newsfirstkannada.com

123 ಅಡಿ ಉದ್ದದ ದೋಸೆ ತಯಾರಿಸಿ ವಿಶ್ವ ದಾಖಲೆ ಬರೆದ MTR ಸಂಸ್ಥೆ

Share :

Published March 17, 2024 at 6:28am

    ಸುಮಾರು 75 ಬಾಣಸಿಗರ ಕೈಯಿಂದ ತಯಾರಾದ ಮಸಾಲೆ ದೋಸೆ

    ಗಿನ್ನಿಸ್​ ದಾಖಲೆ ಮಾಡಿದ ಬಿಸಿ, ಬಿಸಿ ದೊಸೆಯ ವಿಶೇಷತೆ ಏನು ಗೊತ್ತಾ?

    ಎಂಟಿಆರ್ ಕಂಪನಿಯ ನೂರನೇ ವರ್ಷದ ಸಂಭ್ರಮಾಚರಣೆಯ ಸ್ಪೆಷಲ್

ಬೆಂಗಳೂರು: ದೋಸೆ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಣ್ಣೆ ದೋಸೆ, ಮಸಾಲೆ ದೋಸೆ, ಖಾಲಿ ಸೆಟ್​ ಹೀಗೆ ತರ ತರವಾದ ದೋಸೆಗಳು, ತಿಂಡಿ ಪ್ರಿಯರ ಫೇವರಿಟ್ ಆಗಿರುತ್ತೆ. ಇಂತಹ ದೋಸೆಗಳನ್ನ ತಿಂದ್ರೆ ಹೊಟ್ಟೆ ತುಂಬುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಸಾಮಾನ್ಯವಾಗಿ ನಾವೆಲ್ಲಾ ಅಂಗೈಯಗಲದಷ್ಟು ಇರೋ ದೋಸೆಯನ್ನು ತಿಂದಿರುತ್ತೇವೆ. ಆದ್ರೆ ಬರೋಬ್ಬರಿ 123 ಅಡಿ ಉದ್ದವಿರೋ ದೋಸೆಯನ್ನು ನೋಡಿದ್ದೀರಾ? ಈ ದೋಸೆಯಿಂದ ಗಿನ್ನಿಸ್ ದಾಖಲೆ ಕೂಡ ಮಾಡಬಹುದು ಅಂತ ಗೊತ್ತಿದೆಯಾ.

ಹೌದು, ಬೆಂಗಳೂರು ಹೊರವಲಯ ಬೊಮ್ಮಸಂದ್ರದ ಎಂಟಿಆರ್ ಫ್ಯಾಕ್ಟರಿಯಲ್ಲಿ 123 ಅಡಿ ಉದ್ದದ ದೋಸೆ ಮಾಡುವ ಮೂಲಕ MTR ವಿಶ್ವ ದಾಖಲೆ ಮಾಡಲಾಗಿದೆ. ಎಂಟಿಆರ್ ಕಂಪನಿಯ ನೂರನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಲಾರ್ಮನ್ ಮತ್ತು ಎಂಟಿಆರ್ ಸಂಸ್ಥೆಗಳಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ದೋಸೆ MTR ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ಮಾರ್ಗದರ್ಶನದಲ್ಲಿ, ಸುಮಾರು 75 ಬಾಣಸಿಗರ ಕೈಯಿಂದ ತಯಾರಾಗಿದೆ.

ಸತತ 4 ತಿಂಗಳ ಪ್ರಯತ್ನಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಬಾಣಸಿಗರು ಕುಣಿದು ಕುಪ್ಪಳಿಸಿದ್ದಾರೆ. ಒಂದಲ್ಲ ಎರಡಲ್ಲ 123 ಅಡಿ ಉದ್ದವಿರೋ ಈ ವಿಶೇಷ ದೋಸೆಯನ್ನ ಕೆಂಪಕ್ಕಿಯಿಂದ ತಯಾರಿಸಲಾಗಿದೆ. ಭಾರತದಲ್ಲೇ ಮೊದಲ ಬಾರಿಗೆ ಇಂಡಕ್ಷನ್​ ಹೀಟ್​ ಟೆಕ್ನಾಲಜಿಯ ಮೂಲಕ 126 ಇಂಚಿನ ತವ ತಯಾರಿಸಲಾಗಿದೆ. ಈ ತವ ಗ್ಯಾಸ್​ ರಹಿತವಾಗಿದ್ದು ಎಲೆಕ್ಟ್ರಿಕ್​​ ಹೆಂಚಾಗಿದೆ. ವಿಶ್ವ ದಾಖಲೆ ಮಾಡಲು ಜನರು ಏನನ್ನೆಲ್ಲಾ ಮಾಡುತ್ತಾರೆ. ಅದೇ ರೀತಿಯಾಗಿ ಎಂಟಿಆರ್​ ಕೂಡ ಅತಿ ಉದ್ದದ ದೋಸೆ ತಯಾರಿಸಿ ಗಿನ್ನಿಸ್ ದಾಖಲೆ ಮಾಡಿದೆ. ಇಷ್ಟು ದೊಡ್ಡ ದೋಸೆ ಅದನ್ನ ಇಷ್ಟ ಪಡೋರ ಬಾಯಲ್ಲಿ ನೀರು ತರಿಸಿದ್ದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

123 ಅಡಿ ಉದ್ದದ ದೋಸೆ ತಯಾರಿಸಿ ವಿಶ್ವ ದಾಖಲೆ ಬರೆದ MTR ಸಂಸ್ಥೆ

https://newsfirstlive.com/wp-content/uploads/2024/03/dosa-3.jpg

Load More