/newsfirstlive-kannada/media/post_attachments/wp-content/uploads/2024/12/SKODA-KYLACK.jpg)
ಸ್ಕೋಡಾದ ಹೊಸ ಕೈಲಾಕ್ ಮಾರುಕಟ್ಟೆಯಲ್ಲಿ ದೊಡ್ಡ ಡಿಮ್ಯಾಂಡ್ ಸೃಷ್ಟಿ ಮಾಡಿದೆ. ಈಗಾಗಲೇ 10 ದಿನಗಳಲ್ಲಿ 10 ಸಾವಿರ ಕೈಲಾಕ್ಗಳು ಬುಕ್ಕಿಂಗ್ ಆಗಿವೆ. ಸ್ಕೋಡಾ ಆಟೋದ ಮೊದಲ ಭಾರತೀಯ 4 ಮೀಟರ್ನ ಎಸ್ಯುವಿ. ಮಾರುತಿ ಸುಜುಕಿ, ಟಾಟಾ ನೆಕ್ಸಾನ್, ಹುಂಡೈ, ಕಿಯಾ ಸಾನೆಟ್ ಹಾಗೂ ಮಹಿಂದ್ರಾಗಳ ಎಕ್ಸ್ಯುವಿಗಳಿಗೆ ಇರುವ ಡಿಮ್ಯಾಂಡ್ನಷ್ಟೇ ಡಿಮ್ಯಾಂಡ್ ಪಡೆದುಕೊಂಡಿದೆ.
ಸ್ಕೋಡಾದ ಕೈಲಾಕ್ ಹೊಸ ಕಾರು ಡಿಸೆಂಬರ್ 2ಕ್ಕೆ ಬುಕ್ಕಿಂಗ್ ಓಪನ್ ಮಾಡಲಾಗಿತ್ತು. ಜನವರಿ 27 ರಿಂದ ಡಿಲೆವರಿ ಪ್ರಕ್ರಿಯೆ ನಡೆಯಲಿವೆ ಎಂದು ಕೂಡ ಘೋಷಿಸಲಾಗಿತ್ತು. ಅದು ಮಾತ್ರವಲ್ಲಿ ಒಂದು ಮಿತಿಯಲ್ಲಿ ಮಾತ್ರ ಕಾರ್ಗಳನ್ನು ಉತ್ಪಾದಿಸುತ್ತೇವೆ ಎಂದು ಕೂಡ ಹೇಳಿತ್ತು. ಕೇವಲ 33,333 ಗ್ರಾಹಕರಿಗೆ ಮಾತ್ರ ಈ ಕೈಲಾಕ್ ಕಾರ್ ಸಿಗಲಿದೆ ಎಂದು ಸ್ಕೋಡಾ ಘೋಷಿಸಿಕೊಂಡಿತ್ತು. ಅದರಂತೆ ಈಗಾಗಲೇ ಡಿಸೆಂಬರ್ 2 ರಿಂದ ಬುಕ್ಕಿಂಗ್ ಓಪನ್ ಆಗಿದ್ದು, ಹತ್ತೇ ದಿನಗಳಲ್ಲಿ 10 ಸಾವಿರ ಸ್ಕೋಡಾ ಕೈಲಾಕ್ ಕಾರ್ಗಳು ಬುಕ್ಕಿಂಗ್ ಆಗಿವೆ.
ಇದನ್ನೂ ಓದಿ:WhatsApp, ಇನ್ಸ್ಟಾ, ಫೇಸ್ಬುಕ್ ಬಳಕೆದಾರರಿಗೆ ಆಘಾತ.. ರಾತ್ರೋರಾತ್ರಿ ಆಗಿದ್ದೇನು..?
ಗ್ರಾಹಕರೊಂದಿಗೆ ನಿಕಟ ಸಂಪರ್ಕವನ್ನು ಹೊಂದುವ ಸಲುವಾಗಿ ಸ್ಕೋಡಾ ಭಾರತದಾದ್ಯಂತ ಡ್ರೀಮ್ ಟೂರ್ ಕೈಗೊಳ್ಳಲಿದೆ. ಡಿಸೆಂಬರ್ 13 ರಿಂದ ಚಕಾನ್ ಪ್ಲಾಂಟ್ನಿಂದ ಶುರುವಾಗಲಿರುವ ಈ ಡ್ರೀಮ್ ಟೂರ್ ಜನವರಿ 25ಕ್ಕೆ ಮುಗಿಯಲಿದೆ. ಒಟ್ಟು 70 ನಗರಗಳಲ್ಲಿ 43 ದಿನಗಳ ಕಾಲ ಈ ಡ್ರೀಮ್ ಟೂರ್ ನಡೆಯಲಿದೆ ಎಂದು ಹೇಳಲಾಗಿದೆ.
ದಕ್ಷಿಣ ಭಾಗದಲ್ಲಿ ಪುಣೆ, ಕೊಲ್ಹಾಪುರ, ಪಣಜಿ, ಮಂಗಳೂರು, ಮೈಸೂರು, ಬೆಂಗಳೂರು ಹಾಗೂ ಹೈದ್ರಾಬಾದ್, ಪಶ್ಚಿಮೊತ್ತರದಲ್ಲಿ ಮುಂಬೈ, ಸೂರತ್, ಬರೋಡಾ, ಅಹ್ಮದಾಬಾದ್ ಹಾಗೂ ದೆಹಲಿ. ನಂತರ ನಾಶಿಕ್, ನಾಗ್ಪುರ್ ಮತ್ತು ಕೊಲ್ಕೊತ್ತಾಗಳಲ್ಲಿ ಈ ಡ್ರೀಮ್ ಟೂರ್ ನಡೆಯಲಿದೆ.
ಇನ್ನು ಕೈಲಾಕ್ದ ವಿಶೇಷತೆಗಳೇನು ಎಂಬುದನ್ನು ನೋಡುವುದಾದ್ರೆ, 1.0 ಲೀಟರ್ ಟಿಎಸ್ಐ ಇಂಜಿನ್ ಹೊಂದಿದ್ದು, ಇದು 115 ಬಿಹೆಚ್ಪಿ ಮತ್ತು 178ಎನ್ಎಂ ಉತ್ಪಾದಿಸುತ್ತದೆ. ಇದರ ವೇಗದ ಗರಿಷ್ಠ ಮಿತಿ ಗಂಟೆಗೆ 188 ಕಿಮೀ ಎಂದು ಹೇಳಲಾಗುತ್ತಿದೆ. ಎಕ್ಸ್ಲೇಟರ್ 0 ಯಿಂದ 100 ಕಿಲೋಮೀಟರ್ ವೇಗ ಪಡೆದುಕೊಳ್ಳಲು ಕೇವಲ 10.5 ಸೆಕಂಡ್ ಸಾಕಾಗುತ್ತದೆ ಎಂದು ಹೇಳಲಾಗಿದೆ.
ಒಟ್ಟು ನಾಲ್ಕು ವಿಭಿನ್ನ ಶೈಲಿಯ ಕೈಲಾಕ್ ಕಾರುಗಳನ್ನು ಸ್ಕೋಡಾ ಪರಿಚಯಿಸುತ್ತಿದೆ. ಅವು ಯಾವುವು. ಬೆಲೆ ಏನು ಎಂಬುವುದನ್ನು ನೋಡುವುದಾದ್ರೆ
*ಕ್ಲಾಸಿಕ್ ಎಂಟಿ-7.89 ಲಕ್ಷ ರೂಪಾಯಿ
*ಸಿಗ್ನೇಚರ್ ಎಂಟಿ- 9.59 ಲಕ್ಷ ರೂಪಾಯಿ
*ಸಿಗ್ನೇಚರ್ ಎಟಿ-10.59 ಲಕ್ಷ ರೂಪಾಯಿ
*ಸಿಗ್ನೇಚರ್ +ಎಂಟಿ-11.40 ಲಕ್ಷ ರೂಪಾಯಿ
*ಸಿಗ್ನೇಚರ್+ಎಟಿ- 12.40 ಲಕ್ಷ ರೂಪಾಯಿ
*ಪ್ರೆಸ್ಟೀಜ್ ಎಂಟಿ- 13.35 ಲಕ್ಷ ರೂಪಾಯಿ
*ಪ್ರೆಸ್ಟೀಜ್ ಎಟಿ- 14.40 ಲಕ್ಷ ರೂಪಾಯಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ