newsfirstkannada.com

IPS ಅಧಿಕಾರಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದ ಧೋನಿ; ಮಾಹಿ ಸಲ್ಲಿಸಿದ ಅರ್ಜಿ ಜೂ. 15 ರಂದು ವಿಚಾರಣೆ

Share :

13-06-2023

    ಧೋನಿ ಕೋರ್ಟ್ ಮೆಟ್ಟಿಲೇರಿದ್ಯಾಕೆ?

    ಮಾನನಷ್ಟ ಮೊಕದ್ದಮೆ ಹೂಡಿದ ಧೋನಿ

    ಬರೋಬ್ಬರಿ 100 ಕೋಟಿ ಮೊಕದ್ದಮೆ ಹೂಡಿದ ಮಾಹಿ

ಐಪಿಎಸ್ ಅಧಿಕಾರಿ ಜಿ.ಸಂಪತ್ ಕುಮಾರ್ ವಿರುದ್ಧ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನ ಜೂನ್​​ 15 ರಂದು ಮದ್ರಾಸ್​​​​​ ಹೈಕೋರ್ಟ್​ ವಿಚಾರಣೆ ನಡೆಸಲಿದೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಜಿ.ಸಂಪತ್ ಕುಮಾರ್ ಅವರ ವಿರುದ್ಧ ಧೋನಿ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತಮ್ಮ ವಿರುದ್ಧ ಮಾಡಿದ ಟೀಕೆಗಳಿಗಾಗಿ ಸಂಪತ್ ಕುಮಾರ್​​​​​ ಅವರನ್ನ ಶಿಕ್ಷಿಸುವಂತೆ ಮಾಹಿ ನ್ಯಾಯಲಯಕ್ಕೆ ಒತ್ತಾಯಿಸಿದ್ದರು.

ಏನಿದು ಪ್ರಕರಣ?

2013ರ ಐಪಿಎಲ್​ ಬೆಟ್ಟಿಂಗ್​ ಮತ್ತು ಸ್ಪಾಟ್​ ಫಿಕ್ಸಿಂಗ್​ ಹಗರಣದ ಸಂಬಂಧಿಸಿದಂತೆ ಧೋನಿ ಮೇಲೆ ಐಪಿಎಸ್​ ಅಧಿಕಾರಿ ಸಂಪತ್​ ಕುಮಾರ್​ ಟೀಕೆ ಮಾಡಿದ್ದರು. ಆದರೆ ಈ ವಿಚಾರವಾಗಿ ಧೋನಿ ಕೋರ್ಟ್​ ಮೆಟ್ಟಿಲೇರಿದ್ದಲ್ಲದೆ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇನ್ನು ಐಪಿಎಸ್​ ಅಧಿಕಾರಿ ಲಿಖಿತ ಹೇಳಿಕೆ ಮೂಲಕ ಟೀಕೆ ಮಾಡಿರುವ ಕುರಿತು ಧೋನಿ ದೂರು ನೀಡಿದ್ದರು. ತಮಿಳುನಾಡು ಅಡ್ವಕೇಟ್​​ ಜನರಲ್​​ ಆರ್​ ಷಣ್ಮುಗಸುಂದರಂ ಅವರು ದೃಢವಾದ ಆಧಾರವನ್ನು ಇಟ್ಟುಕೊಂಡು ಮಾಹಿಗೆ ದೂರು ದಾಖಲಿಸಲು ಹೇಳಿದ್ದರು. ಅದರಂತೆ ಧೋನಿ ಮಾನನಷ್ಟ ಮೊಕದ್ದಮೆ ದೂರು ನೀಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPS ಅಧಿಕಾರಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದ ಧೋನಿ; ಮಾಹಿ ಸಲ್ಲಿಸಿದ ಅರ್ಜಿ ಜೂ. 15 ರಂದು ವಿಚಾರಣೆ

https://newsfirstlive.com/wp-content/uploads/2023/06/Dhoni-2.jpg

Load More