/newsfirstlive-kannada/media/post_attachments/wp-content/uploads/2025/05/ckm2.jpg)
ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇನ್ನೂ 1 ವಾರ ರಾಜ್ಯದ ಬಹುತೇಕ ಕಡೆಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಲಿದೆ. ಆದರೆ ಮಳೆ ನಡುವೆಯೇ ಕಾಫಿನಾಡಿನಲ್ಲಿ ರಸ್ತೆಯ ಬಳಿ ಅವಿತು ಕುಳಿತ್ತಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿ: ಜಸ್ಟ್ 7 ತಿಂಗಳಲ್ಲಿ 25 ಮದುವೆ.. 23 ವರ್ಷದ ಸುಂದರಿ ಸಂಚು ಬಾಲಿವುಡ್ ಸಿನಿಮಾನೂ ಮೀರಿಸಿದ ಸ್ಟೋರಿ!
ಹೌದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ವಾಟೆಖಾನ್ ಗ್ರಾಮದಲ್ಲಿ ಬರೋಬ್ಬರಿ 12 ಅಡಿ ದೈತ್ಯ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಈ ಕಾಳಿಂಗ ಸರ್ಪವು ರಸ್ತೆಯ ಬಳಿ ಅವಿತು ಕುಳಿತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು.
ಹೀಗಾಗಿ ಕಾಳಿಂಗ ಸರ್ಪ ಕಂಡ ಕೂಡಲೇ ಉರಗ ತಜ್ಞರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆ ಕೂಡಲೇ ಸ್ಥಳಕ್ಕೆ ಬಂದ ಉರಗ ತಜ್ಞ ಆರೀಫ್ ಸರ್ಪವನ್ನು ಸೆರೆ ಹಿಡಿದಿದ್ದಾರೆ.
ಈ ಭಾಗದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಹಾವುಗಳನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಬಿಡುತ್ತಿದ್ದಾರೆ. ಜಿಲ್ಲೆಯ ಕಳಸ, ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕಿನ ಕೆಲ ಭಾಗಗಳಲ್ಲಿ ದೈತ್ಯ ಹಾವುಗಳು ಕಾಣಿಸಿಕೊಳ್ಳುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ