ಅಮೆರಿಕಾದಲ್ಲಿ ಮತ್ತೊಂದು ಭೀಕರ ಕೃತ್ಯ.. ನೈಟ್‌ಕ್ಲಬ್‌ನಲ್ಲಿ 11 ಜನರಿಗೆ ಗುಂಡಿಕ್ಕಿ ಅಟ್ಟಹಾಸ

author-image
admin
Updated On
ಅಮೆರಿಕಾದಲ್ಲಿ ಮತ್ತೊಂದು ಭೀಕರ ಕೃತ್ಯ.. ನೈಟ್‌ಕ್ಲಬ್‌ನಲ್ಲಿ 11 ಜನರಿಗೆ ಗುಂಡಿಕ್ಕಿ ಅಟ್ಟಹಾಸ
Advertisment
  • ಹೊಸ ವರ್ಷದ ಸಂಭ್ರಮದಲ್ಲಿರುವ ಅಮೆರಿಕಾಗೆ ಬಿಗ್ ಶಾಕ್‌
  • ಕ್ವೀನ್ಸ್‌ನ ನೈಟ್‌ಕ್ಲಬ್‌ನಲ್ಲಿ ದಾಳಿಕೋರನಿಂದ ಗುಂಡಿನ ದಾಳಿ
  • ನೈಟ್‌ಕ್ಲಬ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆ ಆಗುವ ಸಾಧ್ಯತೆ

ನ್ಯೂಯಾರ್ಕ್‌: ಹೊಸ ವರ್ಷದ ಸಂಭ್ರಮದಲ್ಲಿರುವ ಅಮೆರಿಕಾದಲ್ಲಿ ದಾಳಿಕೋರರ ಅಟ್ಟಹಾಸ ಮುಂದುವರಿದಿದೆ. ನ್ಯೂ ಇಯರ್ ಮೊದಲ ದಿನವೇ 2ನೇ ಬಾರಿ ಭಯಾನಕ ದಾಳಿ ಮಾಡಲಾಗಿದ್ದು, ಬರೋಬ್ಬರಿ 11 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಅನ್ನೋ ವರದಿಯಾಗಿದೆ.

ಇದನ್ನೂ ಓದಿ: ನ್ಯೂ ಇಯರ್​​ ಪಾರ್ಟಿಯಂದೇ 10 ಜನರ ಜೀವ ತೆಗೆದ ಕೇಸ್​ಗೆ ಬಿಗ್​ ಟ್ವಿಸ್ಟ್​​; ಅಸಲಿಗೆ ನಡೆದಿದ್ದೇ ಬೇರೆ! 

ನ್ಯೂಯಾರ್ಕ್‌ ನೈಟ್‌ಕ್ಲಬ್‌ನಲ್ಲಿ ದಾಳಿಕೋರ ಅಟ್ಟಹಾಸ ಮೆರೆದಿದ್ದಾನೆ. ಕ್ವೀನ್ಸ್‌ನ ಅಮಾಜುರಾ ನೈಟ್‌ಕ್ಲಬ್‌ನಲ್ಲಿ ಈ ಶೂಟಿಂಗ್ ನಡೆದಿದೆ. ಜನವರಿ 1 ರಂದು ರಾತ್ರಿ 11:45ರ ಸುಮಾರಿಗೆ ಈ ರಾಕ್ಷಸ 11 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.


">January 2, 2025

ನೈಟ್‌ಕ್ಲಬ್‌ ಮೇಲೆ ಗುಂಡಿನ ದಾಳಿದ ಇಬ್ಬರು ಶಂಕಿತರು ತಲೆಮರೆಸಿಕೊಂಡಿದ್ದಾರೆ. ನೈಟ್‌ ಕ್ಲಬ್‌ಗೆ ಕೂಡಲೇ ಪೊಲೀಸರು, ಆ್ಯಂಬುಲೆನ್ಸ್‌ಗಳು ಆಗಮಿಸಿದ್ದು ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಹೊಸ ವರ್ಷದ ದಿನವೇ ಅಮೆರಿಕಾದಲ್ಲಿ ನಡೆದ 2ನೇ ದಾಳಿ ಇದಾಗಿದ್ದು, ನೈಟ್‌ಕ್ಲಬ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment