/newsfirstlive-kannada/media/post_attachments/wp-content/uploads/2024/06/HVR-ACCIDENT-12.jpg)
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನ ಹಳ್ಳಿಯಲ್ಲಿ ಟಿಟಿ ವಾಹನ ಮತ್ತು ಲಾರಿ ಅಪಘಾತದ ಪ್ರಕರಣದಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು.
ಮೃತರಲ್ಲಿ ಟಿಟಿ ವಾಹನ ಚಾಲಕ ಆದರ್ಶ ಕೂಡ ಸೇರಿದ್ದಾರೆ. ಇವರು ತಿಂಗಳ ಹಿಂದಷ್ಟೇ ಆದರ್ಶ ಟಿಟಿ ವಾಹನ ಖರೀದಿ ಮಾಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಬೆಂಗಳೂರು ಮೂಲದವರಿಂದ ಟಿಟಿ ವಾಹನವನ್ನು ಸಂಬಂಧಿಕರ ಹೆಸರಲ್ಲಿ ಖರೀದಿ ಮಾಡಿದ್ದರು. ಕಳೆದ ಒಂದು ತಿಂಗಳ ಹಿಂದೆ ಹೊಸದಾಗಿ ವಾಹನ ಖರೀದಿ ಮಾಡಿದ್ದ. ಖರೀದಿ ವೇಳೆ ಸಾರಿಗೆ ಇಲಾಖೆಯ ನಿಯಮಗಳನ್ನು ರೂಲ್ಸ್ ಫಾಲೋ ಮಾಡಿರೋದು ಕನ್ಫರ್ಮ್ ಆಗಿದೆ. ಇನ್ಸೂರೆನ್ಸ್, ಪಿಟ್ನೆಸ್ ಹಾಗೂ ಟ್ಯಾಕ್ಸ್ ಈ ಮೂರು ಕೂಡ ಕ್ಲಿಯರ್ ಇದೆ.
ಇದನ್ನೂ ಓದಿ:ಮನೆ ದೇವರ ಪೂಜೆಗಾಗಿ ಹೋಗಿದ್ದರು.. ಒಂದು ಕುಟುಂಬದಲ್ಲಿ ಬದುಕಿದ್ದು ಓರ್ವ ಯುವತಿ ಮಾತ್ರ
ಈ ಹಿನ್ನೆಲೆಯಲ್ಲಿ ತಂದೆ-ತಾಯಿ ಹಾಗೂ ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆ ತೆರಳಿದ್ದ. ಆದರ್ಶ ಮತ್ತು ಅವರ ಕುಟುಂಬದವರು ಸಂಪ್ರದಾಯದಂತೆ ಪ್ರತಿ ವರ್ಷವೂ ಮನೆ ದೇವರ ದರ್ಶನಕ್ಕೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ