Advertisment

ಕಾವೇರಿ, ಕಬಿನಿಯಿಂದ ಹೊಸ ದಾಖಲೆ.. ಈ ಬಾರಿ ಕಿರಿಕ್ ಮಾಡಂಗಿಲ್ಲ ತಮಿಳುನಾಡು..!

author-image
Ganesh
Updated On
ಕಾವೇರಿ, ಕಬಿನಿಯಿಂದ ಹೊಸ ದಾಖಲೆ.. ಈ ಬಾರಿ ಕಿರಿಕ್ ಮಾಡಂಗಿಲ್ಲ ತಮಿಳುನಾಡು..!
Advertisment
  • ರಾಜ್ಯದ ಅನ್ನದಾತರಿಗೆ ಇದು ಸಮಾಧಾನದ ಸುದ್ದಿ
  • ತಮಿಳುನಾಡಿಗೆ ಸೇರಿದ ನೀರಿನಿಂದಲೂ ವಿಶೇಷ ದಾಖಲೆ
  • ಈ ವರ್ಷ ಇರೋದಿಲ್ಲ ನೀರಿಗಾಗಿ ತಮಿಳುನಾಡಿನ ಕ್ಯಾತೆ

ಮಂಡ್ಯ: ರಾಜ್ಯದ ಅನ್ನದಾತರಿಗೆ ಜೂನ್​​ನಲ್ಲೇ ಕಾವೇರಿ ನದಿ ಗುಡ್​ನ್ಯೂಸ್ ನೀಡಿತು. ಇದೀಗ ಕಬಿನಿ ಹಾಗೂ ಕಾವೇರಿ ಮತ್ತೊಂದು ದಾಖಲೆಗೆ ಸಾಕ್ಷಿ ಆಗಿದೆ. ಜುಲೈನಲ್ಲೇ ತಮಿಳುನಾಡಿಗೆ ಬರೋಬ್ಬರಿ 100 ಟಿಎಂಸಿ ನೀರು ಹರಿದಿದೆ.

Advertisment

ತಮಿಳುನಾಡಿಗೆ ಸೇರಿದ ನೀರಿನಿಂದಲೂ ವಿಶೇಷ ದಾಖಲೆ

ಜೂನ್ ಹಾಗೂ ಜುಲೈನಲ್ಲಿ ಇಷ್ಟು ಪ್ರಮಾಣದ ನೀರು ತಮಿಳುನಾಡಿಗೆ ಇದುವರೆಗೂ ಹರಿದಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ವರ್ಷದಲ್ಲಿ 177.25 ಟಿಎಂಸಿ ನೀರು ಕೊಡಬೇಕು. ಒಂದೇ ತಿಂಗಳಿನಲ್ಲಿ ತಮಿಳುನಾಡಿಗೆ ಶೇಕಡಾ 56 ರಷ್ಟು ನೀರು ಹರಿದಿದೆ. ಜೂನ್​‌ನಲ್ಲಿ 9, ಜುಲೈನಲ್ಲಿ 31 ಟಿಎಂಸಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಕೊಡಬೇಕಿತ್ತು.

ಇದನ್ನೂ ಓದಿ: ಆಕಾಶ್ ದೀಪ್ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಶಾಕ್.. ಸ್ಟಾರ್​ ಆಲ್​ರೌಂಡರ್ ಔಟ್..!

ಈ ಎರಡು ತಿಂಗಳದ ಕೋಟಾಗಿಂತ 60 ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ. ಕೆಆರ್‌ಎಸ್ ಹಾಗೂ ಕಬಿನಿ‌ ಎರಡು ಜಲಾಶಯಗಳಿಂದ 100 ಟಿಎಂಸಿ ನೀರು ನದಿಗೆ ಬಿಡುಗಡೆ ಆಗಿದೆ. ಈಗಲೂ ತಮಿಳುನಾಡಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಎರಡು ಡ್ಯಾಂ ಭರ್ತಿ ಹಿನ್ನೆಲೆಯಲ್ಲಿ ಒಳ ಹರಿವಿನಷ್ಟೇ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈ ವರ್ಷ ಕಾವೇರಿ ನೀರಿಗಾಗಿ ತಮಿಳುನಾಡಿನ ಕ್ಯಾತೆ ತೆಗೆಯೋದಿಲ್ಲ ಎಂಬ ಆಶಾಭಾವ ಮೂಡಿದೆ.

Advertisment

ಇದನ್ನೂ ಓದಿ: ಸೇತುವೆಯಿಂದ ನದಿಗೆ ತಳ್ಳಿದ ಕೇಸ್​ಗೆ ಟ್ವಿಸ್ಟ್‌.. ಬಂಧನದ ಭೀತಿಯಲ್ಲಿ ತಾತಪ್ಪ, ಆತನ ಕುಟುಂಬಸ್ಥರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment