/newsfirstlive-kannada/media/post_attachments/wp-content/uploads/2025/06/NEET.jpg)
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಮದಿಹಾನ್ ಪ್ರದೇಶದಲ್ಲಿರುವ ಸರ್ಕಾರಿ ವಸತಿ ಶಾಲೆಯ ದಲಿತ ಮತ್ತು ಒಬಿಸಿ ಸಮುದಾಯಗಳ 12 ವಿದ್ಯಾರ್ಥಿನಿಯರು ನೀಟ್-ಯುಜಿ ಪರೀಕ್ಷೆಯಲ್ಲಿ (NEET-UG examination) ಉತ್ತೀರ್ಣರಾಗುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಯನ್ನು ಆ ಪ್ರದೇಶದ ಪ್ರಗತಿಯ ದಿಕ್ಕಿನಲ್ಲಿ ‘ಮೈಲಿಗಲ್ಲು’ ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಮರ್ಜಾಪುರ ಜಿಲ್ಲೆಯು ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ.
ಯಾರೆಲ್ಲ ಪಾಸ್​..?
ಶ್ವೇತಾ ಪಾಲ್, ಕುಮಾರಿ ಪೂಜಾ ರಂಜನ್, ಪ್ರಿನ್ಸಿ, ಮಾಲ್ತಿ, ಕೋಮಲ್ ಕುಮಾರಿ, ಲಕ್ಷ್ಮಿ, ಅನುರಾಧ, ಕೋಮಲ್, ಲಕ್ಷ್ಮಿ (ದ್ವಿತೀಯ), ಸಭ್ಯ ಪ್ರಜಾಪತಿ, ದೀಪ್ತಿ ಗುಪ್ತಾ ಮತ್ತು ಪೂಜಾ ಸೋಂಕರ್ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಪಾಸ್ ಮಾಡಿದ್ದಾರೆ. ಇವರೆಲ್ಲ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗ (OBC) ಸಮುದಾಯಗಳಿಂದ ಬಂದವರು.
ಮದಿಹಾನ್‌ದಲ್ಲಿರುವ ಜಯಪ್ರಕಾಶ್ ನಾರಾಯಣ ಸರ್ವೋದಯ ಬಾಲಿಕಾ ವಿದ್ಯಾಲಯದ (Jayaprakash Narayan Sarvodaya Balika Vidyalaya) ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರ ಫಲಿತಾಂಶಗಳನ್ನು ಜೂನ್ 14 ರಂದು ಘೋಷಣೆ ಆಗಿದೆ. ಈ ಪೈಕಿ 12 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ: AI ಇಂದ IT ಉದ್ಯೋಗಗಳಿಗೆ ಧಕ್ಕೆ ಇಲ್ಲ.. ಇನ್ಫೋಸಿಸ್ ದಿಗ್ಗಜ ಎನ್.ಆರ್ ನಾರಾಯಣಮೂರ್ತಿ ಹೇಳಿದ್ದು ಏನು?
ನಮಗೆ ಓದಲು ಶಿಕ್ಷಕರು ಮತ್ತು ವಾರ್ಡನ್‌ಗಳು ಸಾಕಷ್ಟು ಸಹಾಯ ಮಾಡಿದರು. ರಸಾಯನಶಾಸ್ತ್ರದ ಶಿಕ್ಷಕ ಅರವಿಂದ್ ಸರ್ ಮತ್ತು ಜೀವಶಾಸ್ತ್ರ ಶಿಕ್ಷಕ ಸುಧೀರ್ ಸರ್ ಚೆನ್ನಾಗಿ ಗೈಡ್ ಮಾಡುತ್ತಿದ್ದರು. ಇದರಿಂದ ನಾವು ಗುರಿ ತಲುಪಲು ಸಾಧ್ಯವಾಯಿತು ಅಂತಾ ಶ್ವೇತಾ ಪಾಲ್ ಹೇಳಿದ್ದಾರೆ.
16 ರಿಂದ 18 ಗಂಟೆಗಳ ಕಾಲ ಅಧ್ಯಯನ
ಪೂಜಾ ರಂಜನ್ ಅನ್ನೋರು ಮೊದಲ ಪ್ರಯತ್ನದಲ್ಲೇ ಪಾಸ್ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ನನಗೆ ತುಂಬಾ ಖುಷಿ ಆಗ್ತಿದೆ. ನಾನು ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣಳಾದೆ. ಪ್ರತಿದಿನ 16 ರಿಂದ 18 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಶಾಲೆಯಲ್ಲಿ 6 ಗಂಟೆಗಳು, ತರಬೇತಿಯಲ್ಲಿ 5 ಗಂಟೆಗಳು ಜೊತೆಗೆ ನಾನೇ ಸ್ವಂತ ಓದಿಕೊಳ್ಳಲು 7 ಗಂಟೆ ಮೀಸಲು ಇಡುತ್ತಿದ್ದೆ ಎಂದು ಪೂಜಾ ತಿಳಿಸಿದ್ದಾಳೆ.
ಇದನ್ನೂ ಓದಿ: ಶುಭಾಂಶು ಶುಕ್ಲಾ ಇವತ್ತು ಬಾಹ್ಯಾಕಾಶಕ್ಕೆ ಪ್ರಯಾಣ.. ಕೊನೆಗೂ ಆಕಾಶಕ್ಕೆ ಜಿಗಿಯಲು ಸಿದ್ಧವಾದ Axiom Mission-4
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ