/newsfirstlive-kannada/media/post_attachments/wp-content/uploads/2024/03/mahakal.jpg)
ಉಜ್ಜಯಿನಿ: ಇಲ್ಲಿನ ಮಹಾಕಾಲ್ ದೇವಸ್ಥಾನದಲ್ಲಿ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿ ಅವಘಡಕ್ಕೆ ಐವರು ಅರ್ಚಕರು ಸೇರಿ ಕನಿಷ್ಠ 13 ಮಂದಿ ಗಾಯಗೊಂಡಿದ್ದಾರೆ.
ಹೋಳಿ ಹಬ್ಬದ ಸಂಭ್ರಮದಂದು ಮಹಾಕಾಳ್ ದೇವಸ್ಥಾನದ ಗರ್ಭಗುಡಿಯಲ್ಲಿ ಭಸ್ಮ ಆರತಿ ನಡೆಯುತ್ತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡದಲ್ಲಿ ಐವರು ಆರ್ಚಕರು ಮತ್ತು ನಾಲ್ವರು ಭಕ್ತರಿಗೆ ಸುಟ್ಟ ಗಾಯಗಳಾಗಿವೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: VIDEO: ರೀಲ್ಸ್ ಮಾಡೋ ಮಂಪರಿನಲ್ಲಿದ್ದ ಮಹಿಳೆ.. ಬೈಕಲ್ಲಿ ಬಂದು ಸರ ಕದ್ದು ಜೂಟ್ ಆದ ಕಳ್ಳ!
ಬೆಂಕಿ ಅವಘಡದ ಬಗ್ಗೆ ಅರ್ಚಕ ಆಶಿಶ್ ಪೂಜಾರಿ ಮಾಡತನಾಡಿದ್ದು, ಭಸ್ಮ ಆರತಿ ವೇಳೆ ಬೆಂಕಿ ಹೊತ್ತಿಕೊಂಡಿದೆ. ಇದು ಅರ್ಚಕರು ಮತ್ತು ಭಕ್ತರ ಮೇಲೆ ಬಿದ್ದಿದೆ. ಇದರಿಂದ 13 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ