ಡಾಲಿ ಮದ್ವೆಯಲ್ಲಿ 100 ವರ್ಷ ಇತಿಹಾಸ ಇರೋ ಸೀರೆ ಧರಿಸಿದ್ದ ಮಾಳವಿಕ ಅವಿನಾಶ್; ಇದರ ವಿಶೇಷತೆ ಏನು?

author-image
Veena Gangani
Updated On
ಡಾಲಿ ಮದ್ವೆಯಲ್ಲಿ 100 ವರ್ಷ ಇತಿಹಾಸ ಇರೋ ಸೀರೆ ಧರಿಸಿದ್ದ ಮಾಳವಿಕ ಅವಿನಾಶ್; ಇದರ ವಿಶೇಷತೆ ಏನು?
Advertisment
  • ಧನಂಜಯ ಮದುವೆಗೆ ವಿಶೇಷವಾದ ಸೀರೆ ಧರಿಸಿ ಬಂದ ನಟಿ ಮಾಳವಿಕಾ
  • ಡಾಲಿ ಧನಂಜಯ ಹಾಗೂ ಡಾ. ಧನ್ಯತಾ ಸ್ಟಾರ್​ ನಟ-ನಟಿಯರು ಭಾಗಿ
  • ನಟಿ ಮಾಳವಿಕಾ ಧರಿಸಿದ ಕಾಂಜೀವರಂ ಸೀರೆ ಬಗ್ಗೆ ಏನ್​ ಹೇಳಿದ್ರು?

ಸ್ಯಾಂಡಲ್​ವುಡ್​ನ ನಟ ಡಾಲಿ ಧನಂಜಯ ಹಾಗೂ ಧನ್ಯತಾ ವಿವಾಹ ಸಮಾರಂಭ ಅದ್ಧೂರಿಯಾಗಿ ಮೈಸೂರಿನಲ್ಲಿ ನೆರವೇರಿದೆ. ಗುರು ಹಿರಿಯರು, ಕುಟುಂಬಸ್ಥರ ಸಮ್ಮುಖದಲ್ಲಿ ಧನ್ಯತಾ ಅವರ ಜೊತೆ ಧನಂಜಯ ಸಪ್ತಪದಿ ತುಳಿದಿದ್ದಾರೆ. ಡಾಲಿ ಧನಂಜಯ ಮದುವೆಗೆ ಸ್ಯಾಂಡಲ್​ವುಡ್​ ಸ್ಟಾರ್ ನಟ ಹಾಗೂ ನಟಿಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದರು.

ಇದನ್ನೂ ಓದಿ:ಕೆಂಪು ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ರಾಮಾಚಾರಿ ಸೀರಿಯಲ್​ ​ನಟಿ; ದೇವಿಕಾ ಭಟ್ ಬ್ಯೂಟಿಗೆ ಫ್ಯಾನ್ಸ್ ಫಿದಾ!

publive-image

ಇನ್ನೂ, ಡಾಲಿ ಧನಂಜಯ್​ ಮದುವೆಗೆ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ದಂಪತಿ ಬಂದಿದ್ದರು. ಡಾಲಿ ಮದುವೆಗೆ ನಟಿ ಮಾಳವಿಕಾ ಅವಿನಾಶ್ ಅವರು ಸುಮಾರು 100 ವರ್ಷ ಇತಿಹಾಸ ಇರೋ ಹಸಿರು ಬಣ್ಣದ ಸೀರೆ ಧರಿಸಿಕೊಂಡು ಬಂದಿದ್ದರು. ಈ ಬಗ್ಗೆ ಖುದ್ದು ಮಾಳವಿಕಾ ಅವಿನಾಶ್ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಡಾಲಿ ಮದುವೆಗೆ ಹೋಗುವ ಮುನ್ನ ಮಾಳವಿಕಾ ಅವಿನಾಶ್ ಅವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಆ ಸೀರೆಯ ವಿಶೇಷತೆ ಬಗ್ಗೆಯೂ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಮಾಳವಿಕಾ ಅವಿನಾಶ್, ನಾನು ಧರಿಸಿರೋದು ಕಾಂಜೀವರಂ ಸೀರೆ. ಆದ್ರೆ ಸುಮಾರು 100 ವರ್ಷ ಇತಿಹಾಸ ಉಳ್ಳ ಮೈಸೂರು ಸಂಸ್ಥಾನದ ಒಂದು ಸೀರೆಯ ಮರುಸೃಷ್ಟಿ ಅವತರಣಿಕೆ. ನನ್ನ ಸೀರೆಯ ಮೇಲಿನ ಲಾಂಛನ ಗಂಡಭೇರುಂಡ ಮತ್ತು ಮೈಸೂರು ಸಂಸ್ಥಾನದ ಅರಮನೆಯ ಲಾಂಛನ. ಬಹಳ ಸುಂದರವಾದ ಸೀರೆಯಿದು. ತುಂಬಾ ಕಷ್ಟ ಪಟ್ಟು ನೇಕಾರರು ನನಗಾಗಿ ಕಾಂಜೀವರಂನಲ್ಲಿ ನೈದು ಕೊಟ್ಟಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment