newsfirstkannada.com

ಜಾರ್ಖಂಡ್​​ನಲ್ಲಿ ಭೀಕರ ರೈಲು ಅಪಘಾತ; ಕನಿಷ್ಠ 12 ಮಂದಿ ಸಾವು; ಹಲವರ ಸ್ಥಿತಿ ಗಂಭೀರ!

Share :

Published February 28, 2024 at 10:35pm

Update February 28, 2024 at 10:36pm

    ಜಾರ್ಖಂಡ್​​ನ ಕಲ್ಜಾರಿಯಾ ಸಮೀಪ ಭೀಕರ ರೈಲು ಅಪಘಾತ!

    ದುರಂತದಲ್ಲಿ 12 ಮಂದಿ ಸಾವು, ಹಲವರಿಗೆ ಗಂಭೀರ ಗಾಯಗಳು

    ಸ್ಥಳಕ್ಕೆ ದೌಡಾಯಿಸಿ ರೈಲ್ವೆ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ

ರಾಂಚಿ: ಜಾರ್ಖಂಡ್​​ನಲ್ಲಿರೋ ಜಮ್ತಾರಾ-ಕರ್ಮತಾಂಡ್‌ ಸಮೀಪದ ಕಲ್ಜಾರಿಯಾ ಬಳಿ ಭೀಕರ ರೈಲು ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 12 ಮಂದಿ ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಇನ್ನು, ಘಟನೆ ತಿಳಿದ ಕೂಡಲೇ ರೈಲ್ವೆ ಪೊಲೀಸ್ರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸದ್ಯದ ವರದಿ ಪ್ರಕಾರ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, ಇನ್ನೂ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

ಅನೇಕ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಇವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಆಂಗ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡ ಸುದ್ದಿ ಗೊತ್ತಾದ ಕೂಡಲೇ ಪ್ರಯಾಣಿಕರು ಮತ್ತೊಂದು ರೈಲ್ವೆ ಟ್ರ್ಯಾಕ್‌ಗೆ ಹೋಗಿ ನಿಂತಿದ್ದರು. ಈ ವೇಳೆ ಎದುರಿನಿಂದ ಬಂದ ಝಾಝಾ-ಅಸನ್ಸೋಲ್ ರೈಲು ಪ್ರಯಾಣಿಕರ ಮೇಲೆ ಹಾದು ಹೋಗಿದೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾರ್ಖಂಡ್​​ನಲ್ಲಿ ಭೀಕರ ರೈಲು ಅಪಘಾತ; ಕನಿಷ್ಠ 12 ಮಂದಿ ಸಾವು; ಹಲವರ ಸ್ಥಿತಿ ಗಂಭೀರ!

https://newsfirstlive.com/wp-content/uploads/2024/02/Train-Accident_1.jpg

Load More