ಭೀಕರ ಕಾಲ್ತುಳಿತ ಘಟಿಸಿ 12 ಗಂಟೆಯಾದರೂ ನಿಲ್ಲದ ಜನಜಂಗುಳಿ.. ದೆಹಲಿ ರೈಲ್ವೆ ನಿಲ್ದಾಣದ ಸ್ಥಿತಿ ಈಗ ಹೇಗಿದೆ?

author-image
Gopal Kulkarni
Updated On
ಭೀಕರ ಕಾಲ್ತುಳಿತ ಘಟಿಸಿ 12 ಗಂಟೆಯಾದರೂ ನಿಲ್ಲದ ಜನಜಂಗುಳಿ.. ದೆಹಲಿ ರೈಲ್ವೆ ನಿಲ್ದಾಣದ ಸ್ಥಿತಿ ಈಗ ಹೇಗಿದೆ?
Advertisment
  • ಕಾಲ್ತುಳಿತ ಸಂಭವಿಸಿ ಅನಾಹುತ ನಡೆದರೂ ನಿಲ್ಲದ ಜನಜಂಗುಳಿ
  • ಜನರಿಂದ ತುಂಬಿ ತುಳುಕುತ್ತಿರುವ ರಾಜಧಾನಿ ದೆಹಲಿಯ ರೈಲ್ವೆ ನಿಲ್ದಾಣ
  • ಕಾಲ್ತುಳಿತದ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಿದ ರೈಲ್ವೆ ಸಚಿವ

ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಭೀಕರ ಕಾಲ್ತುಳಿತದಿಂದ ಮಕ್ಕಳು ಮಹಿಳೆಯರು ಸೇರಿ ಒಟ್ಟು 18 ಜನರ ಜೀವ ಕಳೆದುಕೊಂಡಿದ್ದಾರೆ. ಮಹಾಕುಂಭಮೇಳಕ್ಕೆ ಪ್ರಯಾಗರಾಜ್​​ಗೆ ತೆರಳುವ ವೇಳೆ ರೈಲು ಬಂಂತು ಎಂಬ ಧಾವಂತದಲ್ಲಿ ಓಡಿ ಹೋಗಲು ಹೋಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಕಾಲ್ತುಳಿತ ಉಂಟಾಗಿ 18 ಜನರ ಅಸುನೀಗಿದ್ದಾರೆ. ಇದಾಗಿ ಈಗ 12 ಗಂಟೆಗಳ ಮೇಲೆ ಕಳೆದಿದೆ. ಆದರೂ ಕೂಡ ಇನ್ನೂ ದೆಹಲಿಯ ರೈಲ್ವೆ ನಿಲ್ದಾಣದದಲ್ಲಿ ಜನಜಂಗುಳಿ ಅದೇ ಮಾದರಿಯಲ್ಲಿದೆ. ಕುಂಭಮೇಳಕ್ಕೆ ಹೋಗಲು ಜನರು ಹರಿದು ಬರುತ್ತಿದ್ದಾರೆ.

ನಿನ್ನೆ ನಡೆದ ಘಟನೆಯಿಂದ ಎಚ್ಚೆತ್ತುಕೊಂಡ ಸರ್ಕಾರ ಪ್ರತಿ ಪ್ಲಾಟಫಾರಂನಲ್ಲಿಯೂ ಪೊಲೀಸರ ನಿಯೋಜನೆಯನ್ನು ಹೆಚ್ಚಿಸಿದೆ. ಪ್ರತಿ ಪ್ಲಾಟಾಪಾರಂ ಮೇಲೆಯೂ ತೀವ್ರ ನಿಗಾ ಕಾಯುವಂತೆ ಸೂಚಿಸಲಾಗಿದೆ. ಪ್ಲಾಟಫಾರಂ ನಂಬರ್​ 12, 15 ಮತ್ತು 16ರಲ್ಲಿ ನಿತ್ಯಕ್ಕಿಂತ ಹೆಚ್ಚು ಜನಜಂಗಳು ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಮಹಾ ಕುಂಭಮೇಳಕ್ಕೆ ಹೋಗಿ ಗಂಗಾಸ್ನಾನ ಮಾಡಲಾಗದ ಪರಿಸ್ಥಿತಿ.. ಮನೆಯಲ್ಲೇ ಗಂಗೆ ಚಿಮ್ಮಿಸಿದ ಗೌರಿ ಅಮ್ಮ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಉನ್ನತ ಮಟ್ಟತದ ತನಿಖೆಗೆ ಆದೇಶ ನೀಡಿದ್ದಾರೆ. ಕಾಲ್ತುಳಿದ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ನೀಡವುಂತೆ ಹೇಳಿದ್ದು. ಜನಜಂಗುಳಿಯನ್ನು ನಿರ್ವಹಿಸಲು ವಿಶೇಷ ರೈಲುಗಳನ್ನು ಬಿಡಲಾಗುವುದು ಎಂದು ತಿಳಸಿದ್ದಾರೆ. ಇನ್ನು ರೈಲ್ವೆ ಇಲಾಖೆಯೂ ಕೂಡ ಎರಡು ಉನ್ನತ ಮಟ್ಟದ ಸಿಬ್ಬಂದಿಯ ಗುಂಪನ್ನು ಅತ್ಯುನ್ನತ ತನಿಖೆಗಾಗಿ ನೇಮಕ ಮಾಡಲಾಗಿದೆ. ಉತ್ತರ ರೈಲ್ವೆಯ ಪ್ರಿನ್ಸಿಪಾಲ್ ಚೀಫ್​ ಕಮರ್ಷಿಯಲ್ ಮ್ಯಾನೇಜರ್​ ನರಸಿಂಗ್ ಡಿಯೊ ಮತ್ತು ಪ್ರಿನ್ಸಿಪಾಲ್ ಚೀಫ್ ಸೆಕ್ಯೂರಿಟಿಯ ಕಮಿಷನರ್ ಪಂಕಜ್​ ಗಂಗಾವರ್ ಇವರನ್ನು ಕಮೀಟಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಈಗಾಗಲೇ ಕಮಿಟಿ ರೈಲ್ವೆ ನಿಲ್ದಾಣದ ಎಲ್ಲಾ ಸಿಸಿಟಿವಿ ಫೂಟೇಜ್​ಗಳನ್ನು ವಶಕ್ಕೆ ಪಡೆದಿದ್ದು ತನಿಖೆಯನ್ನು ಜಾರಿಯಲ್ಲಿಟ್ಟಿದೆ.

ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿಲಾಗಿದೆ. ಗಂಭೀರವಾಗಿ ಗಾಯಗೊಂಡಿವರಿಗೆ 2.5 ಲಕ್ಷ ರೂಪಾಯಿ ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.

ಕಾಲ್ತುಳಿತಕ್ಕೆ ಕಾರಣವೇನು?

ಪ್ರತ್ಯಕ್ಷದರ್ಶಿಗಳು ಹೇಳಿರುವ ಪ್ರಕಾರ ದೆಹಲಿ ರೈಲ್ವೆ ಸ್ಟೇಷನ್​ನಲ್ಲಿ ಪ್ರಯಾಗರಾಜ್​ಗೆ ಹೋಗಬೇಕಾದ ರೈಲು ಬೇರೆ ಪ್ಲಾಟಫಾರಂಗೆ ಬರಲಿದ ಎಂದು ಅನೌನ್ಸ್ ಮಾಡಲಾಯಿತಂತೆ. ಹೀಗಾಗಿ ಜನರು ಬೇರೆ ಪ್ಲಾಟಫಾರಂಗೆ ಹೋಗುವ ಗಡಿಬಿಡಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ ಎನ್ನುತ್ತಾರೆ. ಆದರೆ ರೈಲ್ವೆ ಪ್ರಾಧಿಕಾರ ಇದನ್ನು ತಳ್ಳಿಹಾಕಿದೆ.

ಇದನ್ನೂ ಓದಿ:ಮಹಾಕುಂಭಮೇಳದಲ್ಲಿ ಮತ್ತೊಂದು ದಾಳಿ.. ಕಿನ್ನರ ಅಖಾಡದ ಕಲ್ಯಾಣಿ ನಂದಗಿರಿ ಮೇಲೆ ಅಟ್ಯಾಕ್‌; ಕಾರಣವೇನು?

ಉತ್ತರ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಮುಖ್ಯಸ್ಥ ಹಿಮಾಂಶು ಉಪಾಧ್ಯಾಯ ಹೇಳುವ ಪ್ರಕಾರ 14 ಮತ್ತು 15ನೇ ಪ್ಲಾಟಫಾರಂನ ಪಾದಚಾರಿ ಸೇತುವೆಯ ಮೇಲೆ ನಡೆದುಕೊಂಡು ಹೋಗುವಾಗ 14 ರಿಂದ 15 ಜನರು ಕಾಲು ಜಾರಿ ಬಿದ್ದಿದ್ದಾರೆ ಇದರಿಂದ ಕಾಲ್ತುಳಿತ ಉಂಟಾಗ 18 ಜನರ ಜೀವ ಹೋಗಿದೆ ಎಂದು ಹೇಳಿದ್ದಾರೆ. ಯಾವುದೇ ಟ್ರೇನ್ ಕ್ಯಾನ್ಸಲ್ ಆದ ಬಗ್ಗೆ ಅಥವಾ ಪ್ಲಾಟಫಾರಂ ಚೆಂಜ್ ಆದ ಬಗ್ಗೆ ಎಲ್ಲಿಯೂ ಅನೌನ್ಸ್ ಆಗಿಲ್ಲ ಎಂದು ಹೇಳಿದ್ದಾರೆ.
ಸದ್ಯ ಇದೆಲ್ಲಾ ನಡೆದು ಸುಮಾರು 17 ಗಂಟೆ ಕಾಲ ಆದರೂ ಕೂಡ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಗರಾಜ್​ಗೆ ಹೋಗುವವರ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಜನಜಂಗುಳಿಯಿಂದ ರೈಲ್ವೆ ನಿಲ್ದಾಣ ತುಂಬಿ ಹೋಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment