newsfirstkannada.com

BREAKING: ಭೀಕರ ದೋಣಿ ದುರಂತ; 14 ಶಾಲಾ ಮಕ್ಕಳು ಸಾವು, ಉಳಿದವರ ಸ್ಥಿತಿ ಗಂಭೀರ

Share :

Published January 18, 2024 at 8:32pm

Update January 18, 2024 at 8:40pm

    ಪ್ರವಾಸಕ್ಕೆಂದು ದೋಣಿಯಲ್ಲಿ ಹೋಗಿದ್ದ ಖಾಸಗಿ ಶಾಲಾ ಮಕ್ಕಳು

    27 ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ದೋಣಿ ಭೀಕರ ದುರಂತ

    14 ಶಾಲಾ ಮಕ್ಕಳ ಶವವನ್ನು ಹೊರಗೆ ತೆಗೆದ ರಕ್ಷಣಾ ಸಿಬ್ಬಂದಿ

ವಡೋದರಾ: ಖಾಸಗಿ ಶಾಲಾ ಮಕ್ಕಳು ಪ್ರವಾಸಕ್ಕೆಂದು ತೆರಳಿದ್ದಾಗ ಗುಜರಾತ್‌ನಲ್ಲಿ ಭೀಕರ ದೋಣಿ ದುರಂತ ಸಂಭವಿಸಿದೆ. ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ದೋಣಿ ವಡೋದರಾದ ಹರ್ನಿ ಕೆರೆಯಲ್ಲಿ ಮಗುಚಿ ಬಿದ್ದಿದ್ದು, 14 ಮಕ್ಕಳು ಸಾವನ್ನಪ್ಪಿದ್ದಾರೆ.

27 ಶಾಲಾ ಮಕ್ಕಳು ಪ್ರವಾಸಕ್ಕೆಂದು ಹರ್ನಿ ಕೆರೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಮಾರ್ಗ ಮಧ್ಯೆ ದೋಣಿ ಅಪಾಯಕ್ಕೆ ಗುರಿಯಾಗಿದೆ. ಇದುವರೆಗೂ 14 ಶಾಲಾ ಮಕ್ಕಳ ಶವವನ್ನು ಹೊರಗೆ ತೆಗೆಯಲಾಗಿದೆ. ಉಳಿದ ಮಕ್ಕಳನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದ ಶಾಲಾ ಮಕ್ಕಳ ಸ್ಥಿತಿಯು ಗಂಭೀರವಾಗಿದೆ.

27 ಶಾಲಾ ವಿದ್ಯಾರ್ಥಿಗಳ ಪೈಕಿ 21 ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಕೆರೆಯಲ್ಲಿ 6 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾಗಿರುವ 6 ಶಾಲಾ ಮಕ್ಕಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ದೋಣಿ ದುರಂತಕ್ಕೆ ಕಾರಣವೇನು?
ಹರ್ನಿ ಕೆರೆಯ ದೋಣಿಯಲ್ಲಿ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಯಾರೊಬ್ಬರು ಲೈಫ್ ಜಾಕೆಟ್ ಧರಿಸದೇ ದೋಣಿ ವಿಹಾರ ಮಾಡುತ್ತಾ ಇದ್ದಿದ್ದೇ ಈ ದುರ್ಘಟನೆಗೆ ಕಾರಣವಾಗಿದೆ. ಕೆರೆಯಲ್ಲಿ ದೋಣಿ ಮಗುಚಿದ ಮೇಲೆ ರಕ್ಷಣಾ ಧಾವಿಸಿದ ಸಿಬ್ಬಂದಿ 14 ವಿದ್ಯಾರ್ಥಿಗಳು ಸಾವನ್ನಪ್ಪಿರೋದನ್ನ ಖಚಿತಪಡಿಸಿದ್ದಾರೆ. 7 ವಿದ್ಯಾರ್ಥಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಭೀಕರ ದೋಣಿ ದುರಂತ; 14 ಶಾಲಾ ಮಕ್ಕಳು ಸಾವು, ಉಳಿದವರ ಸ್ಥಿತಿ ಗಂಭೀರ

https://newsfirstlive.com/wp-content/uploads/2024/01/Gujarat-Boat-Tragedy.jpg

Load More