/newsfirstlive-kannada/media/post_attachments/wp-content/uploads/2024/05/giant-python.jpg)
ಹರಿದ್ವಾರ್: ಲಕ್ಸರ್ ತೆಹಸಿಲ್‌ನ ಇಸ್ಮಾಯಿಲ್‌ಪುರ ಗ್ರಾಮದ ಪಕ್ಕದ ಹೊಲದಲ್ಲಿ ಬರೋಬ್ಬರಿ 13 ಅಡಿ ಉದ್ದದ ಪತ್ತೆಯಾಗಿದೆ. ಈ ಹೆಬ್ಬಾವನ್ನು ನೋಡಿದ ಗ್ರಾಮಸ್ಥರು ಏಕಾಏಕಿ ಬೆಚ್ಚಿಬಿದ್ದಿದ್ದಾರೆ. ಹೆಬ್ಬಾವನ್ನು ನೋಡಿದ ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಯಲ್ಲಿ ಗಂಡ ಸಾವು.. ಸುದ್ದಿ ಗೊತ್ತಾದ್ರೂ ವೋಟ್ ಮಾಡಿದ ಮಹಿಳೆ; ಕಾರಣ ಇದೆ
ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಬರೋಬ್ಬರು 13 ಅಡಿ ಉದ್ದದ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ. ಇನ್ನು, ಈ ಹೆಬ್ಬಾವಿನ ತೂಕ ಸುಮಾರು 1.25 ಕ್ವಿಂಟಾಲ್ ಆಗಿದ್ದು, ಅರಣ್ಯ ಸಿಬ್ಬಂದಿ ಹೆಬ್ಬಾವನ್ನು ರಕ್ಷಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರಂತೆ. ಬಳಿಕ ಗ್ರಾಮಸ್ಥರ ಸಹಾಯದಿಂದ ಅರಣ್ಯ ಸಿಬ್ಬಂದಿ ಹೆಬ್ಬಾವನ್ನು ಯಶಸ್ವಿಯಾಗಿ ರಕ್ಷಿಸಿ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರಂತೆ.
#Uttarakhand | 13 feet giant python found in a village, rescued by the forest department in #Haridwarpic.twitter.com/Iq1nOaRPbJ
— DD News (@DDNewslive) May 7, 2024
ಇನ್ನು, ದಿನದಿಂದ ದಿನಕ್ಕೆ ಬಿರು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಕಾಡು ಪ್ರಾಣಿಗಳು ನೀರು ಅರಸಿ ಮನುಷ್ಯರು ವಾಸಿಸುವ ಪ್ರದೇಶಗಳಿಗೆ ಬರುತ್ತಿವೆ. ಹೀಗಾಗಿ ಜನರು ಭಯ ಪಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಸದ್ಯ ಹೆಬ್ಬಾವನ್ನು ರಕ್ಷಣೆ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us