/newsfirstlive-kannada/media/post_attachments/wp-content/uploads/2025/06/INDIANS-1.jpg)
ಇರಾನ್-ಇಸ್ರೇಲ್ ಆಗಸದಲ್ಲಿ ನಕ್ಷತ್ರಗಳೇ ಕಾಣ್ತಿಲ್ಲ.. ಬದಲಾಗಿ ಮಿಸೈಲ್‌ಗಳೇ ಝೇಂಕರಿಸುತ್ತಿವೆ. ಯಾವಾಗ ಏನ್ ಬೇಕಾದ್ರೂ ಆಗಬಹುದಾದ ಆತಂಕ ಮನೆ ಮಾಡಿದೆ. ಯುದ್ಧೋನ್ಮಾದ ಮೇಳೈಸುತ್ತಿರೋ ಇರಾನ್ ಮತ್ತು ಇಸ್ರೇಲ್ನಲ್ಲಿ ಸಿಲುಕಿರೋ ಭಾರತೀಯರಿಗೆ ಆತಂಕದ ಕಾರ್ಮೋಡ ಕವಿದಿದೆ.
ಇದನ್ನೂ ಓದಿ: ಇಸ್ರೇಲ್ನ ಮತ್ತೆ ಕೆಣಕಿದ ಇರಾನ್.. ಟ್ರಂಪ್ ವಾರ್ನಿಂಗ್ ಬೆನ್ನಲ್ಲೇ ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ..
ತಾಯ್ನಾಡಿಗೆ ವಾಪಸ್ ಆಗಲು ಮನ ಹಂಬಲಿಸುತ್ತಿದೆ. ಇದಕ್ಕೆ ಸ್ಪಂದಿಸಿದ ಭಾರತ ಸರ್ಕಾರ ಸ್ಥಳಾಂತರ ಪ್ರಕ್ರಿಯೆಯನ್ನು ಬಿರುಸುಗೊಳಿಸಿದ್ದು, ಭಾರತೀಯರ ರಕ್ಷಣೆಗೆ ಆಪರೇಷನ್ ಸಿಂಧೂ ಹೆಸರನ್ನಿಟ್ಟಿದೆ. ಇದೀಗ ಆಪರೇಷನ್ ಸಿಂಧೂನ ಮೊದಲ ಬ್ಯಾಚ್ ದೆಹಲಿಗೆ ಬಂದಿಳಿದಿದೆ.
ಇರಾನ್ನಲ್ಲಿ ಸುಮಾರು 10 ಸಾವಿರ ಭಾರತೀಯರಿದ್ದಾರೆ. ಇದರಲ್ಲಿ 1500, 2000 ವಿದ್ಯಾರ್ಥಿಗಳು.. ಈಗಾಗಲೇ ಊರ್ಮಿ ಯುನಿವರ್ಸಿಟಿಯ 110 ವಿದ್ಯಾರ್ಥಿಗಳ ಭೂ ಮಾರ್ಗವಾಗಿ ಇರಾನ್ನಿಂದ ಅರ್ಮೇನಿಯಾವನ್ನು ಸುರಕ್ಷಿತವಾಗಿ ತಲುಪಿಸಲಾಗಿತ್ತು. ಅವರೆಲ್ಲ ಇದೀಗ ದೆಹಲಿ ತಲುಪಿದ್ದಾರೆ.
ಇದನ್ನೂ ಓದಿ: ವಿಶ್ವದ ಬೆಸ್ಟ್ ಏರ್ಲೈನ್ ಯಾವುದು..? ಕತಾರ್ ಏರ್ವೇಸ್ಗೆ ಸಾಲು ಸಾಲು ಪ್ರಶಸ್ತಿಗಳು
ಅರ್ಮೇನಿಯಾದ ಯೆರೆವಾನ್ ಏರ್ಪೋರ್ಟ್ನಿಂದ ವಿಶೇಷ ಇಂಡಿಗೋ ವಿಮಾನದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ಮೊದಲ ತಂಡದಲ್ಲಿರುವ ಬಹುತೇಕರು ಜಮ್ಮು-ಕಾಶ್ಮೀರ ಭಾಗದವರಾಗಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನ, ಭಾರತದತ್ತ ಹೊರಟಿದೆ. ಕೆಲವೇ ಕ್ಷಣಗಳಲ್ಲಿ ಮೊದಲ ತಂಡ ದೆಹಲಿಗೆ ಆಗಮಿಸಲಿದೆ.
ಇರಾನ್, ಅರ್ಮೇನಿಯಾ ಸರ್ಕಾರಕ್ಕೆ ಭಾರತ ಧನ್ಯವಾದ
ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಅನುಕೂಲ ಮಾಡಿಕೊಟ್ಟ ಇರಾನ್ ಮತ್ತು ಅರ್ಮೇನಿಯಾ ಸರ್ಕಾರಕ್ಕೆ ಭಾರತ ಸರ್ಕಾರ ಕೃತಜ್ಞತೆ ಹೇಳಿದೆ.
ಇದನ್ನೂ ಓದಿ: ಇಸ್ರೇಲ್ನ ಮತ್ತೆ ಕೆಣಕಿದ ಇರಾನ್.. ಟ್ರಂಪ್ ವಾರ್ನಿಂಗ್ ಬೆನ್ನಲ್ಲೇ ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ