newsfirstkannada.com

ಡಾಬಾ ಬಳಿ ಊಟಕ್ಕೆ ನಿಲ್ಲಿಸಿದ್ದ ಬಸ್​ ಮೇಲೆ ಉರುಳಿ ಬಿದ್ದ ಟ್ರಕ್​.. ಸ್ಥಳದಲ್ಲೇ 11 ಸಾವು

Share :

Published May 26, 2024 at 10:28am

    ಘಟನೆಯಲ್ಲಿ ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕ

    ತಡರಾತ್ರಿ ಊಟ ಮಾಡಲೆಂದು ಡಾಬಾ ಬಳಿ ನಿಲ್ಲಿಸಿದ್ದ ಬಸ್​

    ಕಲ್ಲು ತುಂಬಿಕೊಂಡು ಬಂದ ಟ್ರಕ್​, ಬಸ್ ಮೇಲೆ ಬಿದ್ದಿದ್ದು ಹೇಗೆ?

ಲಕ್ನೋ: ಡಾಬಾ ಬಳಿ ನಿಂತಿದ್ದ ಬಸ್​ ಮೇಲೆ ಕಲ್ಲು ತುಂಬಿದ ಟ್ರಕ್​ ಉರುಳಿ ಬಿದ್ದ ಪರಿಣಾಮ 11 ಜನ ಸಾವನ್ನಪ್ಪಿದ್ದು 10 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಖುತಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಗೇಮಿಂಗ್‌ ಝೋನ್​ನಲ್ಲಿ ಅಗ್ನಿ ದುರಂತ ಕೇಸ್​; ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 32ಕ್ಕೆ ಏರಿಕೆ

ಈ ಘಟನೆಯು ರಾತ್ರಿ 11 ಗಂಟೆ ಸುಮಾರಿಗೆ ನಡೆದಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರೆಲ್ಲ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯವರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಕ್ಕಳ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ.. ಪ್ರಪಂಚ ನೋಡೋ ಮುನ್ನವೇ 7 ನವಜಾತ ಶಿಶುಗಳು ಸಾವು

ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಭಕ್ತರು ಸೀತಾಪುರ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಜೇಥಾ ಗ್ರಾಮದ ನಿವಾಸಿಗಳು. ಉತ್ತರಾಖಂಡದಲ್ಲಿನ ಪೂರ್ಣಗಿರಿಗೆ ಬಸ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ಊಟಕ್ಕೆಂದು ಹೆದ್ದಾರಿ ಬಳಿ ಇರುವ ಡಾಬಾವೊಂದರ ಬಳಿ ನಿಲ್ಲಿಸಿದ್ದಾರೆ. ಹೀಗಾಗಿ ಕೆಲವರು ಊಟಕ್ಕೆ ಹೋಗಿದ್ದರೇ, ಇನ್ನು ಕೆಲವರು ಬಸ್ಸಿನಲ್ಲೇ ಕುಳಿತ್ತಿದ್ದಾರೆ. ಇದೇ ವೇಳೆ ಕಲ್ಲುಗಳನ್ನು ತುಂಬಿಕೊಂಡು ವೇಗವಾಗಿ ಬಂದ ಟ್ರಕ್​ ಏಕಾಏಕಿ ಡಿಕ್ಕಿ ಹೊಡೆದು ಬಸ್​ ಮೇಲೆ ಉರುಳಿ ಬಿದ್ದಿದೆ. ಪರಿಣಾಮ 11 ಜನ ಸಾವನ್ನಪ್ಪಿದ್ದು 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾಬಾ ಬಳಿ ಊಟಕ್ಕೆ ನಿಲ್ಲಿಸಿದ್ದ ಬಸ್​ ಮೇಲೆ ಉರುಳಿ ಬಿದ್ದ ಟ್ರಕ್​.. ಸ್ಥಳದಲ್ಲೇ 11 ಸಾವು

https://newsfirstlive.com/wp-content/uploads/2024/05/UP_ACCIDENT_BUS.jpg

Load More