newsfirstkannada.com

ನೂತನ ಕೇಂದ್ರ ಸಚಿವರಿಗೆ ಪ್ರಧಾನಿ ಮೋದಿ 100 ದಿನದ ಟಾರ್ಗೆಟ್​.. ಏನದು ಹೊಸ ಅಜೆಂಡಾ?

Share :

Published June 10, 2024 at 6:08am

    ಚಹಾ ಕೂಟದಲ್ಲಿ ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚೆ

    ಮುಂದಿನ ಐದು ವರ್ಷಗಳ ಮಾರ್ಗಸೂಚಿ ಬಗ್ಗೆ ಮೋದಿ ಸುಳಿವು

    ಭಾರತಕ್ಕಾಗಿ 24/7 ಕೆಲಸ ಮಾಡುತ್ತೇನೆ ಅಂತ ಪ್ರಧಾನಿ ಮೋದಿ ಶಪಥ

ನರೇಂದ್ರ ಮೋದಿ ಅಂದ್ರೆ ಒಂದು ಗತ್ತು. ನಮೋ ಅಂದ್ರೆ ಅದೊಂದು ಶಿಸ್ತು. ಈ ಪರಿಪಾಠವನ್ನ ಬೆಳೆಸಿಕೊಂಡಿರೋ ನಾಯಕ ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ. ಜೊತೆಗೆ ತಮ್ಮ ಕಾರ್ಯಕ್ಕೆ ಸಾಥ್ ನೀಡುವ ಸಂಪುಟದಲ್ಲೂ ಮೋದಿ ಇದೇ ಪ್ರಿನ್ಸಿಪಲ್ಸ್‌ ಮತ್ತು ಪೊಟೆನ್ಶಿಯಲ್‌ನ ಎದುರು ನೋಡ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಮಾಣವಚನಕ್ಕೂ ಮುನ್ನ ಪ್ರಧಾನಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಶತಕ ದಿನಗಳ ಟಾಸ್ಕ್‌ ಕೊಟ್ಟಿದ್ದಾರೆ. ಸರ್ಕಾರವನ್ನ ಸುಗಮ ಪಥದಲ್ಲಿ ನಡೆಸಲು ಕರೆಕೊಟ್ಟಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 155 ನಿಮಿಷ.. ಪ್ರಧಾನಿ ಮೋದಿ 3.O ಸಂಪುಟ ಸೇರಿದ ಒಟ್ಟು ಕೇಂದ್ರ ಸಚಿವರು ಎಷ್ಟು?

ವಿಕಸಿತ ಭಾರತಕ್ಕಾಗಿ 24/7 ಕೆಲಸ ಮಾಡುತ್ತೇನೆ ಅಂತ ಮೋದಿ ಮತದಾರರ ಮುಂದೆ ಶಪಥ ಮಾಡಿದ್ದಾರೆ. ಕೊಟ್ಟಿರೋ ಮಾತನ್ನ ಪೂರೈಸೋಕೆ ಪದಗ್ರಹಣ ನಡೆದ ದಿನದಿಂದ 100 ದಿನಗಳ ಟಾರ್ಗೆಟ್ ಸೆಟ್ ಮಾಡಿದ್ದಾರೆ. ನಿನ್ನೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಚಾಯ್‌ ಪೇ ಚರ್ಚೆ ನಡೆದಿದೆ. ಈ ಸಭೆಯಲ್ಲಿ ರಾಜ್ಯದಿಂದ ಪ್ರಲ್ಹಾದ್‌ ಜೋಶಿ, ಹೆಚ್‌.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಭಾಗಿಯಾಗಿದ್ರು. ಈ ಸಭೆಯಲ್ಲಿ ತಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ಮೋದಿ ಮುಂದಿನ ಐದು ವರ್ಷಗಳ ಮಾರ್ಗಸೂಚಿ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಜೊತೆಗೆ ಸರ್ಕಾರದ ಮೊದಲ 100 ದಿನಗಳ ಅಜೆಂಡಾ ಪೂರೈಸಬೇಕು ಅಂತ ಟಾಸ್ಕ್ ಕೊಟ್ಟಿದ್ದಾರೆ.

‘ನಮೋ’ ಶತದಿನ ಅಜೆಂಡಾ!

1. ಮೊದಲಿಗೆ ಪೆಂಡಿಂಗ್ ಇರುವ ಎಲ್ಲಾ ಕೆಲಸ ಪೂರ್ಣಗೊಳಿಸಿ
2. ಎರಡನೇ ಅವಧಿಯಲ್ಲಿ ಪೂರ್ಣಗೊಳ್ಳದೆ ಬಾಕಿ ಇರುವ ಕೆಲಸ
3. ಮೂರನೇ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಲು ಸೂಚನೆ
4. ದೇಶ, ಜನರನ್ನು ಗೌರವಿಸಿ ಕೆಲಸ ಮಾಡಲು ಮೋದಿ ಸೂಚನೆ
5. ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಸಚಿವ ಸ್ಥಾನದ ಕೆಲಸ ಆರಂಬಿಸಿ
6. ಸೋಮವಾರದಿಂದ ಗುರುವಾರದವರೆಗೆ ಸಚಿವ ಸ್ಥಾನದ ಕೆಲಸ
7. ಶುಕ್ರವಾರದಿಂದ ಭಾನುವಾರದವರೆಗೆ ನಿಮ್ಮ ಕ್ಷೇತ್ರಕ್ಕೆ ಗಮನ ಕೊಡಿ
8. ನಿಮಗೆ ಸಂಬಂಧಿಸಿದ ಇಲಾಖೆಗಳನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಿ
9. ಸಂಸತ್ನಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಚೆನ್ನಾಗಿ ಉತ್ತರಿಸಿ

2047ರ ವೇಳೆಗೆ ವಿಕಸಿತ ಭಾರತವನ್ನಾಗಿ ಮಾಡೋದು ಮೋದಿ ಸರ್ಕಾರದ ಪ್ರಮುಖ ಗುರಿ. ಈ ನಿಟ್ಟಿನಲ್ಲಿ ಎನ್‌ಡಿಎ ಸರ್ಕಾರದ ಸಚಿವರು ಕಾರ್ಯ ನಿರ್ವಹಿಸುವಂತೆ ಪ್ರಧಾನಿ ಮೋದಿ ಸಲಹೆ ಕೊಟ್ಟಿದ್ದಾರೆ. ಇದೀಗ ಮೋದಿ ಕೊಟ್ಟಿರೋ ಟಾಸ್ಕ್‌ನ ಚಾಚು ತಪ್ಪದೇ ಪೂರ್ಣಗೊಳಿಸಬೇಕಾದ ಹೊಣೆ ಎನ್‌ಡಿಎ ಸಚಿವರಿಗಿದೆ. ಆದ್ರೆ, ಹಂಗಿನ ಸರ್ಕಾರದಲ್ಲಿ ಕೆಲವು ಸವಾಲುಗಳು ಮೋದಿ ಮುಂದಿದ್ದು ಅವುಗಳನ್ನ ಮೆಟ್ಟಿನಿಂತು ದೇಶವನ್ನ ಹೇಗೆ ಅಭಿವೃದ್ಧಿ ಕಡೆ ಕೊಂಡೊಯ್ತಾರೆ ಅನ್ನೋದೆ ಮುಂದಿರೋ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೂತನ ಕೇಂದ್ರ ಸಚಿವರಿಗೆ ಪ್ರಧಾನಿ ಮೋದಿ 100 ದಿನದ ಟಾರ್ಗೆಟ್​.. ಏನದು ಹೊಸ ಅಜೆಂಡಾ?

https://newsfirstlive.com/wp-content/uploads/2024/06/pm-modi21.jpg

Load More