/newsfirstlive-kannada/media/post_attachments/wp-content/uploads/2025/07/Trapit_Bansal.jpg)
ಭಾರತೀಯ ಮೂಲದ ಸಂಶೋಧಕ ಟ್ರಾಪಿಟ್ ಬನ್ಸಾಲ್ ಅವರು ಅಮೆರಿಕದ ಓಪನ್ ಎಐಗೆ ಗುಡ್ಬೈ ಹೇಳಿ ಮಾರ್ಕ್ಜುಕರ್ ಬರ್ಗ್ ನೇತೃತ್ವದ ಮೆಟಾದ ಹೊಸ ಸೂಪರ್ ಇಂಟೆಲಿಜೆನ್ಸ್ ಘಟಕ (Superintelligence Unit)ವನ್ನು ಸೇರಿಕೊಂಡಿದ್ದಾರೆ. ಈ ವೇಳೆ ಅತ್ಯುನ್ನತ ಹುದ್ದೆಗಳಿಗೆ ಸೇರುವವರಿಗೆ ಮೆಟಾ 100 ಮಿಲಿಯನ್ ಡಾಲರ್ (854,60,51,680 ಕೋಟಿ ರೂಪಾಯಿಗಳ) ಬೋನಸ್ ನೀಡಿದೆ ಎಂದು ಹೇಳಲಾಗುತ್ತಿದೆ.
ಟ್ರಾಪಿಟ್ ಬನ್ಸಾಲ್ ಅವರು ಅಮೆರಿಕದ ಓಪನ್ ಎಐ ಕಂಪನಿಯ ಸಂಶೋಧಕರು ಆಗಿದ್ದರು. ChatGPT ಸಂಶೋಧನೆ ವೇಳೆ ಕಂಪನಿಯ ಬ್ಯಾಕ್ಬೋನ್ ಆಗಿದ್ದರು. ಇದರ ಜೊತೆ ಹಲವಾರು ಎಐ ರಿಸರ್ಚ್ನಲ್ಲಿ ಬನ್ಸಾಲ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಟ್ರಾಪಿಟ್ ಬನ್ಸಾಲ್ ಸೇರಿದಂತೆ ಓಪನ್ ಎಐನಲ್ಲಿದ್ದ ಹಲವಾರು ಉದ್ಯೋಗಿಗಳನ್ನು ತಮ್ಮ ಕಂಪನಿಗೆ ಸೇರ್ಪಡೆ ಮಾಡಿಕೊಳ್ಳಲು 8,54,60,51,680 ಕೋಟಿ ರೂಪಾಯಿಗಳ ಬೋನಸ್ ನೀಡಲಾಗಿದೆಯಂತೆ.
ಇದನ್ನೂ ಓದಿ:ಚೊಚ್ಚಲ ದ್ವಿಶತಕ ಬಾರಿಸಿದ ಶುಭ್ಮನ್ ಗಿಲ್.. ಆಂಗ್ಲರ ನೆಲದಲ್ಲಿ ಭಾರತದ ನಾಯಕನಿಂದ ಮಹತ್ವದ ಸಾಧನೆ!
ಮೆಟಾದಿಂದ 100 ಮಿಲಿಯನ್ ಡಾಲರ್ ಸೇರ್ಪಡೆ ಬೋನಸ್ ಆಫರ್ ಮಾಡಲಾಗಿತ್ತು ಎಂದು ಓಪನ್ ಎಐ ಕಂಪನಿಯ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರು ಮಾಡಿರುವ ಕಮೆಂಟ್ಸ್ ಈ ಬಗ್ಗೆ ಮಾಹಿತಿ ನೀಡುತ್ತಿವೆ. ಮೆಟಾದ ಉನ್ನತ ದರ್ಜೆಯ ನೇಮಕಾತಿಗಳಲ್ಲಿ ಟ್ರಾಪಿಟ್ ಬನ್ಸಾಲ್ ಕೂಡ ಒಬ್ಬರಾಗಿದ್ದಾರೆ. ಈ ಬೋನಸ್ನಲ್ಲಿ ಇವರಿಗೂ ದೊಡ್ಡ ಮೊತ್ತವೇ ಸಿಗಲಿದೆ ಎನ್ನಲಾಗಿದೆ.
ಐಐಟಿ ಕಾನ್ಪುರದ ಪದವೀಧರರಾದ ಟ್ರಾಪಿಟ್ ಬನ್ಸಾಲ್ ಅವರು 2022 ರಲ್ಲಿ ಓಪನ್‌ಎಐ ಸೇರಿದ್ದರು. ಐಐಟಿ ಕಾನ್ಪುರದಲ್ಲಿ ಗಣಿತ ಹಾಗೂ ಸ್ಟ್ಯಾಟಿಸ್ಟಿಕ್ನಲ್ಲಿ (Statistics) ಪದವಿ ಪಡೆದುಕೊಂಡಿದ್ದಾರೆ. ಇದಾದ ಮೇಲೆ ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಪಿಚ್ಡಿ ಪೂರ್ಣಗೊಳಸಿದ್ದಾರೆ. ಮೆಟಾ-ಲರ್ನಿಂಗ್ನಲ್ಲಿ ಹೆಚ್ಚು ಸಂಶೋಧನೆ ಮಾಡಿ ಹೆಚ್ಚು ಪರಿಣತಿ ಪಡೆದಿದ್ದಾರೆ. ಹೀಗಾಗಿ ಈಗ ಮೆಟಾ ಇವರನ್ನ ಕಂಪನಿಗೆ ಆಹ್ವಾನ ಮಾಡಿದೆ ಎಂದು ಹೇಳಲಾಗುತ್ತಿದೆ.
ಸಂಶೋಧಕ ಟ್ರಾಪಿಟ್ ಬನ್ಸಾಲ್ ಅವರ 2012ರಲ್ಲಿ ಗುರುಗ್ರಾಮ್‌ನಲ್ಲಿರುವ ಆಕ್ಸೆಂಚರ್ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್‌ನಲ್ಲಿ ವಿಶ್ಲೇಷಕರಾಗುವ ಮೂಲಕ ಅವರ ವೃತ್ತಿಜೀವನ ಆರಂಭ ಆಯಿತು. ನಂತರ ಟ್ರಾಪಿಟ್ ಬನ್ಸಾಲ್ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಸಂಶೋಧನಾ ಸಹಾಯಕರಾಗಿ 2 ವರ್ಷಗಳಿಗೂ ಹೆಚ್ಚು ಕಾಲ ಬೇಸಿಯನ್ ಮಾಡೆಲಿಂಗ್ ಮತ್ತು ಇನ್ಫಾರೆನ್ಸ್ ಮೆಥಡ್ಸ್ (Bayesian modelling and Inference methods) ಮೇಲೆ ಫೋಕಸ್ ಮಾಡಿದ್ದರು. ಇವೆಲ್ಲಾ ಆದ ಮೇಲೆ 2022ರಲ್ಲಿ ಓಪನ್‌ಎಐ ಸೇರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ