ದಾಳಿಯಲ್ಲಿ 10 ಬಂಡುಕೋರರನ್ನು ಸಂಹರಿಸಲಾಗಿದ್ದು. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us