/newsfirstlive-kannada/media/post_attachments/wp-content/uploads/2025/04/udupi.jpg)
ಉಡುಪಿ: ತನ್ನಿಮಾನಿಗ ದೈವದ ರೂಪದಲ್ಲಿ ಬಾಲಕನೊಬ್ಬ ಹೆಜ್ಜೆ ಹಾಕಿದನ್ನು ನೋಡಿದ ದೈವ ಭಕ್ತರು ಅಚ್ಚರಿಗೊಂಡಿದ್ದಾರೆ. ಪ್ರತಿಷ್ಠಾ ವರ್ಧಂತಿ ಉತ್ಸವದಲ್ಲಿ 11 ವರ್ಷದ ಬಾಲಕ ಸಮರ್ಥ್ ಎಂಬಾತ ತನ್ನಿಮಾನಿಗ ದೈವದ ರೂಪದಲ್ಲಿ ಹೆಜ್ಜೆ ಹಾಕಿದ್ದಾನೆ.
ಇದನ್ನೂ ಓದಿ:ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್ಬಾಸ್ ಖ್ಯಾತಿಯ ಭವ್ಯಾ ಗೌಡ; ಯಾವ ಸೀರಿಯಲ್?
ಹೌದು, ದೈವಗಳ ಸನ್ನಿಧಾನ ಮೊಗೇರ ಸಮುದಾಯಕ್ಕೆ ಸೇರಿದ ದೈವಸ್ಥಾನದಲ್ಲಿ ವರ್ಧಂತ್ಯುತ್ಸವ ನಡೆದಿದೆ. ತನ್ನಿಮಾನಿಗ ಹೆಣ್ಣು ದೈವ ಪಾತ್ರಿಯಾಗಿ ಬಾಲಕ ಸಮರ್ಥ್ ಗಗ್ಗರ ಕಟ್ಟಿದ್ದ. (ಗಗ್ಗರ ಎಂದರೆ ದೈವದ ಕುಣಿತದ ಸಮಯದಲ್ಲಿ ಕಾಲಿಗೆ ಕಟ್ಟುವ ಗೆಜ್ಜೆಯ ತರಹದ ವಸ್ತುವಾಗಿದೆ.) ಇದೇ ಇದೇ ವೇಳೆ ಬಾಲಕ ಸಮರ್ಥ್ನ ಹೆಣ್ಣು ದೈವ ಪಾತ್ರಕ್ಕೆ ದೈವಭಕ್ತರು ತಲೆಬಾಗಿದ್ದಾರೆ.
ಇನ್ನೂ, ಬಾಲಕ ಸಮರ್ಥ್ ಕಾರ್ಕಳ ತಾ.ಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 6ನೇ ತರಗತಿಯಲ್ಲಿ ಓದುತ್ತಿದ್ದಾನೆ ಸಮರ್ಥ್. ಈ ಹಿಂದೆ ಬಾಲಕನ ಅಜ್ಜ ಮೋನು ಪಾಣರ ದೈವ ನರ್ತನ ಮಾಡುತ್ತಿದ್ದರು. ಬಾಲಕ ಸಮರ್ಥ್ ತಂದೆ ಹರೀಶ್ ಕೂಡ ದೈವ ನರ್ತಕರಾಗಿದ್ದರು. ಇದೀಗ ಮೂರನೇ ತಲೆಮಾರಿನ ಬಾಲಕ ಸಮರ್ಥ್ನಿಂದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ