ಚಂದನಾಗೆ ಮಿಡಿದ ಜನರ ಕಣ್ಣೀರು.. ಅಂಗಾಂಗ ದಾನ ಮಾಡಿದ ಬಾಲಕಿಗೆ ಮೆರವಣಿಗೆ ಮೂಲಕ ಗೌರವ

author-image
AS Harshith
Updated On
ಚಂದನಾಗೆ ಮಿಡಿದ ಜನರ ಕಣ್ಣೀರು.. ಅಂಗಾಂಗ ದಾನ ಮಾಡಿದ ಬಾಲಕಿಗೆ ಮೆರವಣಿಗೆ ಮೂಲಕ ಗೌರವ
Advertisment
  • 6 ಜನರಿಗೆ ಅಂಗಾಂಗ ದಾನ ಮಾಡುವ ಮೂಲಕ ಬೆಳಕಾದ ಚಂದನ
  • ಅಪಘಾತದಲ್ಲಿ ಮೆದುಳು ನಿಷ್ಕ್ರೀಯವಾಗಿ ಸಾವನ್ನಪ್ಪಿದ ಹೆಣ್ಣು ಮಗಳು
  • ಸಾವಿನಲ್ಲೂ ಸಾರ್ಥಕತೆ.. ಚಂದನಾಳನ್ನು ಕಾಣಲು ಬೃಹತ್​ ಜನಸ್ತೋಮ

ತುಮಕೂರು: 12 ವರ್ಷದ ತಿಪಟೂರು ಮೂಲದ ಚಂದನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಳು. ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರೀಯವಾಗಿ ಕೊನೆಗೆ 7 ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಸಾವಿಗೂ ಮುನ್ನ ಚಂದನ ತನ್ನ ಅಂಗಾಂಗ ದಾನ ಮಾಡುವ ಮೂಲಕ 6 ಜನರಿಗೆ ಬೆಳಕಾಗಿದ್ದಾಳೆ.

ಇಂದು ಆಕೆಯ ಅಂತ್ಯಕ್ರಿಯೆ ನೆರವೇರಲಿದ್ದು, ಸದ್ಯ ಚಂದನ ಮೃತದೇಹ ತಿಪಟೂರು ತಲುಪಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದನ ಪಾರ್ಥೀವ ಶರೀರವನ್ನು ಮೆರವಣಿಗೆ ಮಾಡುವ ಮೂಲಕ ಕೊಂಡೊಯ್ಯಲಾಗುತ್ತಿದೆ. ಮೆರವಣಿಗೆಯಲ್ಲಿ ನೂರಾರು ಜನರು ಭಾಗಿಯಾಗಿದ್ದಾರೆ.

publive-image

ನಗರದ ಹಾಸನ ವೃತ್ತದಿಂದ, ಐಬಿ ವೃತ್ತ, ಕಿಡ್ಜಿ ಸ್ಕೂಲ್ ಮುಖಾಂತರ ಹಳೇಪಾಳ್ಯದಲ್ಲಿರುವ ಬಾಲಕಿಯ ಮನೆಯವರೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತಿದೆ. ಚಂದನ ಮೃತದೇಹ ಕಂಡು ಶಾಲೆಯ ಶಿಕ್ಷಕರು ಹಾಗೂ ಚಂದನ ಸಹಪಾಠಿಗಳು ಕಣ್ಣೀರು ಹಾಕುತ್ತಿದ್ದಾರೆ. ಇಂದು ಸಂಜೆ ಚಂದನ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ: ಕಾವೇರಿಗೇಕೆ ಬಾಗಿನ? ಒಡಲು ತುಂಬಿದ ಜೀವನದಿಗೆ ಮನದಿಂದ ಅರ್ಪಣೆ

ಚಂದನ ತಿಪಟೂರಿನ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಜು.23ರಂದು ಆಕೆಗೆ ಅಪಘಾತವಾಗಿತ್ತು. ಸ್ಕೂಲ್ ಮುಗಿಸಿ ವಾಪಸ್ ಬರುವಾಗ ತಿಪಟೂರಿನಲ್ಲಿ ಅಪಘಾತ ಸಂಭವಿಸಿತ್ತು.

publive-image

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ 12 ವರ್ಷದ ಹೆಣ್ಣು ಮಗು.. 6 ಮಕ್ಕಳಿಗೆ ಅಂಗಾಂಗ ದಾನ ಮಾಡಿದ ಪುಟಾಣಿ

ರಸ್ತೆ ದಾಟುವಾಗ ಚಂದನಾಗೆ ಲಾರಿ ಡಿಕ್ಕಿ ಹೊಡೆದು ತಲೆಗೆ ಪೆಟ್ಟಾಗಿತ್ತು. ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿತ್ತು. ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಂದನಾಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಆಕೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಳು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಚಂದನ ಸಾವನಪ್ಪಿದ್ದಾಳೆ. ಚಂದನಾಳ ಅಂಗಾಂಗಗಳನ್ನು ಮೈಸೂರು ಹಾಗೂ ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment