newsfirstkannada.com

ಕೋತಿಗಳಿಂದ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ; ಪೋಷಕರು ಓದಲೇಬೇಕಾದ ಸ್ಟೋರಿ ಇದು

Share :

Published November 16, 2023 at 6:02am

    ಒಂದೇ ವಾರದಲ್ಲಿ ಮೂರನೇ ದಾಳಿ ನಡೆಸಿದ ಕೋತಿಗಳು

    ದೀಪಕ್ ಠಾಕೂರ್ ಕೋತಿಗಳಿಂದ ದಾಳಿಗೊಳಗಾದ ಬಾಲಕ

    ಹಳ್ಳಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಘಟನೆ

ಗಾಂಧಿನಗರ: ಹತ್ತು ವರ್ಷದ ಬಾಲಕನನ್ನು ಕೋತಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗಾಂಧಿನಗರದ ಸಾಲ್ಕಿ ಗ್ರಾಮದಲ್ಲಿ ನಡೆದಿದೆ. ದೆಹಗಾಂ ತಾಲೂಕಿನ ದೇವಸ್ಥಾನದ ಬಳಿ ಕೋತಿಗಳು ಬಾಲಕನನ್ನು ಹತ್ಯೆ ಮಾಡಿ ಕರುಳನ್ನು ಬಗೆದು ಹೊರ ತೆಗೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೋತಿಗಳಿಂದ ದಾಳಿಗೊಳಗಾದ ಬಾಲಕನನ್ನು ದೀಪಕ್ ಠಾಕೂರ್ ಎಂದು ಗುರುತಿಸಲಾಗಿದೆ.

ಇದನ್ನು ಓದಿ: ನೋಡ ನೋಡುತ್ತಿದ್ದಂತೆ ಬಸ್ ಅಡಿ ಸಿಲುಕಿ ವ್ಯಕ್ತಿ ಸಾವು; ಅಸಲಿಗೆ ಆಗಿದ್ದೇನು?

ಮೃತ ಬಾಲಕ ದೀಪಕ್ ಹಳ್ಳಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಕೋತಿಗಳ ಗುಂಪು ಏಕಾಏಕಿ ದಾಳಿ ನಡೆಸಿದೆ. ಮಂಗಗಳು ಬಾಲಕನ ಮೇಲೆ ದಾಳಿ ಮಾಡಿ ಉಗುರಿನಿಂದ ಪರಚಿ ಬಳಿಕ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದಿವೆ. ಕೂಡಲೇ ಅಲ್ಲೇ ಇದ್ದ ಸ್ಥಳೀಯರು ದೌಡಾಯಿಸಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು, ಒಂದೇ ವಾರದಲ್ಲಿ ಗ್ರಾಮದಲ್ಲಿ ಕೋತಿಗಳು ನಡೆಸಿದ ಮೂರನೇ ದಾಳಿ ಇದಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಮಂಗಗಳನ್ನು ಸೆರೆಹಿಡಿಯಿರಿ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಮಂಗಗಳನ್ನು ಹಿಡಿಯರು ಎಲ್ಲ ರೀತಿಯಲ್ಲೂ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಅರಣ್ಯಾಧಿಕಾರಿ ವಿಶಾಲ್ ಚೌಧರಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋತಿಗಳಿಂದ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ; ಪೋಷಕರು ಓದಲೇಬೇಕಾದ ಸ್ಟೋರಿ ಇದು

https://newsfirstlive.com/wp-content/uploads/2023/11/Monkey-1.jpg

Load More