Advertisment

ಸಾವಿನಲ್ಲೂ ಸಾರ್ಥಕತೆ ಮೆರೆದ 12 ವರ್ಷದ ಹೆಣ್ಣು ಮಗು.. 6 ಮಕ್ಕಳಿಗೆ ಅಂಗಾಂಗ ದಾನ ಮಾಡಿದ ಪುಟಾಣಿ

author-image
AS Harshith
Updated On
ಸಾವಿನಲ್ಲೂ ಸಾರ್ಥಕತೆ ಮೆರೆದ 12 ವರ್ಷದ ಹೆಣ್ಣು ಮಗು.. 6 ಮಕ್ಕಳಿಗೆ ಅಂಗಾಂಗ ದಾನ ಮಾಡಿದ ಪುಟಾಣಿ
Advertisment
  • ಸ್ಕೂಲ್ ಮುಗಿಸಿ ವಾಪಸ್ ಬರುವಾಗ ಲಾರಿ ಅಪಘಾತ
  • ಲಾರಿ ಡಿಕ್ಕಿ ಹೊಡೆದು ತಲೆಗೆ ಗಂಭೀರವಾದ ಏಟು.. ಮೆದುಳು ನಿಷ್ಕ್ರಿಯ
  • ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೆ ಇಹಲೋಕ ತ್ಯಜಿಸಿದ ಪುಟಾಣಿ

ತುಮಕೂರು: 12 ವರ್ಷದ ಹೆಣ್ಣು ಮಗಳೊಬ್ಬಳು ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾಳೆ. ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ ಮತ್ತೊಂದು ಜೀವಕ್ಕೆ ಬೆಳಕಾಗಿದ್ದಾಳೆ.

Advertisment

ತಿಪಟೂರು ನಗರದ ಹಳೇಪಾಳ್ಯದ ನಿವಾಸಿಯಾಗಿರುವ ಚಂದನ ಅಲ್ಲಿನ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದಳು. ಜು.23ರಂದು ಆಕೆಗೆ ಅಪಘಾತವಾಗಿತ್ತು. ಸ್ಕೂಲ್ ಮುಗಿಸಿ ವಾಪಸ್ ಬರುವಾಗ ತಿಪಟೂರಿನಲ್ಲಿ ಅಪಘಾತ ಸಂಭವಿಸಿತ್ತು.

publive-image

ರಸ್ತೆ ದಾಟುವಾಗ ಚಂದನಗೆ ಲಾರಿ ಡಿಕ್ಕಿ ಹೊಡೆದು ತಲೆಗೆ ಪೆಟ್ಟಾಗಿತ್ತು. ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿತ್ತು. ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಂದನಾಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಆಕೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಳು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಚಂದನ ಸಾವನಪ್ಪಿದ್ದಾಳೆ.

ಇದನ್ನೂ ಓದಿ: ಸೂರ್ಯನ ಬತ್ತಳಿಕೆಯಲ್ಲಿವೆ ಬರೋಬ್ಬರಿ 10 ಶಾಟ್ಸ್​​​​! ಯಾವ ಶಾಟ್ಸ್​​​​​​ನಲ್ಲಿ ಹೆಚ್ಚು ರನ್​​? ಹೆಚ್ಚು ಸಿಕ್ಸ್​​?

Advertisment

ಸಾವನ್ನಪ್ಪಿದ ಮಗಳ ಅಂಗಾಂಗವನ್ನು ದಾನ ಮಾಡಲು ಆಕೆಯ ತಂದೆ ತಾಯಿ ಒಪ್ಪಿದ್ದಾರೆ. ಪೋಷಕರ ನಿರ್ಧಾರಕ್ಕೆ ಆಸ್ಪತ್ರೆ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ.

publive-image

ಇದನ್ನೂ ಓದಿ: ಬೆಳಗ್ಗೆ ಮದುವೆ ಪ್ರಸ್ತಾಪ, ಸಂಜೆ ವೇಳೆಗೆ ಮಗಳೇ ಇಲ್ಲ.. BBMP ಲಾರಿಗೆ ಸಿಲುಕಿ ಕಣ್ಣು ಮುಚ್ಚಿದ ಯುವತಿ

ಚಂದನಳ ಅಂಗಾಂಗಗಳನ್ನು ಮೈಸೂರು ಹಾಗೂ ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಲಾಗಿದೆ. ಇಂದು ಸಂಜೆ ಚಂದನಳ ಅಂತ್ಯಸಂಸ್ಕಾರ ನೆರವೇರಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment