ದೀರ್ಘಾಯುಷಿಗಳಾಗಲು ಏನು ಮಾಡಬೇಕು; ಚೀನಾದ ಈ 124 ವರ್ಷದ ವೃದ್ಧೆ ಹೇಳುತ್ತಾರೆ ಕೇಳಿ

author-image
Gopal Kulkarni
Updated On
ದೀರ್ಘಾಯುಷಿಗಳಾಗಲು ಏನು ಮಾಡಬೇಕು; ಚೀನಾದ ಈ 124 ವರ್ಷದ ವೃದ್ಧೆ ಹೇಳುತ್ತಾರೆ ಕೇಳಿ
Advertisment
  • ಚೀನಾದಲ್ಲಿದ್ದಾರೆ 124 ವರ್ಷದ ಅಜ್ಜಿ ದೀರ್ಘಾಯುಷ್ಯದ ಬಗ್ಗೆ ಹೇಳುವುದೇನು
  • ಕ್ವಿಂಗ್ ಸಾಮ್ರಾಜ್ಯದ ಆಳ್ವಿಕೆಯಿಂದ ಕ್ಸಿ ಜಿನ್​ಪಿಂಗ್ ಆಳ್ವಿಕೆ ಕಂಡಿರುವ ಅಜ್ಜಿ
  • ದೀರ್ಘಾಯುಷ್ಯ ನಮ್ಮದಾಗಿಸಿಕೊಳ್ಳಲು ಈ ಅಜ್ಜಿಯ ರೀತಿಯಲ್ಲಿ ಬದುಕಬೇಕು

ದೀರ್ಘಕಾಲ, ಆರೋಗ್ಯವಂತರಾಗಿ, ಯಾರಿಗೂ ಭಾರವಾಗದಂತೆ ಬಾಳುವುದು ಪ್ರತಿಯೊಬ್ಬ ಮನುಷ್ಯನ ಬಯಕೆ. ಆಯಸ್ಸು ಎಂಬುದು ದೇವರು ಕಟ್ಟಿಕೊಟ್ಟ ಬುತ್ತಿ. ಅದು ಇದ್ದಷ್ಟು ದಿನ ಉಂಡು ಎದ್ದು ಹೋಗುವುದು ನಮ್ಮ ಕರ್ತವ್ಯ ಎಂಬ ತತ್ವಶಾಸ್ತ್ರದ ವಾಕ್ಯಗಳು ಕೂಡ ಬರುತ್ತವೆ. ಈ ಎರಡರ ನಡುವಿನ ವೈರುಧ್ಯವನ್ನು ಬೇಧಿಸುವುದಕ್ಕಿಂತ ದೀರ್ಘಾಯುಷಿಯಗಳಾಗಿ ಸರಳವಾಗಿ ಬದುಕಬಹುದು ಎಂಬುದಕ್ಕೆ ಸಾವಿರಾರು ಜನರು ಉದಾಹರಣೆಯಾಗಿ ಜಗತ್ತಿನಲ್ಲಿ ಇದ್ದಾರೆ. ಅವರಲ್ಲಿ ಚೀನಾದ ಈ ಕ್ಯೂ ಚೈಶಿ ಎಂಬ 124 ವರ್ಷದ ವಯೋವೃದ್ಧೆಯೂ ಕೂಡ ಒಬ್ಬರು.

publive-image

ಈ ಮಹಿಳೆ ಜನಿಸಿದ್ದು ಕ್ವಿಂಗ್​ ಸಾಮ್ರಾಜ್ಯದ ಕಾಲದಲ್ಲಿ ಅಂದ್ರೆ 1901ರಲ್ಲಿ. ಕ್ವಿಂಗ್ ಸಾಮ್ರಾಜ್ಯ 1644 ರಿಂದ 1911ರವರೆಗೆ ಆಳಿತ್ತು. ಅಂದ್ರೆ ಅರೆ ವಸಾಹತುಶಾಹಿ ಕಾಲದಿಂದ ಅರೆ ಊಳಿಗಮಾನ್ಯ ಪದ್ಧತಿ ಆಳ್ವಿಕೆ ಕಾಲದವರೆಗಿನ ಬದುಕನ್ನು ಈ ಜೀವ ನೋಡಿದೆ. ಇದೇ ಜನವರಿ 1 ರಂದು ಈ ಮಹಿಳೆ ತನ್ನ 124ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡರು. ಇವರ ಕುಟುಂಬದ ಒಂದು 6 ತಲೆಮಾರುಗಳನ್ನು ಈ ವೃದ್ಧೆ ನೋಡಿದ್ದಾರೆ. ಇವರಿಗೆ 60 ವರ್ಷದ ಮೊಮ್ಮಗಳು ಇದ್ದಾರೆ ಹಾಗೂ 8 ತಿಂಗಳ ಅತ್ಯಂತ ಕಿರಿಯ ಮನೆಯ ಸದಸ್ಯರನ್ನು ಇವರು ಕಂಡಿದ್ದಾರೆ.

ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ 124 ವರ್ಷದ ಈ ಕ್ಯೂ ಚೈಸಿಯವರು ದೀರ್ಘಾಯುಷ್ಯದ ಬಗ್ಗೆ ಹೇಳಿದರು. ಸರಳ ಹಾಗೂ ಶಿಸ್ತಿನ ಜೀವನಕ್ರಮ ನಮ್ಮದಾಗಿಸಿಕೊಂಡರೆ ನಾವು ದೀರ್ಘಾಯುಷಿಗಳಾಗಿ ಬಾಳಲು ಸಾಧ್ಯ ಎಂದು ಹೇಳಿದರು. ಅವರು ಹೇಳುವ ಪ್ರಕಾರ ಅವರು ನಿತ್ಯ ಮೂರು ಹೊತ್ತು ಊಟ . ಪ್ರತಿ ಊಟದ ಬಳಿಕವೂ ಒಂದು ವಾಕ್, ರಾತ್ರಿ ಸರಿಯಾಗಿ 8 ಗಂಟೆಗೆ ನಿದ್ರೆ. ಆದಷ್ಟು ಸ್ವತಂತ್ರವಾಗಿರುವುದು ನನ್ನ ಆದ್ಯತೆ ಎಂದು ಹೇಳಿದ್ದಾರೆ ಅದು ಮಾತ್ರವಲ್ಲ ನಿತ್ಯವೂ ತಮ್ಮ ಕೂದಲನ್ನು ತಾವೇ ಬಾಚಿಕೊಳ್ಳುತ್ತಾರೆ. ಬಾತುಗೋಳಿಗಳಿಗೆ ಕಾಳುಗಳನ್ನು ಹಾಕುವುದು ಅದು ಮಾತ್ರವಲ್ಲ ಮೆಟ್ಟಿಲುಗಳನ್ನು ಸ್ವಯಂ ಶಕ್ತಿಯಿಂದ ತಾವೇ ಹತ್ತುವುದು ಇದು ಅವರ ನಿತ್ಯ ರೂಟಿನ್
ಇನ್ನು ಇವರು ತಮ್ಮ ಆಹಾರದಲ್ಲಿ ಕುಂಬಳಕಾಯಿಂದ ಮಾಡಿದ ಗಂಜಿ, ಕಲ್ಲಂಗಡಿ, ಪುಡಿಮಾಡಿದ ಕಾರ್ನ್​ನ ಬೇಯಿಸಿದ ಅಡುಗೆ ಇಷ್ಟೇ ಇವರ ಆಹಾರ ಪದ್ಧತಿ. ಅದರ ಜೊತೆಗೆ ಆಗಾಗ ವೈದ್ಯರ ಸಲಹೆಗಳನ್ನು ಪಡೆಯುವುದು ಹೆಚ್ಚು ಆರೋಗ್ಯಕರವಾಗಿರಲು ಅವರ ಸಲಹೆಯನ್ನು ಪಾಲಿಸುವುದು ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ:40, 80 ಕೋಟಿ ಮೌಲ್ಯದ ಮನೆ ಬಿಡುತ್ತಿದ್ದಾರಾ ಕೊಹ್ಲಿ-ಅನುಷ್ಕಾ.. ಹೊಸ ಮನೆಯ ಸ್ಪೆಷಲಿಟಿ ಏನು?

ಇದು ಮಾತ್ರವಲ್ಲ ಚಿಕ್ಕಂದಿನಿಂದಲೂ ಕ್ಯೂ ಮಾಡಿಕೊಂಡು ಬಂದಿರುವ ಶ್ರಮದಾಯಕ ಕೆಲಸಗಳು ಕೂಡ ಅವರನ್ನು ದೈಹಿಕವಾಗಿ ಬಲಿಷ್ಠಗೊಳಿಸಿವೆ. ಹೊಲವನ್ನು ಉಳುಮೆ ಮಾಡುವುದು. ಕಲ್ಲುಗಳನ್ನು ಹೊತ್ತು ಒಂದು ಕಡೆ ಪೇರಿಸುವುದು ಇವೆಲ್ಲವನ್ನೂ ಅವರು ತಮ್ಮ 40ನೇ ವಯಸ್ಸಿನಲ್ಲಿಯೂ ಕೂಡ ಮಾಡಿದ್ದಾರೆ. ಅವರ ಪತಿ ನಡು ಪ್ರಯಾಣದಲ್ಲಿಯೇ ಅವರನ್ನು ಅಗಲಿದರು ಹೀಗಾಗಿ ಇವರು ತಮ್ಮ ಮಕ್ಕಳನ್ನು ಸಾಕುವ ಸಲುವಾಗಿ ಎಂದಿಗೂ ವಿರಮಿಸದೇ ನಿರಂತರವಾಗಿ ಒಂದಿಲ್ಲ ಒಂದು ಕೆಲಸ ಮಾಡಿದರು. ಅಂದಿನ ದೈಹಿಕ ಶ್ರಮ ಇಂದು ನನ್ನನ್ನು ಗಟ್ಟಿಯಾಗಿಟ್ಟಿದೆ ಎಂದು ಹೇಳುತ್ತಾರೆ ಕ್ಯೂ.

ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಚೀಸ್​ ಯಾವ ಹಾಲಿನಿಂದ ಸಿದ್ಧಗೊಳ್ಳುತ್ತೆ? ಹಸು, ಎಮ್ಮೆ, ಮೇಕೆ ಅಲ್ಲವೇ ಅಲ್ಲ!

100 ವರ್ಷಗಳ ಬಳಿಕವೂ ಅವರು ಮಾನಸಿಕವಾಗಿ ತುಂಬಾ ಸದೃಢವಾಗಿದ್ದಾರೆ. ದೃಷ್ಟಿ ಹಾಗೂ ಶ್ರವಣ ಶಕ್ತಿ ಸ್ವಲ್ಪ ಕ್ಷೀಣಿಸಿದ್ದು ಬಿಟ್ಟರೆ ಉಳಿದಂತೆ ಎಲ್ಲವೂ ಅವರು ಆರೋಗ್ಯವಾಗಿದ್ದಾರೆ. ಸದಾ ಮಕ್ಕಳು ಮೊಮ್ಮಕ್ಕಳೊಂದಿಗೆ ಜೋಕ್ ಮಾಡುತ್ತಾ ಕಾಲ ಕಳೆಯುತ್ತಾರೆ. ಎಂತಹುದೇ ಕಠಿಣ ಸವಾಲುಗಳು ಕಷ್ಟದ ದಿನಗಳು ಬಂದರೂ ಕೂಡ ನನ್ನ ಅಜ್ಜಿ ಎಂದಿಗೂ ಕೂಡ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವುದಿಲ್ಲ. ಬೌನ್ಸ್​ ಬ್ಯಾಕ್ ಆಗುವುದರಲ್ಲಿ ಅವರನ್ನು ಮೀರಿಸಿದವರಿಲ್ಲ. ಎಂದು ಹೇಳುತ್ತಾರೆ ಅವರ ಮೊಮ್ಮಗಳು ಕ್ಯೂ ತೌಹಾ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment