newsfirstkannada.com

ಸಣ್ಣ ಮಗುವಿನ ಮೇಲೆ 11 ವರ್ಷ ಬಾಲಕನಿಂದ ಅತ್ಯಾಚಾರ; ಯಾರಿಗೂ ಹೇಳದಂತೆ ಬೆದರಿಕೆ!

Share :

Published April 3, 2024 at 5:59am

    ಬಾಲಕಿ ಮೇಲೆ ನಡೆದ ದೌರ್ಜನ್ಯ ಬಯಲಿಗೆ ಬಂದಿದ್ದು ಹೇಗೆ?

    ಚಪ್ಪಲಿಯಿಂದ ಹೊಡೆದು ವಿಷ್ಯ ಹೇಳದಂತೆ ಬೆದರಿಕೆ ಹಾಕಿದ್ದ

    ಮನೆ ಮುಂದೆ ಆಡುವಾಗ ಆಸೆ ತೋರಿಸಿ ಕರೆದುಕೊಂಡು ಹೋದ

ಗಾಂಧಿನಗರ: 11 ವರ್ಷದ ಬಾಲಕನೊಬ್ಬ ತಮ್ಮ ಪಕ್ಕದ ಮನೆಯ 4 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪ ಮಾಡಲಾಗಿದೆ. ಈ ಘಟನೆಯು ಅಥ್ವಾ ಪ್ರದೇಶದ ರುದರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮನೆಯ ಮುಂದೆ ಆಟ ಆಡುವಾಗ ಬಾಲಕಿಗೆ ಆಮಿಷವೊಡ್ಡಿ ಮನೆಯೊಳಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೇ ನಡೆದಿರುವ ಘಟನೆಯನ್ನು ಯಾರ ಮುಂದೆ ಹೇಳಬಾರದು ಎಂದು ಬಾಲಕಿಗೆ ಚಪ್ಪಲಿಯಿಂದ ಹೊಡೆದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಬಾಲಕನ ಬೆದರಿಕೆಯಿಂದ ಭಯಬಿದ್ದ ಬಾಲಕಿ ಮೌನವಾಗಿಯೇ ಇದ್ದಳು. ಆದರೆ, ಮರುದಿನ ಆಕೆಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಪರೀಕ್ಷೆ ಮಾಡಿದ ವೈದ್ಯರು ಆಘಾತಕಾರಿ ಸತ್ಯ ಬಹಿರಂಗಪಡಿಸಿದ್ದಾರೆ. ಬಾಲಕಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಳೆ ಎಂದು ಹೇಳಿದ್ದಾರೆ. ಈ ಬಗ್ಗೆ ಪೋಷಕರು ಬಾಲಕಿಯನ್ನು ಪ್ರಶ್ನೆ ಮಾಡಿದಾಗ ನಡೆದಿದ್ದನ್ನೆಲ್ಲ ಬಾಯ್ಬಿಟ್ಟಿದ್ದಾಳೆ. ಇನ್ನು ಈ ಸಂಬಂಧ ಬಾಲಕಿಯ ಫೋಷಕರು ಅಥ್ವಾ ಪ್ರದೇಶದ ರುದರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕೇಸ್ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಣ್ಣ ಮಗುವಿನ ಮೇಲೆ 11 ವರ್ಷ ಬಾಲಕನಿಂದ ಅತ್ಯಾಚಾರ; ಯಾರಿಗೂ ಹೇಳದಂತೆ ಬೆದರಿಕೆ!

https://newsfirstlive.com/wp-content/uploads/2023/07/Crime-News_1.jpg

Load More