117 ಡ್ರೋನ್​​.. ಟ್ರಕ್​​ಗಳಲ್ಲಿ ಅಡಗಿದ್ದ ಬೇಟೆಗಾರರು; ರಷ್ಯಾದ ಮೇಲೆ ಉಕ್ರೇನ್ ಪುಷ್ಪಾ ಸ್ಟೈಲ್‌ ಅಟ್ಯಾಕ್‌ ಹೇಗಿತ್ತು?

author-image
admin
Updated On
117 ಡ್ರೋನ್​​.. ಟ್ರಕ್​​ಗಳಲ್ಲಿ ಅಡಗಿದ್ದ ಬೇಟೆಗಾರರು; ರಷ್ಯಾದ ಮೇಲೆ ಉಕ್ರೇನ್ ಪುಷ್ಪಾ ಸ್ಟೈಲ್‌ ಅಟ್ಯಾಕ್‌ ಹೇಗಿತ್ತು?
Advertisment
  • ಫೈಟರ್‌ ಜೆಟ್‌, ಬಾಂಬರ್‌ಗಳನ್ನೇ ಟಾರ್ಗೆಟ್‌ ಮಾಡಿದ್ದ ಉಕ್ರೇನ್‌
  • 41 ಫೈಟರ್‌ ಜೆಟ್‌ ಭಸ್ಮ! ಪುಷ್ಪ ಸ್ಟೈಲ್‌ನಲ್ಲಿ ಅಟ್ಯಾಕ್‌, ಏನಿದು ಪುಷ್ಪ ಸ್ಟೈಲ್‌?
  • ರಷ್ಯಾ ಏರ್‌ ಡಿಫೆನ್ಸ್‌ ಫೇಲ್‌, ಶಕ್ತಿಗಿಂತ ಯುಕ್ತಿ ಮುಖ್ಯ ಅಂತಾ ಸಾರಿತು

ಯುದ್ಧ ಶುರುವಾಯ್ತು ಅಂತಾದ್ರೆ ಯಾರು ಬಲಿಷ್ಠ? ಯಾರು ದುರ್ಬಲ? ಅನ್ನೋದು ಲೆಕ್ಕಕ್ಕೆ ಬರೋದಿಲ್ಲ. ಯಾರು ಯುಕ್ತಿಯನ್ನ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ತಾರೋ ಅವರು ಮೇಲಿಗೈ ಸಾಧಿಸೋದು ಗ್ಯಾರಂಟಿ. ಅಷ್ಟಕ್ಕೂ ನಾವು ಈ ಮಾತನ್ನ ಹೇಳೋದಕ್ಕೆ ಕಾರಣ ರಷ್ಯಾ ಮೇಲೆ ಉಕ್ರೇನ್‌ ಮಾಡಿರೋ ಭೀಕರ ದಾಳಿ. ಡ್ರೋನ್‌ಗಳನ್ನ ಬಳಕೆ ಮಾಡಿಕೊಂಡು ಪಕ್ಕಾ ಪುಷ್ಪಾ ಸ್ಟ್ರೈಲ್‌ನಲ್ಲಿ ಅಟ್ಯಾಕ್‌ ಮಾಡಿ ರಷ್ಯಾದ 5 ಏರ್‌ಬೇಸ್‌, 41 ಫೈಟರ್‌ ಜೆಟ್‌ಗಳನ್ನ ಭಸ್ಮ ಮಾಡಿ ಬಿಟ್ಟಿದೆ. ಹಾಗಾದ್ರೆ, ಉಕ್ರೇನ್‌ ದಾಳಿ ಹೇಗಿತ್ತು?

ರಷ್ಯಾದ 5 ಏರ್‌ಬೇಸ್‌, 41 ಫೈಟರ್‌ ಜೆಟ್‌ ಭಸ್ಮ!
ಪುಷ್ಪ ಸ್ಟೈಲ್‌ನಲ್ಲಿ ಅಟ್ಯಾಕ್‌, ಏನಿದು ಪುಷ್ಪ ಸ್ಟೈಲ್‌?

ಬೆಚ್ಚಿ ಬೀಳಿಸುವ ದಾಳಿ. ಯುದ್ಧಾಸ್ತ್ರದಲ್ಲಿ ತಾನೇ ಕಿಂಗ್‌ ಅಂತಾ ತೋರಿಸಿಕೊಳ್ತಿದ್ದ ರಷ್ಯಾ ಮೇಲೆ ಊಹಿಸಲು ಸಾಧ್ಯವಿಲ್ಲದ ಅಟ್ಯಾಕ್‌ ಮಾಡಲಾಗಿದೆ. ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಶುರುವಾಗಿ ಮೂರುವರೆ ವರ್ಷವೇ ಆಯ್ತು. ರಷ್ಯಾದವ್ರು ಅದೆಷ್ಟು ದಾಳಿ ಮಾಡಿದ್ದಾರೋ? ಅದಕ್ಕೆ ಕೌಂಟರ್‌ ಆಗಿ ಉಕ್ರೇನ್‌ನವ್ರು ನಾವೇನ್ ಕಮ್ಮಿ ಇಲ್ಲ ಅಂತಾ ದಾಳಿ ಮಾಡಿ ತೋರಿಸಿದ್ದಾರೆ.

publive-image

ಇತ್ತೀಚಿನ ದಿನಗಳದಲ್ಲಿ ಎರಡೂ ರಾಷ್ಟ್ರಗಳ ನಡುವಿನ ಯುದ್ಧಕ್ಕೆ ತೆರೆ ಬೀಳೋ ಲಕ್ಷಣಗಳು ಕಾಣಿಸುತ್ತಿದ್ದವು. ಹಾಗೇ ಎರಡೂ ರಾಷ್ಟ್ರಗಳು ಕದನ ವಿರಾಮದ ಮಾತುಕತೆಯೂ ಒಪ್ಪಿದ್ದವು. ದೊಡ್ಡಣ್ಣ ಅಮೆರಿಕಾ ಉಭಯ ರಾಷ್ಟ್ರಗಳಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವಂತೆ ಖಡಕ್‌ ಆದೇಶವನ್ನೂ ಪಾಸ್‌ ಮಾಡಿತ್ತು. ಹೀಗಾಗಿ ಇನ್ನೇನು ಯುದ್ಧಕ್ಕೆ ತೆರೆ ಬೀಳುತ್ತೆ ಅನ್ನೋ ಹಂತದಲ್ಲಿ ರಷ್ಯಾ ಮೇಲೆ ಉಕ್ರೇನ್‌ ಭೀಕರ ಡ್ರೋನ್‌ ದಾಳಿ ನಡೆಸಿದೆ. ಇಲ್ಲಿ ರಷ್ಯಾ ಮೇಲೆ ಉಕ್ರೇನ್‌ ದಾಳಿ ಮಾಡಿತು ಅನ್ನೋದಕ್ಕಿಂತ, ಉಕ್ರೇನ್‌ ದಾಳಿ ಮಾಡಿರೋ ಪುಷ್ಪ ಸ್ಟೈಲ್‌ ಸಖತ್‌ ಸದ್ದು ಮಾಡ್ತಿದೆ.

ಇದನ್ನೂ ಓದಿ: ರಷ್ಯಾದ ಮೇಲೆ ದಾಳಿ.. 117 ಡ್ರೋನ್‌ಗಳನ್ನು ಉಕ್ರೇನ್‌ ತಯಾರಿಸಿದ್ದು ಎಲ್ಲಿ? ಹೇಗೆ? ರೋಚಕ ಸ್ಟೋರಿ 

117 ಡ್ರೋನ್​​ಗಳು.. 5 ಏರ್‌ಬೇಸ್‌, 41 ಜೆಟ್​​ಗಳು ಉಡೀಸ್!
4 ಸಾವಿರ ಕಿ.ಮೀ ದೂರದಲ್ಲಿರೋ ಏರ್‌ಬೇಸ್‌ ಕೂಡ ಛಿದ್ರ!
ಯುದ್ಧ ಶುರುವಾಗಿ ಮೂರುವರೆ ವರ್ಷವಾಯ್ತು. ಇಲ್ಲಿಯವರೆಗೂ ರಷ್ಯಾ ಮೇಲೆ ಇಂತಹವೊಂದು ದಾಳಿ ಖಂಡಿತವಾಗಿಯೂ ಆಗಿರಲಿಲ್ಲ. ಈ ರೀತಿ ದಾಳಿಯಾಗುತ್ತೆ ಅನ್ನೋ ಕಲ್ಪನೆಯೂ ರಷ್ಯಾಗೆ ಇರಲಿಲ್ಲ. ಹೇಗಿದ್ರೂ ತಾನೇ ಸ್ಟ್ರಾಂಗ್‌, ತನ್ನ ಶಕ್ತಿ ಮುಂದೆ ಉಕ್ರೇನ್‌ ಶಕ್ತಿ ಏನೂ ಅಲ್ಲ ಅನ್ನೋ ಹಮ್ಮು ಭಿಮ್ಮು ರಷ್ಯಾಗಿತ್ತು. ಆದ್ರೆ, ಅಂತಾ ದೈತ್ಯ ರಾಷ್ಟ್ರ ರಷ್ಯಾಗೆ ಉಕ್ರೇನ್‌ ಮುಟ್ಟಿ ನೋಡಿಕೊಳ್ಳುವ ಏಟು ನೀಡಿದೆ. ಹೌದು, ಸುಮಾರು 117 ಡ್ರೋನ್‌ಗಳನ್ನ ಬಳಕೆ ಮಾಡಿಕೊಂಡು ರಷ್ಯಾದ 5 ಏರ್‌ಬೇಸ್‌ಗಳ ಮೇಲೆ ಅಟ್ಯಾಕ್‌ ಮಾಡಿದೆ. ಪರಿಣಾಮ ರಷ್ಯಾದ ಅತ್ಯಾಧುನಿಕ 41 ಫೈಟರ್‌ ಜೆಟ್‌ಗಳು ಭಸ್ಮವಾಗಿ ಬಿಟ್ಟಿವೆ. ವಿಶೇಷ ಅಂದ್ರೆ, ಉಕ್ರೇನ್‌ ಗಡಿಯಿಂದ 2000 ಕಿಲೋ ಮೀಟರ್‌, 4000 ಕಿಲೋ ಮೀಟರ್‌ ದೂರದಲ್ಲಿ ಏರ್‌ಬೇಸ್‌ಗಳ ಮೇಲೂ ಉಕ್ರೇನ್‌ ದಾಳಿ ಮಾಡಿ ತೋರಿಸಿದೆ.

publive-image

ಫೈಟರ್‌ ಜೆಟ್‌, ಬಾಂಬರ್‌ಗಳನ್ನೇ ಟಾರ್ಗೆಟ್‌ ಮಾಡಿದ್ದ ಉಕ್ರೇನ್‌
ರಷ್ಯಾ ಏರ್‌ ಡಿಫೆನ್ಸ್‌ ಫೇಲ್‌, ಶಕ್ತಿಗಿಂತ ಯುಕ್ತಿ ಮುಖ್ಯ ಅಂತಾ ಸಾರಿತು
ರಷ್ಯಾ ಮತ್ತು ಉಕ್ರೇನ್‌ ಯುದ್ಧ ಶುರುವಾದ್ಮೇಲೆ ಇಲ್ಲಿಯವರೆಗೂ ಉಕ್ರೇನ್‌ನಲ್ಲಿಯೇ ಜಾಸ್ತಿ ಪ್ರಮಾಣದ ಹಾನಿಯಾಗಿತ್ತು. ಜಾಸ್ತಿ ಯುದ್ಧಾಸ್ತ್ರಗಳು ನಷ್ಟವಾಗಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗಿತ್ತು. ಹೆಚ್ಚಿನ ಪ್ರಮಾಣದ ಸೈನಿಕರು ಜೀವ ಕಳ್ಕೊಂಡಿದ್ದು ಉಕ್ರೇನ್‌ನಲ್ಲಾಗಿತ್ತು. ಇದೊಂದ್‌ ನಿಟ್ಟಿನಲ್ಲಿ ನಿರೀಕ್ಷಿತ. ಯಾಕಂದ್ರೆ, ರಷ್ಯಾ ಬತ್ತಳಿಕೆಯಲ್ಲಿ ಅತ್ಯಾಧುನಿಕ ಯುದ್ಧಾಸ್ತ್ರಗಳು ಇರೋದ್ರಿಂದ ಉಕ್ರೇನ್‌ಗೆ ಹಿನ್ನೆಡೆ ಖಂಡಿತವಾಗಿಯೂ ಆಗಿತ್ತು. ಆದ್ರೆ, ಇದೀಗ ಉಕ್ರೇನ್‌ ಶಕ್ತಿಗಿಂತ ಯುಕ್ತಿ ಮುಖ್ಯ ಅನ್ನೋದನ್ನ ತೋರಿಸಿ ಕೊಟ್ಟಿದೆ. ಇನ್ನು ಯುದ್ಧ ಶುರುವಾದಾಗಿಂದ ಆಗಾಗ ರಷ್ಯಾದಿಂದ ಅಣ್ವಸ್ತ್ರಗಳ ಬೆದರಿಕೆ ಬರ್ತಾನೆ ಇತ್ತು. ಉಕ್ರೇನ್‌ ಮೇಲೆ ಪುಟಿನ್‌ ಅಣ್ವಸ್ತ್ರ ದಾಳಿ ನಡ್ಸಿಯೇ ಬಿಡ್ತಾರೆ ಅನ್ನೋ ಮಾತುಗಳು ಕೇಳಿಬರ್ತಾ ಇದ್ದವು. ಇದೀಗ ಯಾವ ಅಣ್ವಸ್ತ್ರಗಳನ್ನ ಸಾಗೋ ಸಾಮರ್ಥ್ಯ ಇದ್ವೋ? ಅದೇ ಫೈಟರ್‌ ಜೆಟ್‌ಗಳನ್ನ, ಬಾಂಬರ್‌ಗಳನ್ನ ಉಕ್ರೇನ್‌ ಧ್ವಂಸ ಮಾಡಿ ಬಿಟ್ಟಿದೆ.

ಉಕ್ರೇನ್‌ 117 ಡ್ರೋನ್‌ಗಳನ್ನೆ ಬಳ್ಕೆ ಮಾಡ್ಕೊಂಡ್‌ ರಷ್ಯಾದ ಏರ್‌ಬೇಸ್‌ಗಳ ಮೇಲೆ ಭೀಕರ ದಾಳಿ ನಡೆಸಿದೆ. ಇದ್ರಿಂದ ರಷ್ಯಾದ ಶೇಕಡಾ 34 ರಷ್ಟು ಕ್ರೂಸ್‌ ಮಿಸೈಲ್‌ ಕ್ಯಾರಿಯರ್‌ಗಳಿಗೆ ಡ್ಯಾಮೇಜ್‌ ಆಗಿದೆ. ಇಷ್ಟು ದಿನ ತನ್ನ ಮೇಲೆ ಬಾಂಬ್‌ ದಾಳಿಗೆ ಬಳಿಸ್ತಿದ್ದ ಏರ್‌ಕ್ರಾಫ್ಟ್ ಮೇಲೆಯೇ ಉಕ್ರೇನ್‌ ಅಟ್ಯಾಕ್ ಮಾಡಿದೆ. ಇದ್ರಿಂದ ರಷ್ಯಾದ Tu -95, Tu-22 ಸ್ಟ್ರಾಟಜಿಕ್‌ ಬಾಂಬರ್‌ಗಳಿಗೆ ಡ್ಯಾಮೇಜ್‌ ಆಗಿದೆ. A- 50 ರೆಡಾರ್‌ ಡಿಟೆಕ್ಷನ್‌ & ಕಮಾಂಡ್ ಏರ್‌ಕ್ರಾಫ್ಟ್‌ಗೂ ತೀವ್ರ ಹಾನಿಯಾಗಿದೆ.

publive-image

ರಷ್ಯಾ ಸೈಬಿರಿಯಾ, ಇರ್ಕುಟ್ಸ್ಕ್ ಸೇರಿದಂತೆ ನಾಲ್ಕು ವಾಯುನೆಗಳ ಮೇಲೆ ಅಟ್ಯಾಕ್‌ ಮಾಡಲಾಗಿದ್ದು. ರಷ್ಯಾದ ಏರ್‌ಡಿಫೆನ್ಸ್‌ ಸಿಸ್ಟಂ ಫೇಸ್‌ ಆಗಿದೆ. ರಷ್ಯಾ ನಿರ್ಮಿಸಿರೋ ಎಸ್‌-400 ಬಳ್ಕೆ ಮಾಡ್ಕೊಂಡ್‌ ಭಾರತ ಪಾಕಿಸ್ತಾನದಿಂದ ಹಾರಿ ಬಂದ ಡ್ರೋನ್‌ಗಳನ್ನ, ಮಿಸೈಲ್‌ಗಳನ್ನ, ಕ್ಷಿಪಣಿಗಳನ್ನ ಆಗಸದಲ್ಲಿಯೇ ಹೊಡೆದು ಹಾಕಿತ್ತು. ಅಂತಾದ್ರಲ್ಲಿ ರಷ್ಯಾದ ಏರ್‌ ಡಿಫೆನ್ಸ್‌ ಸಿಸ್ಟಂ ಏನ್‌ ಮಾಡ್ತು? ಉಕ್ರೇನ್‌ನಿಂದ ಹಾರಿ ಬಂದಿರೋ ಡ್ರೋನ್‌ಗಳನ್ನ ಹೊಡೆದು ಹಾಕೋದಲ್ಲಿ ರಷ್ಯಾಗೆ ಏಕೆ ಸಾಧ್ಯವಾಗಿಲ್ಲ? ಅನ್ನೋ ಪ್ರಶ್ನೆ ಖಂಡಿತವಾಗಿಯೂ ಎದುರಾಗುತ್ತೆ. ಆದ್ರೆ, ಇಲ್ಲಿ ಉಕ್ರೇನ್‌ ಮಾಡಿದ್ದ ಐಡಿಯಾ ರಷ್ಯಾಗೆ ಶಾಕ್‌ ನೀಡಿದೆ.

ಜಗತ್ತನ್ನೇ ದಿಗ್ಭ್ರಮೆಗೆ ದೂಡಿದ ಆಪರೇಷನ್​ "ಸ್ಪೈಡರ್​ ವೆಬ್"​
ಪ್ರಳಯ ರುದ್ರರ "ರಿಮೋಟ್" ಆಟಕ್ಕೆ ರಷ್ಯಾ ಚಿಂದಿ ಚಿಂದಿ
ರಷ್ಯಾ ಮೇಲೆ ದಾಳಿ ಮಾಡೋದಕ್ಕೆ ಉಕ್ರೇನ್‌ ಇದಕ್ಕೆ ಇಟ್ಕೊಂಡಿದ್ದು ಆಪರೇಷನ್‌ ಸ್ಪೈಡರ್‌ ವೆಬ್‌ ಅನ್ನೋ ಹೆಸ್ರನ್ನ. ಇದನ್ನ ಒಂದೂವರೆ ವರ್ಷದ ಹಿಂದೆ ಪ್ಲ್ಯಾನ್‌ ಮಾಡಿತ್ತು. ತಾವು ಯಾವ್‌ ರಾತಿಯಲ್ಲಿ ದಾಳಿ ಮಾಡ್ಬೇಕು? ಯಾವ್‌ ಯಾವ್‌ ಏರ್‌ಬೇಸ್‌ಗಳನ್ನ ಉಡೀಸ್‌ ಮಾಡ್ಬೇಕು? ಅನ್ನೋದನ್ನ ಉಕ್ರೇನ್‌ ಪಕ್ಕಾ ಬ್ಲ್ಯೂ ಫ್ರಿಂಟ್‌ ತೆಗೆದುಕೊಂಡಿತ್ತು. ಆ ಪ್ರಕಾರವೇ ಇದೀಗ ದಾಳಿ ಮಾಡಿ ತೋರಿಸಿದೆ.

ಸಾಮಾನ್ಯವಾಗಿ ಉಕ್ರೇನ್‌ ಗಡಿಯಿಂದ ಡ್ರೋನ್‌ಗಳು ಹಾರಿ ಬಂದ್ರೆ ಅವುಗಳನ್ನ ರಷ್ಯಾ ಹೊಡೆದು ಹಾಕ್ತಾ ಇತ್ತು. ಆದ್ರೆ, ಇಲ್ಲಿ ಆಗಿರೋದ್‌ ಏನು ಅಂದ್ರೆ ಪಕ್ಕಾ ಪುಷ್ಪ ಸ್ಟೈಲ್‌. ಅದು ಹೇಗೆ ಅಂದ್ರೆ, ಮುಂಚಿನವಾಗಿ ಡ್ರೋನ್‌ಗಳನ್ನ ಡ್ರಕ್‌ಗಳ ಮೂಲಕ ರಷ್ಯಾಗೆ ಸಾಗಾಟ ಮಾಡಿ, ಅವುಗಳು ಏರ್‌ಬೇಸ್‌ ಹತ್ತಿರ ಹೋತ್ತಾ ಇದ್ದಂತೆ ರಿಮೋಟ್‌ ಬಳ್ಕೆ ಮಾಡ್ರೊಂಡ್‌ ಉಡೀಸ್‌ ಮಾಡಲಾಗಿದೆ.

publive-image

ಆಪರೇಷನ್ ‘ಜೇಡರ ಬಲೆ’
ರಷ್ಯಾದ ಬೆಲಾಯಾ ಏರ್‌ಬೇಸ್ ಇರೋದು ಉಕ್ರೇನ್‌ನಿಂದ ಬರೋಬ್ಬರಿ 4000 ಕಿ.ಮೀ ದೂರದಲ್ಲಿ. ಒಲೆನ್ಯಾ ಅನ್ನೋ ಏರ್‌ಬೇಸ್‌ ಇರೋದು ಉಕ್ರೇನ್‌ನಿಂದ 2000 ಕಿ.ಮೀ ದೂರದಲ್ಲಿ. ಆದ್ರೆ, ಉಕ್ರೇನ್‌ ಡ್ರೋನ್‌ಗಳನ್ನ ಮೊದಲೇ ರಷ್ಯಾಗೆ ಕಳ್ಳಸಾಗಾಣೆ ಮಾಡಿತ್ತು. ಟ್ರಕ್‌ಗಳಲ್ಲಿ ಮರದ ಕ್ಯಾಬಿನ್‌ಗಳ ರೂಫ್‌ಗಳ ಒಳಗೆ ಡ್ರೋನ್ ಫಿಕ್ಸಿಂಗ್‌ ಮಾಡಿತ್ತು. ಟ್ರಕ್‌ಗಳ ಮೂಲಕ ಪುಷ್ಪ ಮಾದರಿಯಲ್ಲಿ ಕವರ್ ಮಾಡಿ ಸ್ಮಗ್ಲಿಂಗ್‌ ಮಾಡಲಾಗಿತ್ತು. ದಾಳಿ ವೇಳೆ ಟ್ರಕ್‌ಗಳ ರೂಫ್‌ ಓಪನ್‌, ಹೊರ ಹಾರಿದ ಡ್ರೋನ್‌. ರಿಮೋಟ್‌ ಮೂಲಕ ರೂಫ್ ಓಪನ್ ಮಾಡಿ ಡ್ರೋನ್‌ನಿಂದ ದಾಳಿ. ಟಾರ್ಗೆಟ್‌ಗಳ ಸಮೀಪವೇ ಹೋಗ್ತಾ ಇದ್ದಂತೆ ಅಲ್ಲಿಂದ ಡ್ರೋನ್ ಅಟ್ಯಾಕ್.

publive-image

117 ಡ್ರೋನ್‌ಗಳ ಮೇಲೋ ಉಕ್ರೇನ್‌ ಕಣ್ಗಾವಲು ಇಟ್ಟಿತ್ತು. ಆ ಡ್ರೋನ್‌ಗಳು ಎಲ್ಲಿ ಹೋಗ್ತಾ ಇವೆ. ಎಲ್ಲಿ ನಿಂತಿವೆ ಅನ್ನೋದನ್ನ ಉಕ್ರೇನ್‌ನಲ್ಲಿಯೇ ನಿಂತ್ಕೊಂಡ್‌ ವಾಚ್‌ ಮಾಡ್ತಾ ಇತ್ತು. ಅಂತಿಮವಾಗಿ ಇನ್ಮೇನ್‌ ಆ ಟ್ರಕ್‌ಗಳು ಏರ್‌ಬೇಸ್‌ ಸಮೀಪ ಹೋಗ್ತಾ ಇದ್ತಂತೆ ರಿಮೋಟ್‌ ಬಳ್ಕೆ ಮಾಡ್ಕೊಂಡ್‌ ಅವುಗಳನ್ನ ಏರ್‌ಬೇಸ್‌ನತ್ತ ಬಾರಿಸಲಾಗಿದೆ.

ಸಾಮಾನ್ಯವಾಗಿ ಏರ್‌ಬೇಸ್‌ಗಳಲ್ಲಿ ಭಾರೀ ಪ್ರಮಾಣದ ಭದ್ರತೆ ಇರುತ್ತೆ. ಡ್ರೋನ್‌ಗಳು, ಮಿಸೈಲ್‌ಗಳು ಮೇಲೆ ಕಣ್ಗಾವಲು ಇಡೋದಕ್ಕಾಗಿಯೇ ರಾಡರ್‌ಗಳನ್ನ ಇಟ್ಟಿರ್ತಾರೆ. ಅವುಗಳು ಆಗಸದಲ್ಲಿ ಗುರಿ ಇಟ್ಟು ಬರ್ತಾ ಇದಂತೆ ಏರ್‌ಡಿಫೆನ್ಸ್‌ ಸಿಸ್ಟಂ ಹೊಡೆದು ಹಾಕುತ್ತೆ. ಆದ್ರೆ, ಇಲ್ಲಿ ಉಕ್ರೇನ್‌ ದಾಳಿಯಲ್ಲಿ ಆಗಿದ್ದು ಏನು ಅಂದ್ರೆ, ಡ್ರೋನ್‌ಗಳು ಏರ್‌ಬೇಸ್‌ ಹತ್ತಿರ ಹೋಗಿ ದಾಳಿ ಮಾಡಿವೆ. ಇನ್ನು ಭಾರೀ ಕಡಿಮೆ ಎತ್ತರದಲ್ಲಿ ಹೋಗಿ ದಾಳಿ ಮಾಡಿರೋದ್ರಿಂದ ಅವುಗಳು ಏರ್‌ಬೇಸ್‌ನಲ್ಲಿರೋ ರಾಡರ್‌ಗಳ ಕಣ್ಗಾವಲಿಗೆ ಸಿಕ್ಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment