ಬಾಲಕನ ಎದೆಗೆ ಹೊಕ್ಕಿತ್ತು ತೆಂಗಿನ ಗರಿಯ ದಿಂಡು.. ಪವಾಡ ರೀತಿಯಲ್ಲಿ ಜೀವ ಉಳಿಸಿದ ಸರ್ಕಾರಿ ವೈದ್ಯ

author-image
Ganesh
Updated On
ಬಾಲಕನ ಎದೆಗೆ ಹೊಕ್ಕಿತ್ತು ತೆಂಗಿನ ಗರಿಯ ದಿಂಡು.. ಪವಾಡ ರೀತಿಯಲ್ಲಿ ಜೀವ ಉಳಿಸಿದ ಸರ್ಕಾರಿ ವೈದ್ಯ
Advertisment
  • ಭುಜ ಸೀಳಿ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ದಿಂಡು
  • ಕೂಲಿ ಕಾರ್ಮಿಕನ ಮಗನ ಜೀವ ಉಳಿಸಿದ ವೈದ್ಯರು
  • ಡಿಂಡು ಒಂದೇ ಅಲ್ಲ, ಸ್ಟೀಲ್ ಚೈನ್ ಕೂಡ ದೇಹ ಸೇರಿತ್ತು

ಮಂಗಳೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯರು 12 ವರ್ಷದ ಬಾಲಕನೊಬ್ಬನ ಜೀವ ಉಳಿಸಿ ಸುದ್ದಿಯಾಗಿದ್ದಾರೆ. ಕಮಲ್ ಹುಸೇನ್ (12) ವೈದ್ಯರಿಂದ ಬಚಾವ್ ಆಗಿರುವ ಬಾಲಕ.

ಆಗಿದ್ದೇನು..?

ಮಡಿಕೇರಿಯ ಕಾಫಿ ಎಸ್ಟೇಟ್ ಒಂದರಲ್ಲಿ ಅಸ್ಸಾಂ ಮೂಲದ ಕಾರ್ಮಿಕ ದಂಪತಿ ಕೆಲಸ ಮಾಡುತ್ತಿದೆ. ಅವರ ಪುತ್ರನೇ ಈ ಕಮಲ್ ಹುಸೇನ್. ಈತನಿಗೆ ಕೇವಲ 12 ವರ್ಷ. ಮನೆಯ ಬಳಿ ನೇರಳೆ ಹಣ್ಣಿನ ಮರ ಹತ್ತಿದ್ದ ಬಾಲಕ, ಆಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದಾನೆ. ಮರದ ಕೆಳಗೆ ತಂಗಿನ ಗರಿಯ ದಂಟು ಬಿದ್ದಿತ್ತು. ಹುಸೇನ್ ನೆಲಕ್ಕೆ ಬೀಳ್ತಿದ್ದಂತೆಯೇ, ಆ ದಂಟು ಆತನ ಭುಜದ ಮೂಲಕ ಎದೆಯ ಭಾಗಕ್ಕೆ ಹೊಕ್ಕಿತ್ತು. ಜೊತೆಗೆ ಕುತ್ತಿಗೆಯಲ್ಲಿದ್ದ ಸ್ಟೀಲ್ ಚೈನ್ ಕೂಡ ಗಾಯದ ಮೂಲಕ ಒಳಸೇರಿತ್ತು.

ಇದನ್ನೂ ಓದಿ: ₹2, ₹10, ₹20 ನಾಣ್ಯಗಳನ್ನೇ ನುಂಗಿ ಬದುಕಿದ್ದ ಭೂಪ; ಆಪರೇಷನ್ ಮಾಡಿದ ಡಾಕ್ಟರ್‌ಗೆ ಬಿಗ್ ಶಾಕ್‌!

publive-image

ಪೋಷಕರು ಕಂಗಾಲ್.. ಮುಂದೇನಾಯ್ತು..?

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಾಲಕನ ರಕ್ಷಿಸಲು ಪೋಷಕರ ಬಳಿ ಅಷ್ಟೊಂದು ಹಣ ಇರಲಿಲ್ಲ. ಹೀಗಾಗಿ ಅವರು ನೇರವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮಧ್ಯರಾತ್ರಿ ಕರೆದುಕೊಂಡು ಬಂದಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಬಾಲಕನಿಗೆ ತುರ್ತು ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ನಂತರ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್​ಕ್ಯುಲಸ್ ಸರ್ಜರಿ ವಿಭಾಗ ಶಸ್ತ್ರಚಿಕಿತ್ಸೆಗೆ ಸಿದ್ಧವಾಗಿದೆ. ಡಾ.ಸುರೇಶ್ ಪೈ ನೇತೃತ್ವದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ತೆಂಗಿನ ದಿಂಡು ಹಾಗೂ ಚೈನ್ ಹೊರತೆಗೆದಿದ್ದಾರೆ. ಇದೀಗ ಬಾಲಕ ಚೇತರಿಸಿಕೊಂಡಿದ್ದು, ವೈದ್ಯರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ದೀರ್ಘಾಯುಷಿಗಳಾಗಲು ಎರಡೇ ಸಾಮಾನ್ಯ ಸೂತ್ರಗಳಿವೆ.. 105 ವರ್ಷದ ಈ ಮಹಿಳೆ ಹೇಳುವುದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment