ಉತ್ತರ ಪತ್ರಿಕೆ ತೋರಿಸದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗೆ ಚಾಕು ಇರಿದ ಸಹಪಾಠಿಗಳು.. ಮೂವರು ಅರೆಸ್ಟ್​

author-image
AS Harshith
Updated On
ಉತ್ತರ ಪತ್ರಿಕೆ ತೋರಿಸದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗೆ ಚಾಕು ಇರಿದ ಸಹಪಾಠಿಗಳು.. ಮೂವರು ಅರೆಸ್ಟ್​
Advertisment
  • 10ನೇ ತರಗತಿಯ ಲಿಖಿತ ಪರೀಕ್ಷೆಯ ವೇಳೆ ನಡೆದ ಘಟನೆ
  • ಉತ್ತರ ಪತ್ರಿಕೆ ತೋರಿಸದ್ದಕ್ಕೆ ಸರಿಯಾಗಿ ಥಳಿಸಿ ಚೂರಿ ಇರಿದ ಮೂವರು
  • ವಿದ್ಯಾರ್ಥಿಗೆ ಏನಾಗಿದೆ? ಸದ್ಯ ಆತನ ಪರಿಸ್ಥಿತಿ ಹೇಗಿದೆ? ಈ ಸ್ಟೋರಿ ಓದಿ

10ನೇ ತರಗತಿಯ ಲಿಖಿತ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಯನ್ನು ತೋರಿಸಲು ನಿರಾಕರಿಸಿದ ವಿದ್ಯಾರ್ಥಿಗೆ ಮೂವರು ಸಹಪಾಠಿಗಳು ಚೂರಿ ಇರಿದ ಘಟನೆ ಬೆಳಕಿಗೆ ಬಂದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾವ ಶಾಲೆ? ಘಟನೆ ಎಲ್ಲಿಯದ್ದು?

ಮಹಾರಾಷ್ಟ್ರದ ತಾಣೆ ಜಿಲ್ಲೆಯ ಭೀವಂಡಿಯಲ್ಲಿ ಮಂಗಳವಾರದಂದು ಈ ಘಟನೆ ನಡೆದಿದೆ. ಅಲ್ಲಿನ ಸ್ಥಳೀಯ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿಗಳಿಗೆ ಪರೀಕ್ಷೆಯಲ್ಲಿ ಉತ್ತರ ತೋರಿಸಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದಿದ್ದಾರೆ.

ಪೊಲೀಸ್​ ಅಧಿಕಾರಿಯೊಬ್ಬರು ಈ ಘಟನೆ ಬಗ್ಗೆ ವಿವರಿಸಿದ್ದು, ‘ಸಂತ್ರಸ್ತ ಪರೀಕ್ಷೆ ಸಮಯದಲ್ಲಿ ತನ್ನ ಸಹಪಾಠಿಗಳಿಗೆ ಉತ್ತರ ಪತ್ರಿಕೆಯನ್ನು ತೋರಿಸಲು ನಿರಾಕರಿಸುತ್ತಾನೆ. ಇದರಿಂದ ಕೋಪಗೊಂಡ ಮೂವರು ಸಹಪಾಠಿಗಳು ಪರೀಕ್ಷೆ ಹಾಲ್​ನಿಂದ ಹೊರಬಂದ ತಕ್ಷಣ ಆತನನ್ನು ಥಳಿಸಿದ್ದಾರೆ. ಬಳಿಕ ಚೂರಿಯಿಂದ ಚುಚ್ಚಿದ್ದಾರೆ. ಗಾಯಗೊಂಡ ಸಂತ್ರಸ್ತ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಡಿಸ್ಚಾರ್ಜ್​ ಆಗಿದ್ದಾನೆ’ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 50ನೇ ವಯಸ್ಸಿಗೆ ತಂದೆಯಾದ ಪಂಜಾಬ್​ ಸಿಎಂ! ಮನೆಗೆ ಲಕ್ಷ್ಮೀಯನ್ನ ಬರಮಾಡಿಕೊಂಡ ಭಗವಂತ್ ಮಾನ್

ಕೃತ್ಯವೆಸಗಿದ ಮೂವರು ವಿದ್ಯಾರ್ಥಿಗಳ ವಿರುದ್ಧ ಭೀವಂಡಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಐಪಿಸಿ ಸೆಕ್ಷನ್​ 324 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment