newsfirstkannada.com

ಘಾಟಿ ಸುಬ್ರಮಣ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ 13 ಜೋಡಿಗಳು.. ವಧು-ವರರಿಗೆ ಆಡಳಿತ ಮಂಡಳಿಯಿಂದ ಉಡುಗೊರೆ

Share :

Published February 1, 2024 at 8:49am

    ಘಾಟಿ ಸುಬ್ರಮಣ್ಯ ದೇವಸ್ಥಾನದ ಮಂಡಳಿಯಿಂದ ಕಾರ್ಯಕ್ರಮ

    ವಧು-ವರರಿಗೆ ಆಡಳಿತ ಮಂಡಳಿಯಿಂದ ಏನೇನು ನೀಡಲಾಯಿತು?

    ದೇವಸ್ಥಾನದಲ್ಲಿ ಆಯೋಜಿಸಿದ್ದ ಮಾಂಗಲ್ಯ ಭಾಗ್ಯ ಕಾರ್ಯಕ್ರಮ

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಪ್ರಸಿದ್ಧ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ 13 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಾಂಗಲ್ಯ ಭಾಗ್ಯ ಕಾರ್ಯಕ್ರಮದಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಘಾಟಿ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿಯಿಂದ ವರನಿಗೆ 5 ಸಾವಿರ ರೂಪಾಯಿ, ವಧುವಿಗೆ ಚಿನ್ನದ ತಾಳಿ ಮತ್ತು 10 ಸಾವಿರ ರೂಪಾಯಿ ನೀಡಲಾಯಿತು.

ಇವುಗಳ ಜೊತೆಗೆ ವಧು-ವರರಿಗೆ ಮದುವೆ ಬಟ್ಟೆ ಸೇರಿದಂತೆ ಹಲವು ಮದುವೆ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಈ ವೇಳೆ ಮದುವೆಗೆ ಆಗಮಿಸಿದ್ದ ಬಂಧು-ಬಳಗಕ್ಕೆ ಹೋಳಿಗೆ ಊಟದ ವ್ಯವಸ್ಥೆ ಕೂಡ ಮಾಡಿರುವುದು ವಿಶೇಷವಾಗಿ ಕಂಡು ಬಂದಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಘಾಟಿ ಸುಬ್ರಮಣ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ 13 ಜೋಡಿಗಳು.. ವಧು-ವರರಿಗೆ ಆಡಳಿತ ಮಂಡಳಿಯಿಂದ ಉಡುಗೊರೆ

https://newsfirstlive.com/wp-content/uploads/2024/02/CBL_MARRIAGE_1.jpg

Load More