/newsfirstlive-kannada/media/post_attachments/wp-content/uploads/2025/04/RAJATH_CATCH_MISS.jpg)
ಐಪಿಎಲ್ ಹಂಗಾಮದಲ್ಲಿ ಬೌಂಡರಿಗಳ ಬೋರ್ಗರೆತ, ಸಿಕ್ಸರ್ಗಳ ಸುರಿಮಳೆಯೇ ಸುರೀತಿದೆ. ಬ್ಯಾಟ್ಸ್ಮನ್ಗಳ ಜಬರ್ದಸ್ತ್ ಬ್ಯಾಟಿಂಗ್ ಫ್ಯಾನ್ಸ್ಗೆ ಭರ್ಜರಿ ಎಂಟರ್ಟೈನ್ಮೆಂಟ್ ನೀಡ್ತಿದೆ. ಆದ್ರೆ, ಇದೇ ಐಪಿಎಲ್ನಲ್ಲಿ ನಡೀತಿರೋ ಕ್ಯಾಚ್ ಡ್ರಾಪ್ ಸುರಿಮಳೆ ಫ್ಯಾನ್ಸ್ ವಲಯದಲ್ಲಿ ಬೇಸರ ತರಿಸಿದೆ. ನೀವು ನಂಬಲ್ಲ, ಈ ಸೀಸನ್ ಫಸ್ಟ್ ಹಾಫ್ ಅಂತ್ಯಕ್ಕೆ ಕ್ಯಾಚ್ ಡ್ರಾಪ್ ಸೆಂಚುರಿ ಕಂಪ್ಲೀಟ್ ಆಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಟೂರ್ನಿ ಸಖತ್ ಮನರಂಜನೆ ನೀಡ್ತಿದೆ. ಟ್ವಿಸ್ಟ್ & ಟರ್ನ್ಗಳು, ರೋಚಕ ಅಂತ್ಯಗಳು, ಪ್ಲೇ ಆಫ್ನ ಪೈಪೋಟಿ ದಿನದಿಂದ ದಿನಕ್ಕೆ ಥ್ರಿಲ್ ಹೆಚ್ಚಿಸ್ತಿದೆ. ಇದರ ನಡುವೆ ಐಪಿಎಲ್ ತನ್ನ ಕ್ವಾಲಿಟಿ ಕಳೆದುಕೊಂಡಿತಾ ಎಂಬ ಪ್ರಶ್ನೆ ಹುಟ್ಟಿದೆ. ಬ್ಯಾಟಿಂಗ್ ಅಬ್ಬರ, ಬೌಲಿಂಗ್ ದರ್ಬಾರ್ ನಡೀತಿದೆ. ಆದ್ರೆ, ಫೀಲ್ಡಿಂಗ್ ವಿಚಾರಕ್ಕೆ ಯಾವ ತಂಡಗಳೂ ಸ್ಟ್ಯಾಂಡರ್ಡ್ಗೆ ತಕ್ಕಂತೆ ಆಡ್ತಿಲ್ಲ. ಕ್ಯಾಚ್ ಡ್ರಾಪ್ಗಳ ಸುರಿಮಳೆ ಈ ಸೀಸನ್ನಲ್ಲಿ ಆಗ್ತಿದೆ.
ಕ್ಯಾಚ್ ಡ್ರಾಪ್ ಸುರಿಮಳೆ.! ಸೆಂಚುರಿ ‘ಸಾಧನೆ’.!
ಈ ಸೀಸನ್ ಐಪಿಎಲ್ನಲ್ಲಿ ಕ್ಯಾಚ್ ಡ್ರಾಪ್ಗಳ ಸುರಿಮಳೆ ಸುರಿತಿದೆ. ಆಗಿರೋದು 43 ಪಂದ್ಯ ಅದಾಗಲೇ ಕ್ಯಾಚ್ ಡ್ರಾಪ್ ವಿಚಾರದಲ್ಲಿ ಸೆಂಚುರಿಯೇ ಸಿಡಿದುಬಿಟ್ಟಿದೆ. ಆ ತಂಡ ಈ ತಂಡ ಅಂತಿಲ್ಲ. ಎಲ್ಲಾ ತಂಡಗಳು ನಾ ಮುಂದು, ನೀ ಮುಂದು ಎಂಬಂತೆ ಪೈಪೋಟಿಗೆ ಬಿದ್ದು ಕ್ಯಾಚ್ ಡ್ರಾಪ್ ಮಾಡಿವೆ.
2025ರ IPLನಲ್ಲಿ ಕ್ಯಾಚ್ ಡ್ರಾಪ್
- ಪಂದ್ಯ- 43
- ಚಾನ್ಸ್- 432
- ಕ್ಯಾಚ್- 329
- ಡ್ರಾಪ್- 107
ಮುಂಬೈ ಇಂಡಿಯನ್ಸ್ ಬೆಸ್ಟ್.. ಚೆನ್ನೈ ಸೂಪರ್ ಫ್ಲಾಪ್.!
ಈ ಸೀಸನ್ನಲ್ಲಿ ಫೀಲ್ಡಿಂಗ್ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ಬೆಸ್ಟ್ ಎನಿಸಿದೆ. ಆದ್ರೆ, 5 ಬಾರಿಯ ಚಾಂಪಿಯನ್ ಚೆನ್ನೈ ತಂಡ ವರ್ಸ್ಟ್ ರೆಕಾರ್ಡ್ ಹೊಂದಿದೆ. ಈ ಸೀಸನ್ನಲ್ಲಿ ಚೆನ್ನೈ ಹೀನಾಯ ಸ್ಥಿತಿ ತಲುಪಿರೋದಕ್ಕೆ ಇದೇ ಮುಖ್ಯ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ 83.3ರ ಕ್ಯಾಚಿಂಗ್ ಎಫಿಶಿಯನ್ಸಿ ಹೊಂದಿದ್ರೆ, ಚೆನ್ನೈ ಕೇವಲ 64.3 ಕ್ಯಾಚಿಂಗ್ ಎಫಿಶಿಯನ್ಸಿ ಹೊಂದಿದೆ. ಇನ್ನು, ಕ್ಯಾಚಿಂಗ್ ವಿಚಾರದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ 2ನೇ ಸ್ಥಾನದಲ್ಲಿದ್ರೆ, ಆರ್ಸಿಬಿ 3ನೇ ಸ್ಥಾನದಲ್ಲಿದೆ.
ಯಾವ ತಂಡ.? ಎಷ್ಟು ಕ್ಯಾಚ್ ಡ್ರಾಪ್.?
ಮುಂಬೈ ಇಂಡಿಯನ್ಸ್ ತಂಡ 10 ಕ್ಯಾಚ್ಗಳನ್ನ ಡ್ರಾಪ್ ಮಾಡಿದ್ದು 83.3ರ ಕ್ಯಾಚಿಂಗ್ ಎಫಿಶಿಯೆನ್ಸಿ ಪರ್ಸಂಟೇಜ್ ಹೊಂದಿದೆ. ಸನ್ರೈಸರ್ಸ್ ಹೈದ್ರಾಬಾದ್ ತಂಡ 10 ಕ್ಯಾಚ್ ಡ್ರಾಪ್ ಮಾಡಿದ್ದು, 82.4ರ ಕ್ಯಾಚಿಂಗ್ ಎಫಿಶಿಯೆನ್ಸಿ ಹೊಂದಿದ್ರೆ, 9 ಕ್ಯಾಚ್ ಡ್ರಾಪ್ ಮಾಡಿರೋ ಆರ್ಸಿಬಿ 80.9, 11 ಕ್ಯಾಚ್ ಡ್ರಾಪ್ ಮಾಡಿರೋ ಕೊಲ್ಕತ್ತಾ 79.1, 11 ಕ್ಯಾಚ್ ಡ್ರಾಪ್ ಮಾಡಿರೋ ಪಂಜಾಬ್ 78.4ರ ಕ್ಯಾಚಿಂಗ್ ಎಫಿಶಿಯೆನ್ಸಿ ಹೊಂದಿವೆ.
ಯಾವ ತಂಡ.? ಎಷ್ಟು ಕ್ಯಾಚ್ ಡ್ರಾಪ್.?
ಗುಜರಾತ್ ಟೈಟನ್ಸ್ ತಂಡ 16 ಕ್ಯಾಚ್ ಡ್ರಾಪ್ ಮಾಡಿ 77.4ರ ಕ್ಯಾಚಿಂಗ್ ಎಫಿಶಿಯನ್ಸಿ ಹೊಂದಿದ್ರೆ, 73.9ರ ಕ್ಯಾಚಿಂಗ್ ಎಫಿಶಿಯೆನ್ಸಿ ಹೊಂದಿರೋ ಲಕ್ನೋ 15 ಕ್ಯಾಚ್ ಡ್ರಾಪ್ ಮಾಡಿದೆ. 13 ಕ್ಯಾಚ್ ಡ್ರಾಪ್ ಮಾಡಿರೋ ಡೆಲ್ಲಿ 71.4, 19 ಕ್ಯಾಚ್ ಡ್ರಾಪ್ ಮಾಡಿರೋ ರಾಜಸ್ಥಾನ್ 70.5, 18 ಕ್ಯಾಚ್ ಡ್ರಾಪ್ ಮಾಡಿರೋ ಚೆನ್ನೈ 64.3ರ ಕ್ಯಾಚಿಂಗ್ ಎಫಿಶಿಯೆನ್ಸಿ ಹೊಂದಿವೆ.
ಇದನ್ನೂ ಓದಿ:IPLನಲ್ಲಿ ಬೌಲರ್ಗಳಿಗೆ ಗುಡ್ನ್ಯೂಸ್.. ಆ ಸ್ವೀಟ್ ಸ್ಪಾಟ್ ಮೇಲೆ ಹದ್ದಿನ ಕಣ್ಣು!
ಕ್ಯಾಚ್ ಡ್ರಾಪ್ ಮಾಡೋದ್ರಲ್ಲಿ ಚಹಲ್ ಟಾಪರ್.!
ಈ ಸೀಸನ್ನಲ್ಲಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಅತಿ ಹೆಚ್ಚು ಕ್ಯಾಚ್ ಡ್ರಾಪ್ ಮಾಡಿದ್ದಾರೆ. 5 ಚಾನ್ಸ್ ಪೈಕಿ ಚಹಲ್ 3 ಕ್ಯಾಚ್ ಡ್ರಾಪ್ ಮಾಡಿದ್ದಾರೆ. ಚೆನ್ನೈನ ವಿಜಯ್ ಶಂಕರ್ ಕೂಡ 3 ಕ್ಯಾಚ್ ಡ್ರಾಪ್ ಮಾಡಿದ್ದಾರೆ. ಅಬ್ಧುಲ್ ಸಮದ್ 4 ಚಾನ್ಸ್ಗಳ ಪೈಕಿ 2 ಚಾನ್ಸ್ ಕೈಚೆಲ್ಲಿದ್ರೆ, ವೈಭವ್ ಅರೋರಾ 2 ಕ್ಯಾಚ್ ಡ್ರಾಪ್ ಮಾಡಿದ್ದಾರೆ.
ಕ್ಯಾಚ್ ಡ್ರಾಪ್ನಿಂದ ಜೀವದಾನ ಪಡೆದುಕೊಳ್ತಿರೋ ಬ್ಯಾಟ್ಸ್ಮನ್ ಅಬ್ಬರಿಸಿ ಬ್ಬೊಬ್ಬಿರಿತ್ತಿದ್ದಾರೆ. 5 ಕ್ಯಾಚ್ ಡ್ರಾಪ್ನ ಲಾಭ ಪಡೆದೆ ಪ್ರಿಯಾಂಶ್ ಆರ್ಯ ಶತಕ ಸಿಡಿಸಿದ್ದು. ಅಭಿಷೇಕ್ ಶರ್ಮಾಗೂ ಅಷ್ಟೇ ಶತಕ ಸಿಡಿಸಿದಾಗ 2 ಜೀವದಾನ ಸಿಕ್ಕಿದ್ದವು. ಫೀಲ್ಡರ್ಸ್ ಮಾಡ್ತಿರೋ ಈ ಯಡವಟ್ಟುಗಳು ಬೌಲರ್ಗಳಿಗೆ ಹೊರೆಯಾಗ್ತಿವೆ. ಮುಂದಾದ್ರೂ ಫೀಲ್ಡಿಂಗ್ ಕಡೆಗೆ ತಂಡಗಳು ಗಮನಹರಿಸ್ತಾವಾ?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ