newsfirstkannada.com

ಹಲ್ಲುಜ್ಜುವಾಗ 12 ಸೆಂಟಿ ಮೀಟರ್ ಟೂತ್ ಬ್ರಷ್ ನುಂಗಿದ ಭೂಪ; ಬ್ರಷ್ ಹೊರಗೆ ತೆಗೆದಿದ್ದು ಹೊಸ ದಾಖಲೆ!

Share :

Published July 20, 2023 at 12:48pm

Update July 20, 2023 at 12:51pm

    ಬೆಳಗೆದ್ದು ಹಲ್ಲುಜ್ಜುವಾಗ ಟೂತ್ ಬ್ರಷ್ ನುಂಗಿದ ಆಸಾಮಿ

    53 ವರ್ಷದ ಗೋಪಾಲ್ ಸಿಂಗ್ ರಾವ್ ಫುಲ್ ಗಲಿಬಿಲಿ

    ಸರ್ಜರಿ ಮಾಡದೇ ಹೊಟ್ಟೆಯೊಳಗಿಂದ ಹೊರ ತೆಗೆದ ವೈದ್ಯರು

ಉದಯಪುರ: ಮನೆಯಲ್ಲಿ ಪುಟಾಣಿ ಮಕ್ಕಳು ಕೈಗೆ ಸಿಕ್ಕ ಉಂಗುರ, ನಾಣ್ಯಗಳನ್ನ ನುಂಗಿದ ಘಟನೆಗಳನ್ನ ನಾವು ನೀವೆಲ್ಲಾ ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಬ್ಬ ಆಸಾಮಿ ಬೆಳಗೆದ್ದು ಹಲ್ಲುಜ್ಜುವಾಗ ಬರೋಬ್ಬರಿ 12 ಸೆಂಟಿ ಮೀಟರ್ ಉದ್ದದ ಟೂತ್ ಬ್ರಷ್ ಅನ್ನೇ ನುಂಗಿ ಬಿಟ್ಟಿದ್ದಾನೆ. ಗಾಬರಿಯಾದ ಈತ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈತನ ಹೊಟ್ಟೆಯೊಳಗೆ ಸೇರಿದ ಟೂತ್‌ ಬ್ರಷ್‌ ತೆಗೆಯೋಕೆ ಡಾಕ್ಟರ್ಸ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅಮೆರಿಕಾದ ವೈದ್ಯರ ತಂಡ ಯಾವುದೇ ಸರ್ಜರಿ ಮಾಡದೇ ಹೊಟ್ಟೆಯೊಳಗಿದ್ದ ಟೂತ್ ಬ್ರಷ್‌ ಅನ್ನ ಹೊರ ತೆಗೆದು ಅಚ್ಚರಿ ಮೂಡಿಸಿದ್ದಾರೆ.

ಅಂದ ಹಾಗೆ 12 ಸೆಂಟಿ ಮೀಟರ್ ಟೂತ್ ಬ್ರಷ್ ಹೊಟ್ಟೆಯೊಳಗೆ ಹೋದ ಘಟನೆ ನಡೆದಿರೋದು ರಾಜಸ್ಥಾನದ ಚಿತ್ತೋರ್‌ನಲ್ಲಿ. 53 ವರ್ಷದ ಗೋಪಾಲ್ ಸಿಂಗ್ ರಾವ್ ಎಂಬುವವರು ಹಲ್ಲುಜ್ಜುವಾಗ ತನ್ನ ಟೂತ್‌ ಬ್ರಷ್ ಅನ್ನೇ ನುಂಗಿ ಬಿಟ್ಟಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿದ್ದ ಡಾಕ್ಟರ್‌ಗಳೇ ಶಾಕ್ ಆಗಿದ್ದಾರೆ. ಎಲ್ಲಾ ಪ್ರಯತ್ನಗಳನ್ನು ಮಾಡಿದ ಮೇಲೆ ಟೂತ್‌ ಬ್ರಷ್ ಅನ್ನು ಆಪರೇಷನ್ ಮಾಡಿಯೇ ಹೊರ ತೆಗೆಯಬೇಕಾಗುತ್ತೆ ಎನ್ನಲಾಗುತ್ತೆ.

ಇದನ್ನೂ ಓದಿ: ಒಂಟಿ ಒಂಟಿಯಾಗಿರುವುದು ಬೋರು ಬೋರು.. ಹೀಗೆಂದು ಅಗ್ನಿಶಾಮಕ ದಳದ ಸಹಾಯವಾಣಿಗೆ 2,761 ಬಾರಿ ಕರೆ ಮಾಡಿದ ಮಹಿಳೆ!

ಆಪರೇಷನ್ ಮಾಡಿ ಟೂತ್‌ ಬ್ರಷ್ ಹೊರ ತೆಗೆಯಲು ಯೋಚಿಸುವಾಗಲೇ ಗೋಪಾಲ್ ಸಿಂಗ್ ರಾವ್ ಅವರಿಗೆ ಅವರ ಸಂಬಂಧಿಕರು ಅಮೆರಿಕಾಕ್ಕೆ ತೆರಳುವ ಸಲಹೆ ಕೊಡುತ್ತಾರೆ. ಕೊನೆಗೆ ಗೋಪಾಲ್ ರಾವ್ ಅವರನ್ನ ಅಮೆರಿಕಾದ GBH ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ CT ಸ್ಕಾನ್ ಮಾಡಿದಾಗ ಹೊಟ್ಟೆಯಲ್ಲಿ 12 ಸೆಂಟಿ ಮೀಟರ್ ಟೂತ್ ಬ್ರಷ್ ಇರೋದು ಗೊತ್ತಾಗಿದೆ. ಅಮೆರಿಕಾದ GBH ಆಸ್ಪತ್ರೆ ವೈದ್ಯರು ಗೋಪಾಲ್ ಸಿಂಗ್ ರಾವ್ ಹೊಟ್ಟೆಯಲ್ಲಿದ್ದ ಟೂತ್‌ ಬ್ರಷ್ ಅನ್ನು ಸರ್ಜರಿ ಮಾಡದೇ ಹೊರಗೆ ತೆಗೆಯೋ ಭರವಸೆ ಕೊಟ್ಟಿದ್ದಾರೆ. ಎಂಡೋಸ್ಕೊಪಿಕ್ ಮೂಲಕ ಹೊಟ್ಟೆಯಲ್ಲಿದ್ದ ಟೂತ್ ಬ್ರಷ್ ಅನ್ನ ಹೊರ ತೆಗೆದು ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.

ಟೂತ್ ಬ್ರಷ್ ನುಂಗಿ ಕಂಗಾಲಾಗಿದ್ದ ಗೋಪಾಲ್ ಸಿಂಗ್ ರಾವ್ ಅವರು ನಿಜಕ್ಕೂ ನಿಟ್ಟುಸಿರು ಬಿಟ್ಟಿದ್ದಾರೆ. ಈ ಚಿಕಿತ್ಸೆ ನಡೆದ ಒಂದು ದಿನದ ಬಳಿಕ ಗೋಪಾಲ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಎಂಡೋಸ್ಕೊಪಿಕ್ ಮೂಲಕ ಪ್ಲಾಸ್ಟಿಕ್ ವಸ್ತುವನ್ನು ಹೊಟ್ಟೆಯಿಂದ ಹೊರ ತೆಗೆದ ವೈದ್ಯರ ಸಾಹಸ ಹೊಸ ದಾಖಲೆ ಬರೆದಿದೆ. ಸರ್ಜರಿ ಮಾಡದೇ ಟೂತ್ ಬ್ರಷ್ ಅನ್ನು ಹೊರ ತೆಗೆದ ಈ ಪ್ರಕರಣವನ್ನು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹಲ್ಲುಜ್ಜುವಾಗ 12 ಸೆಂಟಿ ಮೀಟರ್ ಟೂತ್ ಬ್ರಷ್ ನುಂಗಿದ ಭೂಪ; ಬ್ರಷ್ ಹೊರಗೆ ತೆಗೆದಿದ್ದು ಹೊಸ ದಾಖಲೆ!

https://newsfirstlive.com/wp-content/uploads/2023/07/Toothbrush-Udaipura.jpg

Load More