/newsfirstlive-kannada/media/post_attachments/wp-content/uploads/2024/12/bbk11116.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 61ನೇ ದಿನಕ್ಕೆ ಕಾಲಿಟ್ಟು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ಈ ಇಡೀ ವಾರ ಬಿಗ್ಬಾಸ್ ಸಾಮ್ರಾಜ್ಯವಾಗಿ ಬದಲಾಗಿತ್ತು. ಇದರ ಮಧ್ಯೆ ಬಿಗ್ಬಾಸ್ ಸಾಮ್ರಾಜ್ಯದಿಂದ ಆಚೆ ಹೋಗಲು 7 ಪ್ರಜೆಗಳು ನಾಮಿನೇಟ್ ಆಗಿದ್ದರು.
ಇದನ್ನೂ ಓದಿ:ನಾವು ಸತ್ತಿಲ್ಲ, ಸೋತಿದ್ದೀವಿ ಅಷ್ಟೇ.. ಚನ್ನಪಟ್ಟಣದಲ್ಲಿ ಭಾವುಕರಾದ ನಿಖಿಲ್ ಕುಮಾರಸ್ವಾಮಿ; ಹೇಳಿದ್ದೇನು?
ನಿನ್ನೆ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಇಬ್ಬರನ್ನು ಸೇಫ್ ಮಾಡಲಾಗಿದೆ. ಇಂದಿನ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಿಂದ ಓರ್ವ ಸ್ಪರ್ಧಿ ಆಚೆ ಹೋಗಲಿದ್ದಾರೆ. ಇನ್ನು, ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಗೋಲ್ಡ್ ಸುರೇಶ್ ಹಾಗೂ ತ್ರೀವಿಕ್ರಮ್ನನ್ನು ಸೇಫ್ ಮಾಡಿದ್ದಾರೆ.
ಪ್ರತಿ ವಾರದಂತೆ ಈ ವಾರ ಕೂಡ ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಆದರೆ ಈ ಬಾರಿ ಕೊಂಚ ವಿಭಿನ್ನ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ತ್ರೀವಿಕ್ರಮ್, ಶಿಶಿರ್, ಭವ್ಯಾ, ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಾಮಿನೇಟ್ ಆಗಿದ್ದರು. ಇವರಲ್ಲಿ ಇಬ್ಬರು ಸೇಪ್ ಆಗಿದ್ದಾರೆ. ಶೋಭಾ ಶೆಟ್ಟಿ, ಶಿಶಿರ್, ಭವ್ಯಾ, ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ಈ ಐದು ಜನ ಇನ್ನೂ ನಾಮಿನೇಷನ್ ಜಾಗದಲ್ಲೇ ಇದ್ದಾರೆ.
ಇನ್ನು, ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಹೆಸರುಗಳು ಓಡಾಡುತ್ತಿವೆ. ಇಂದು ರಿಲೀಸ್ ಆದ ಪ್ರೋಮೋದಲ್ಲಿ ಶೋಭಾ ಶೆಟ್ಟಿ ಆಚೆ ಹೋಗುತ್ತೇನೆ ಅಂತ ಹೇಳಿದ್ದರು. ಇದರ ಮಧ್ಯೆ ಐಶ್ವರ್ಯ ಸಿಂಧೋಗಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಐಶ್ವರ್ಯ ಸಿಂಧೋಗಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೆಟ್ಟಿಗರು ತುಂಬಾ ಚೆನ್ನಾಗಿ ಆಡಿದ್ದೀರಿ, ಆದರೆ ಇಷ್ಟು ಬೇಗ ಆಚೆ ಬರ್ತಿರಾ ಅಂತ ಅಂದುಕೊಂಡಿರಲಿಲ್ಲ ಅಂದು ಬೇಸರ ಹೊರ ಹಾಕಿದ್ದಾರೆ. ಮತ್ತೊಂದು ಕಡೆ ಭವ್ಯಾ ಗೌಡ ಅವರ ಫೋಟೋಗೂ ಕೂಡ ಮಿಸ್ ಯೂ ಭವ್ಯಾ ಅಕ್ಕ ಅಂತ ಕಾಮೆಂಟ್ಸ್ ಹಾಕಿದ್ದಾರೆ. ಆದರೆ ಇಂದಿನ ಸಂಚಿಕೆಯಲ್ಲಿ ಈ ವಾರ ಬಿಗ್ಬಾಸ್ ಮನೆಯಿಂದ ಯಾರು ಆಚೆ ಬರಲಿದ್ದಾರೆ ಅಂತ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ