/newsfirstlive-kannada/media/post_attachments/wp-content/uploads/2024/08/wayanad-26.jpg)
ವಯನಾಡು ಭೂಕುಸಿತದಲ್ಲಿ ನೌಫಲ್​ ತನ್ನ 11 ಮಂದಿಯನ್ನು ಕಳೆದುಕೊಂಡಿದ್ದಾರೆ. ಪತ್ನಿ ಸಜ್ನಾ ಮತ್ತು 3 ಮಕ್ಕಳು, ತಂದೆ ಕುಂಞಮೊಯ್ತೀನ್​, ತಾಯೊ ಆಯೆಷಾ, ಸಹೋದರ ಮನ್ಸೂರ್​​ ಆತನ ಪತ್ನಿ ಮುಹ್ಸಿನಾ ಮತ್ತು 3 ಮಕ್ಕಳು ನಾಪತ್ತೆಯಾಗಿದ್ದಾರೆ. ಅವರನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಓಮನ್​ನಲ್ಲಿ ಕೆಲಸ ಮಾಡುತ್ತಿದ್ದ ಕಳತಿಂಕಲ್​ ನೌಫಲ್​ಗೆ ಭೂಕುಸಿತ ವಿಚಾರವನ್ನು ಆತನ ಕುಟುಂಬಸ್ಥರು ಫೋನ್​ ಮಾಡಿ ತಿಳಿಸುತ್ತಾರೆ. ಕೂಡಲೇ ವಿದೇಶದಿಂದ ತಾಯ್ನಾಡಿಗೆ ಓಡಿ ಬರುತ್ತಾರೆ. ಆದರೆ ವಯನಾಡಿಗೆ ಬಂದಾಗ ತನ್ನ ಕುಟುಂಬದ 11 ಮಂದಿ ನಾಪತ್ತೆಯಾಗಿರುವ ವಿಚಾರ ತಿಳಿಯುತ್ತದೆ.
/newsfirstlive-kannada/media/post_attachments/wp-content/uploads/2024/08/wayanad-8.jpg)
ಇದನ್ನೂ ಓದಿ: ಕಣ್ಣೆದುರೇ ಸಾಲು ಸಾಲು ಹೆಣಗಳ ರಾಶಿ.. ಒಂದಾದ ಮೇಲೆ ಒಂದು ಬಂದಂತೆ ಗುರುತಿಸೋ ಕೆಲಸ
ಭೂಕುಸಿತದಲ್ಲಿ ನೌಫಲ್​ ಪೋಷಕರ ಮೃತದೇಹಗಳು, ದೊಡ್ಡ ಮಗಳು ನಫ್ಲಾ ನಸ್ರೀನ್​, ಸಹೋದರ ಮನ್ಸೂರ್​ ಪತ್ನಿ ಮುಹ್ಸಿನಾ ಮತ್ತು ಐಶಾಮಾನ ಮೃತದೇಹಳು ಮಾತ್ರ ಸಿಕ್ಕಿವೆ. ಉಳಿದವರ ಮೃತದೇಹ ಇನ್ನೂ ಸಿಕ್ಕಿಲ್ಲ. ಪತ್ನಿ ಸಜ್ನಾ, ಇನ್ನಿಬ್ಬರು ಮಕ್ಕಳು, ಸಹೋದರನ ಮೃತದೇಗ ಪತ್ತೆಯಾಗಿಲ್ಲ. ಅತ್ತ ತನ್ನವರೆಲ್ಲರನ್ನು ಕಳೆದುಕೊಂಡು ನೌಫಲ್​ ಕಣ್ಣೀರಿನಲ್ಲೇ ದಿನದೂಡಿವಂತಾಗಿದೆ.
ಮೆಪ್ಪಾಡಿಯ ಪರಿಹಾರ ಶಿಬಿರದಲ್ಲಿ ತಂಗುತ್ತಿದ್ದ ನೌಫಲ್​ ನಿನ್ನೆ ತನ್ನ ಕುಟುಂಬದವರ ಮನೆ ಸೇರಿದ್ದಾರೆ. ತನ್ನ ಮನೆಯವರ ಮೃತದೇಹ ಸಿಗುತ್ತದೆ ಎಂದು ಕಾಯುತ್ತಿದ್ದ ನೌಫಲ್​ ಅತ್ತ ಪತ್ನಿ ಮಕ್ಕಳ ಮೃತದೇಹವನ್ನು ಕೊನೆ ಕ್ಷಣದಲ್ಲಿ ನೋಡಲಾಗದೆ ದುಃಖದಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2024/07/WAYANADU-LANDLSIDE-RAIN.jpg)
ಇದನ್ನೂ ಓದಿ: ಪುಟ್ಟ ಗ್ರಾಮದಲ್ಲೊಂದು ಗುಬ್ಬಿ ಗೂಡಿನಂತ ಟೀ ಅಂಗಡಿ; ಆದ್ರೆ ಗಳಿಸಿದ್ದು ಲಕ್ಷ, ಲಕ್ಷ; ಸಾಧ್ಯವಾಗಿದ್ದು ಹೇಗೆ?
ವಯನಾಡು ಭೂಕುಸಿತದ ಭೀಕರತೆಗೆ ಸುಮಾರು 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಭೀಕರೆ ಮಾತ್ರ ಕೇರಳಿಗರ ಮನದಲ್ಲಿ ಮಾಸದಂತೆ ಘಾಯ ಮಾಡಿ ಹೋಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us