100 ಕೋಟಿ ಭಾರತೀಯರ ಕೈಯಲ್ಲಿ ಖರ್ಚು ಮಾಡಲು ಹಣವೇ ಇಲ್ಲ; ಅಚ್ಚರಿಯ ವರದಿ ಬಹಿರಂಗ!

author-image
Gopal Kulkarni
Updated On
100 ಕೋಟಿ ಭಾರತೀಯರ ಕೈಯಲ್ಲಿ ಖರ್ಚು ಮಾಡಲು ಹಣವೇ ಇಲ್ಲ; ಅಚ್ಚರಿಯ ವರದಿ ಬಹಿರಂಗ!
Advertisment
  • ಹೊಟ್ಟೆ ಬಟ್ಟೆಯಾಚೆ ಖರ್ಚು ಮಾಡಲು ಭಾರತೀಯರ ಕೈಯಲ್ಲಿ ಹಣವಿಲ್ಲ
  • ಅಚ್ಚರಿಯ ವರದಿಯನ್ನು ಬಹಿರಂಗಗೊಳಿಸಿದ ಬ್ಲುಮೆ ವೆಂಚರ್ಸ್​ ಕಂಪನಿ
  • ದೇಶದ ಶೇಕಡಾ 10 ರಷ್ಟು ಜನರ ಕೈಯಲ್ಲಿದೆ ಶೇಕಡಾ 57ರಷ್ಟು ದೇಶದ ಆದಾಯ

ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ನಮ್ಮ ಭಾರತ. ಸುಮಾರು 143 ಕೋಟಿ ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿ ಅತ್ಯಂತ ಸಣ್ಣ ಗುಂಪಿನಷ್ಟು ಜನರು ಅನಿವಾರ್ಯವಲ್ಲದ ಸರಕು ಮತ್ತು ಸೇವೆಗಳನ್ನು ಖರೀದಿ ಮಾಡಲು ಖರ್ಚು ಮಾಡುತ್ತಾರೆ. ಸದ್ಯ ಬ್ಲುಮೆ ವೆಂಚರ್ಸ್ ಎಂಬ ಕ್ಯಾಪಿಟಲ್ ಫರ್ಮ್​ ಒಂದು ರಿಪೋರ್ಟ್ ಬಹಿರಂಗ ಮಾಡಿದೆ. ದೇಶದಲ್ಲಿ ಸುಮಾರು 143 ಕೋಟಿ ಜನಸಂಖ್ಯೆಯಲ್ಲಿ ಕೇವಲ 13 ರಿಂದ 14 ಕೋಟಿ ಜನರು ಮಾತ್ರ ಕ್ಲಾಸ್ ಜೀವನವನ್ನು ನಡೆಸುತ್ತಿದ್ದಾರೆ. ಅಂದ್ರೆ ಅವರ ಬಳಿ ಮೂಲಭೂತ ಅವಶ್ಯಕತೆಗಳಾಚೆಯೂ ಖರ್ಚು ಮಾಡಲು ಹಣವಿದೆಯಂತೆ

ಈ ಒಂದು ವರದಿ ಹೇಳುವ ಪ್ರಕಾರ ದೇಶದ ಜಿಡಿಪಿ ಗ್ರಾಹಕರ ಮಾಡುವ ಖರ್ಚಿನ ಮೇಲೆಯೇ ಅವಲಂಬಿತವಾಗಿದೆ. ಆ ರೀತಿ ಖರ್ಚು ಮಾಡುವವರ ಸಂಖ್ಯೆ ಕೇವಲ 14 ಕೋಟಿ ಎಂದು ಹೇಳಲಾಗಿದೆ. ನಂತರ 30 ಕೋಟಿ ಜನರು ಸ್ಟಾರ್ಟ್​​ಅಪ್ ಮಾರ್ಕೆಟ್​ನಂತಹ ಪರಿಣಾಮಕಾರಿಯಾಗಿ ರೂಪಿಸುತ್ತಿದ್ದು. ಇವರನ್ನು ಈಗಷ್ಟೇ ಬೆಳೆಯುತ್ತಿರುವ ಅಥವಾ ಮಹತ್ವಾಕಾಂಕ್ಷಿ ಗ್ರಾಹಕರು ಎಂದು ಕರೆಯಲಾಗುತ್ತದೆ. ಅವರು ಈಗ ಹೆಚ್ಚು ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಆದರೆ ಇದರಾಚೆಯೂ ಖರೀದಿದಾರರ ಬಗ್ಗೆ ಒಂದು ಕುತೂಹಲವೊಂದು ಇದೆ.

ಈ ಒಂದು ವರದಿ ಹೇಳುವ ಪ್ರಕಾರ ಉಳಿದ ಅಂದ್ರೆ ಸುಮಾರು 100 ಕೋಟಿ ಜನರ ಬಳಿ ಅವಶ್ಯಕತೆಗಿಂತ ಆಚೆ ಖರ್ಚು ಮಾಡುವಷ್ಟು ಹಣವಿಲ್ಲ. ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಅದರಾಚೆ ಖರ್ಚು ಮಾಡುವಷ್ಟು ಹಣವಿಲ್ಲ ಎಂದು ವರದಿ ಮಾಡಿದೆ.

ಇದನ್ನೂ ಓದಿ: ಬೆನ್ನು ಮೂಳೆಯಲ್ಲಿ ನಡುಕ ಹುಟ್ಟಿಸೋ ಭೂತ ಪ್ರೇತಗಳ ಜಾಗಗಳು ಇವು.. ಭಾರತದಲ್ಲಿ ಎಲ್ಲೆಲ್ಲಿ ಇವೆ ಗೊತ್ತಾ?

ವರದಿ ನೀಡಿರುವ ಮಾಹಿತಿ ಪ್ರಕಾರ ಭಾರತೀಯ ಗ್ರಾಹಕರ ಮಾರುಕಟ್ಟೆ ದೊಡ್ಡದಾಗಿ ವಿಸ್ತಾರಗೊಳ್ಳುತ್ತಿಲ್ಲ. ಅಂದರೆ ಹೆಚ್ಚು ಸಂಪತ್ತನ್ನು ಹೊಂದಿರುವ ಜನರು ದೇಶದಲ್ಲಿ ಕಡಿಮೆ ಇದ್ದಾರೆ ಎಂಬ ಹಾಗೂ ಸಂಪತ್ತನ್ನು ಹೆಚ್ಚಿಗೆ ಮಾಡಿಕೊಳ್ಳುವಲ್ಲಿ ಜನರು ವಿಫಲವಾಗುತ್ತಿದ್ದಾರೆ ಎಂಬ ಮಾಹಿತಿಯು ಈ ವರದಿಯಲ್ಲಿ ಬಹಿರಂಗಗೊಂಡಿದೆ. ಇದು ಭಾರತೀಯ ವ್ಯಾಪಾರದ ಟ್ರೆಂಡ್​ ಮೇಲೆ ಪ್ರಭಾವ ಬೀರುತ್ತಿದೆ. ಪ್ರಮುಖವಾಗಿ ಅತಿಹೆಚ್ಚು ಮಾರಾಟಕ್ಕಾಗಿ ಕಾಯುತ್ತಿರುವ ಅತಿಹೆಚ್ಚು ಬೆಲೆಯುಳ್ಳ ಬ್ರ್ಯಾಂಡ್​ಗಳ ಖರೀದಿಯು ಇಳಿಮುಖವಾಗಿದೆ. ಬಜೆಟ್​ ಫ್ರೆಂಡ್ಲಿ ಅವಕಾಶಗಳು ಕೂಡ ಈಗ ಗ್ರಾಹಕರಿಲ್ಲದೇ ಪರದಾಡುತ್ತಿವೆ.

ಈ ಒಂದು ವರದಿಯ ಪ್ರಕಾರ ಶೇಕಡಾ 10 ರಷ್ಟು ಭಾರತೀಯರಲ್ಲಿ ಶೇಕಡಾ 57.7 ರಷ್ಟು ರಾಷ್ಟ್ರದ ಆದಾಯವಿದೆ. ಇದು 1990ಕ್ಕೆ ಹೋಲಿಸಿ ನೋಡಿದರೆ ಸುಮಾರು ಶೇಕಡಾ 34 ರಷ್ಟು ಏರಿಕೆಯಾಗಿದೆ. ಹಣಕಾಸು ಉಳಿತಾಯ ಮತ್ತು ಸಾಲ ಪಡೆಯುವವರರ ಭಾರತೀಯರ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಅಧಿಕ ಉತ್ಪನ್ನಗಳ ಖರೀದಿಯ ಸಂಖ್ಯೆಯೂ ಕುಸಿದಿದೆ. ಕೋವಿಡ್​ಗೂ ಮುಂಚೆ ಗ್ರಾಹಕ ಬಳಕೆ ಉತ್ತಮವಾಗಿತ್ತು ಈಗ ಅದು ಕುಸಿತ ಕಂಡಿದೆ ಎಂದು ಹೇಳಲಾಗಿದೆ. ನಿರೀಕ್ಷಿತ ಪ್ರಮಾಣದ ಗ್ರಾಹಕರ ಬಳಕೆ ಇಳಿಮುಖವಾಗಿ ಸಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ರಸ್ತೆಯಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಹತ್ತಿದ ಕಾರು​.. ಮುಂದೇನಾಯ್ತು..? ಶಾಕಿಂಗ್ ವಿಡಿಯೋ

ಈ ವರದಿಯಲ್ಲಿ ಹೇಳಿರುವ ಪ್ರಕಾರ ಸುಮಾರು 50 ರಷ್ಟು ಟ್ಯಾಕ್ಸ್ ಕಟ್ಟುವ ಮಧ್ಯಮ ವರ್ಗದ ಜನಸಂಖ್ಯೆಯ ಸಂಬಳದಲ್ಲಿ ಸುಮಾರು 10 ವರ್ಷದಿಂದ ಏರಿಕೆ ಕಂಡು ಬಂದಿಲ್ಲ. ಇದರ ಅರ್ಥ ಅವರ ಆದಾಯ ಕೆಟ್ಟಮಟ್ಟಕ್ಕೆ ಇಳಿದಿದ್ದು ಅಗತ್ಯವಸ್ತುಗಳಾಚೆ ಖರೀದಿ ಮಾಡುವ ಸರಕು ಹಾಗೂ ಸೇವೆಗಳ ಬೆಲೆ ದುಬಾರಿಯಾಗಿವೆ. ಹೀಗಾಗಿ ಸುಮಾರು 100 ಕೋಟಿ ಭಾರತೀಯರು ಹೊಟ್ಟೆ ಬಟ್ಟೆಯಾಚೆಗೆ ಖರ್ಚು ಮಾಡಲು ಹೆಚ್ಚಿನ ಹಣವನ್ನು ಹೊಂದಿಲ್ಲ ಎಂದು ಈ ವರದಿ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment