newsfirstkannada.com

Video- 10ನೇ ವರ್ಷದ ಬರ್ತ್​​ಡೇ ಕೇಕ್ ಕಟ್ ಮಾಡಿದ್ದ ಬಾಲಕಿ, ಅದೇ ಕೇಕ್​ ತಿಂದ ನಂತರ ಸಾವು.. ಸಹೋದರಿ ಗಂಭೀರ

Share :

Published March 31, 2024 at 7:18am

    ಕೇಕ್ ಡೆಲಿವರಿ ಮಾಡಿದವರನ್ನು ಕೇಳಿದರೆ ಈ ಬಗ್ಗೆ ಏನು ಹೇಳುತ್ತಾರೆ.?

    ಕೇಕ್ ತಿಂದ ನಂತರ ರಾತ್ರಿ 3 ಗಂಟೆ ಸುಮಾರಿಗೆ ಬಾಲಕಿಗೆ ವಾಮಿಟಿಂಗ್

    ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದ ಕೇಕ್

ಚಂಡೀಗಢ: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ 10 ವರ್ಷದ ಬಾಲಕಿ ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದ ಕೇಕ್​ ಕಟ್ ಮಾಡಿ, ಅದನ್ನ ತಿಂದ ನಂತರ ಸಾವನ್ನಪ್ಪಿರುವ ಘಟನೆ ಪಂಜಾಬ್​ನ ಪಟಿಯಾಲ ನಗರದಲ್ಲಿ ನಡೆದಿದೆ.

ಪಟಿಯಾಲ ನಗರದ ನಿವಾಸಿ ಮನ್ವಿ (10) ಮೃತಪಟ್ಟಿರುವ ದುರ್ದೈವಿ. ಬಾಲಕಿಯ ಬರ್ತ್​​ಡೇ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಆನ್​​ಲೈನ್ ಮೂಲಕ ಕೇಕ್​ ಆರ್ಡರ್ ಮಾಡಿದ್ದರು. ರಾತ್ರಿ 8, 9 ಗಂಟೆ ಸುಮಾರಿಗೆ ಕೇಕ್ ಡೆಲವರಿ ಮಾಡಲಾಗಿದ್ದು ಬಾಲಕಿ ಮನೆಯಲ್ಲೇ ಖುಷಿ, ಖುಷಿಯಾಗಿ ಕೇಕ್ ಕಟ್ ಮಾಡಿದ್ದಾಳೆ. ಬಳಿಕ ಕೇಕ್ ಅನ್ನು​ ಬಾಲಕಿ, ಆಕೆಯ ತಂಗಿ ಹಾಗೂ ಪೋಷಕರು ಕೂಡ ತಿಂದಿದ್ದಾರೆ.

ಬಳಿಕ ರಾತ್ರಿ 3 ಗಂಟೆ ಸುಮಾರಿಗೆ ಏಕಾಏಕಿ ಬಾಲಕಿ ಮತ್ತು ಈಕೆಯ ತಂಗಿಗೆ ವಾಂತಿಯಾಗಿದೆ. ಇದರಿಂದ ತಕ್ಷಣ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಸಹೋದರಿ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೇಕ್ ತಿಂದಿದ್ದ ಮನೆಯವರು ಕೂಡ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

ಸದ್ಯ ಈ ಸಂಬಂಧ ಬಾಲಕಿಯ ಪೋಷಕರು ಕೇಸ್ ದಾಖಲು ಮಾಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಕೇಕ್ ಡೆಲಿವರಿ ಮಾಡಿದ್ದವರನ್ನ ಈ ಬಗ್ಗೆ ಕೇಳಿದರೆ ಇನ್ನು ಕೇಕ್ ಡೆಲಿವರಿಯಾಗಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬಾಲಕಿಯ ಸಾವು ಹಲವಾರು ಅನುಮಾನಗಳನ್ನ ಉಂಟು ಮಾಡಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video- 10ನೇ ವರ್ಷದ ಬರ್ತ್​​ಡೇ ಕೇಕ್ ಕಟ್ ಮಾಡಿದ್ದ ಬಾಲಕಿ, ಅದೇ ಕೇಕ್​ ತಿಂದ ನಂತರ ಸಾವು.. ಸಹೋದರಿ ಗಂಭೀರ

https://newsfirstlive.com/wp-content/uploads/2024/03/PUNJABI_GIRL.jpg

Load More