/newsfirstlive-kannada/media/post_attachments/wp-content/uploads/2024/07/Heart-Attack.jpg)
ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಚೆನ್ನಾಗಿಯೇ ಇದ್ದ ವಿದ್ಯಾರ್ಥಿ ಇದ್ದಕ್ಕಿದ್ದಂತೆಯೇ ಸಾವನ್ನಪ್ಪಿದ ದೃಶ್ಯ ಶಾಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಜಸ್ಥಾನದಲ್ಲಿ ಈ ದುರ್ಘಟನೆ ನಡೆದಿದೆ. ದೌಸಾದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ 16 ವರ್ಷದ ಯತೇಂದ್ರ ಉಪಾಧ್ಯಾಯ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇದನ್ನೂ ಓದಿ: ಅಬ್ಬಾ! ಇದೆಂಥಾ ಅಪಘಾತ.. ಕರೆಂಟ್ ಕಂಬವೇರಿದ ಮಹೀಂದ್ರಾ ಥಾರ್!
ಯತೇಂದ್ರ ತರಗತಿಗೆ ಹೋಗುವಾಗ ಹೃದಯಾಘಾತ ಸಂಭವಿಸಿದೆ. ಅದಕ್ಕೂ ಮುನ್ನ ಯತೇಂದ್ರ ತರಗತಿಗೆಂದು ಬ್ಯಾಗ್ ಹಾಕಿ ಹೋಗುವಾಗ ತಟ್ಟನೆ ಕುಸಿದು ಬಿದ್ದಿದ್ದಾನೆ. ಕುಸಿದು ಬಿದ್ದು ಅಲ್ಲೇ ಉಸಿರು ಚೆಲ್ಲಿದ್ದಾನೆ.
ಇದನ್ನೂ ಓದಿ: ಮಗನಂತಿದ್ದ ಅಳಿಯನಿಗೆ ಇದ್ದ ಕೊರಗೇನು? ಆ ವಿಚಾರಕ್ಕೆ ಕೋರ್ಟ್ ಮೊರೆಹೋಗಿದ್ರಂತೆ B.C ಪಾಟೀಲ್ ಅಳಿಯ
ಬೇಸರದ ಸಂಗತಿ ಎಂದರೆ ಹುಟ್ಟು ಹಬ್ಬದ ಮರುದಿನವೇ ಯತೇಂದ್ರ ಉಪಾಧ್ಯಾಯ ಸಾವನ್ನಪಿರೋದನ್ನ ನೆನೆದು ಸಹೋದರರು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಇಂಥಾ ಸಾವು ನ್ಯಾಯವೇ ಎಂದು ಕಂಬನಿ ಸುರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ