ಪಾಕಿಸ್ತಾನಕ್ಕೆ ಮೊತ್ತೊಂದು ದೊಡ್ಡ ಆಘಾತ; 12 ಸೈನಿಕರು ಛಿದ್ರ ಛಿದ್ರ..! VIDEO

author-image
Ganesh
Updated On
ಪಾಕಿಸ್ತಾನಕ್ಕೆ ಮೊತ್ತೊಂದು ದೊಡ್ಡ ಆಘಾತ; 12 ಸೈನಿಕರು ಛಿದ್ರ ಛಿದ್ರ..! VIDEO
Advertisment
  • ಪಾಕ್ ಸೇನೆ ಮೇಲೆ ಸೇಡು ತೀರಿಸಿಕೊಂಡ BLA
  • ಕಳೆದ ಮಂಗಳವಾರ ನಡೆದ ಘೋರ ದಾಳಿ
  • ದಾಳಿ ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಪಹಲ್ಗಾಮ್ ದಾಳಿ ಮೂಲಕ ಪಾಕಿಸ್ತಾನ ಕೆಟ್ಟ ಪರಿಸ್ಥಿತಿಯನ್ನ ಮೈಮೇಲೆ ಎಳೆದುಕೊಂಡಿದೆ. ಭಾರತದ ದಿಟ್ಟ ನಿರ್ಧಾರಗಳು ಮಾಸ್ಟರ್​ ಸ್ಟ್ರೋಕ್ ಕೊಟ್ಟಿವೆ. ಬುಧವಾರ ನಡೆದ ‘ಆಪರೇಷನ್ ಸಿಂಧೂರ’ ಜೀವನಪೂರ್ತಿ ಮರೆಯಲಾಗದಷ್ಟು ಪೆಟ್ಟು ನೀಡಿದೆ. ಇದೀಗ ಭಾರತ ಮಾತ್ರವಲ್ಲ, ಬಲೂಚಿಸ್ತಾನ ಕೂಡ ದೊಡ್ಡ ಆಘಾತ ನೀಡಿದೆ. ಬಿಎಲ್‌ಎ (Baloch Liberation Army) ಪಡೆ ಪಾಕಿಸ್ತಾನಿ ಸೇನಾ ವಾಹನದ ಮೇಲೆ ದಾಳಿ ನಡೆಸಿ 12 ಸೈನಿಕರನ್ನ ಉಡೀಸ್ ಮಾಡಿದೆ.

ಇದನ್ನೂ ಓದಿ: ಮೊಳಗಿತು ಸೈರನ್, ಗಡಿಯಲ್ಲಿ ಹೈಅಲರ್ಟ್! ಯುದ್ಧ ಪರಿಸ್ಥಿತಿ ನಿಭಾಯಿಸಲು ಟ್ರೈನಿಂಗ್..!

ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್ ಪ್ರದೇಶದಲ್ಲಿ ಐಇಡಿ ದಾಳಿ ಆಗಿದೆ. ಬಲೂಚ್ ಲಿಬರೇಶನ್ ಆರ್ಮಿಯ ವಿಶೇಷ ಕಾರ್ಯಾಚರಣೆ ಸ್ಕ್ವಾಡ್ (STOS) ಭೀಕರ ದಾಳಿ ಮಾಡಿದೆ. ರಿಮೋಟ್ ಕಂಟ್ರೋಲ್ಡ್ ಐಇಡಿಯೊಂದಿಗೆ ಬೃಹತ್ ಸ್ಫೋಟ ನಡೆಸಿದೆ. ಪಾಕ್ ಸೈನಿಕರು ಮಿಲಿಟರಿ ಕಾರ್ಯಾಚರಣೆಗೆ ಹೋಗುತ್ತಿದ್ದಾಗ ದಾಳಿ ಆಗಿದೆ.

https://twitter.com/sahil_haq86755/status/1920297617411428626

ಕಳೆದ ಮಂಗಳವಾರ ದಾಳಿ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಬಲೂಚ್ ಲಿಬರೇಷನ್ ಆರ್ಮಿಯ ಸದಸ್ಯರ ಪ್ಲಾನ್ ಮಾಡುತ್ತಿರೋದು ನಂತರ ವಾಹನ ಸ್ಫೋಟಗೊಳ್ಳುವ ದೃಶ್ಯ ಇದೆ. ಬ್ಲಾಸ್ಟ್ ಆದ ಹೊಡೆತಕ್ಕೆ ಪಾಕ್ ಸೈನಿಕರು ಛಿದ್ರ ಛಿದ್ರವಾಗಿ ನೆಲಕ್ಕೆ ಬಿದ್ದಿದ್ದಾರೆ.

ಬಲೂಚಿಸ್ತಾನದಲ್ಲಿ ಪ್ರಕ್ಷುಬ್ಧತೆ

ಕಳೆದ ವಾರ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 10 ಭಯೋತ್ಪಾದಕರನ್ನು ಮುಗಿಸಲಾಗಿದೆ ಎಂದು ಪಾಕ್ ಹೇಳಿಕೊಂಡಿದೆ. ಆದಾಗ್ಯೂ ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ತಾನಿ ಸೈನಿಕರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಕಳೆದ ಮಾರ್ಚ್‌ನಲ್ಲಿ, ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಅನ್ನು ಬಿಎಲ್‌ಎ ಸದಸ್ಯರು ಅಪಹರಿಸಿದ್ದರು. ಆಗ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದರು.

https://twitter.com/AdityaRajKaul/status/1920255026733212126

ಇದನ್ನೂ ಓದಿ: 12 ಭಾರತೀಯರ ಜೀವ ತೆಗೆದ ಪಾಕ್.. ಗಡಿಯಲ್ಲಿ ಜನರ ಗುರಿಯಾಗಿಸಿ ಮತ್ತೆ ಮತ್ತೆ ಶೆಲ್ ಅಟ್ಯಾಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment