Advertisment

36 ಗಂಟೆ.. 13 ಅಧಿಕಾರಿಗಳು.. ಆಪರೇಷನ್ ಡಿ..! ದರ್ಶನ್ ಬಂಧನ ನೀವು ಅಂದುಕೊಂಡಷ್ಟು ಸುಲಭ ಇರಲಿಲ್ಲ..!

author-image
Ganesh
Updated On
ದರ್ಶನ್ ಜೈಲಿಗೆ ಹೋಗಿರೋದು ಆಘಾತವೇ? ಇದೇನು ಮೊದಲಲ್ಲ.. ಸುನಾಮಿಯನ್ನೇ ಎದುರಿಸಿದೆ ಚಂದನವನ!
Advertisment
  • ದರ್ಶನ್ ಬಂಧಿಸಲು ನಡೆದಿತ್ತು 36 ಗಂಟೆ ಕಾರ್ಯಾಚರಣೆ
  • ಮೃತದೇಹ ಸಿಕ್ಕ ಕ್ಷಣದಿಂದಲೇ ಶುರುವಾಗಿತ್ತು ಹಂಟಿಂಗ್
  • ಆರೋಪಿಗಳ ಬಂಧನದವರೆಗಿನ ರೋಚಕ ಆಪರೇಷನ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಪವಿತ್ರ ಗ್ಯಾಂಗ್​ ಬಂಧನಕ್ಕೆ ಒಳಗಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ತೀವ್ರ ವಿಚಾರಣೆ ಶುರುವಾಗಿದೆ. ಆರೋಪ ಪ್ರಕರಣದಲ್ಲಿ ಜನಪ್ರಿಯ ನಟ ದರ್ಶನ್​ರನ್ನು ಅರೆಸ್ಟ್ ಮಾಡಿದ್ದೇ ಒಂದು ರೋಚಕ ಕತೆಯಾಗಿದೆ.

Advertisment

ಪ್ರಕರಣದ ತನಿಖೆ ಮುಕ್ತಾಯದ ಹಂತದಲ್ಲಿರುವಾಗ ಒಂದೊಂದೇ ವಿಚಾರಗಳು ಹೊರ ಬರುತ್ತಿವೆ. ಮಾಹಿತಿಗಳ ಪ್ರಕಾರ.. ದರ್ಶನ್ ಬಂಧಿಸಲು ಬರೋಬ್ಬರಿ 36 ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದೆ. ಮೃತದೇಹ ಸಿಕ್ಕ ಕ್ಷಣದಿಂದಲೇ ಹಂಟಿಂಗ್ ಶುರುವಾಗಿತ್ತು. 13 ಅಧಿಕಾರಿಗಳಿಂದ 36 ಗಂಟೆಗಳ ಕಾಲ ನಡೆದ ರೋಚಕ ಕಾರ್ಯಾಚರಣೆ ಥ್ರಿಲ್ಲಿಂಗ್ ಆಗಿದೆ. ವಿಶೇಷ ಅಂದರೆ ‘ಆಪರೇಷನ್ ಡಿ’ ಉಸ್ತುವಾರಿ ವಹಿಸಿದ್ದೇ ಕಮಿಷನರ್ ಬಿ.ದಯಾನಂದ್. ಈ ತನಿಖಾ ತಂಡ ಹೊರತುಪಡಿಸಿ ಯಾರಿಗೂ ಸುಳಿವೇ ಇರಲಿಲ್ಲ.

ಇದನ್ನೂ ಓದಿ:ಟೀಂ ಇಂಡಿಯಾ ಸೋಲೇ ಇಲ್ಲದೇ ಮುನ್ನುಗ್ತಿದ್ದರೂ ಫ್ಯಾನ್ಸ್​ಗೆ ಭಾರೀ ಬೇಸರ.. ಅದಕ್ಕೆಲ್ಲ ಕಾರಣ ಈತ..!

publive-image

36 ಗಂಟೆ.. 13 ಅಧಿಕಾರಿಗಳು..!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಬೆಳಕಿಗೆ ಬರ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಪ್ಲಾನ್ ಮಾಡಿದ್ದರು. ಠಾಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಪೊಲೀಸರಿದ್ರೂ, ಗುಟ್ಟು ರಟ್ಟಾಗದಂತೆ ನೋಡಿಕೊಳ್ಳಲಾಗಿತ್ತು. ಕೇವಲ 13 ಪೊಲೀಸರಲ್ಲೇ ಸೀಕ್ರೇಟ್ ಆ್ಯಕ್ಷನ್ ಪ್ಲಾನ್ ನಡೆದಿತ್ತು. ಡಿಸಿಪಿ ಗಿರೀಶ್, ಎಸಿಪಿ ಚಂದನ್ ಹಾಗೂ ಎಸಿಪಿ ಭರತ್ ರೆಡ್ಡಿ, ಇನ್ಸ್​ಪೆಕ್ಟರ್ ಗಿರೀಶ್ ನಾಯ್ಕ್, ಇನ್ಸ್​ಪೆಕ್ಟರ್ ಭರತ್ ನೇತೃತ್ವದ ತಂಡ ಆರೋಪಿಗಳ ಜಾಡನ್ನು ಹಿಡಿದು ಹೊರಟಿತ್ತು.

Advertisment

ಪ್ರಕರಣದಲ್ಲಿ ಜೂನ್ 9ರಂದು ಸಂಜೆ ನಾಲ್ವರು ಆರೋಪಿಗಳು ಪೊಲೀಸರಿಗೆ ಸರೆಂಡರ್ ಆಗಿದ್ದರು. ಆರೋಪಿ ರಾಘವೇಂದ್ರ, ಕಾರ್ತಿಕ್ ಸೇರಿ ಒಟ್ಟು ನಾಲ್ವರು ಶರಣಾಗಿದ್ದರು. ತಾವಾಗಿಯೇ ಬಂದು ಸರೆಂಡರ್ ಆಗಿರೋದ್ರಿಂದ ಪೊಲೀಸರಿಗೆ ಸಾಕಷ್ಟು ಅನುಮಾನ ಕಾಡಿತ್ತು. ಆರೋಪಿ ರಾಘವೇಂದ್ರ ಪೊಲೀಸರ ಪ್ರಶ್ನೆಗೆ ತಡಬಡಾಯಿಸುತ್ತಿದ್ದ. ಹೀಗಾಗಿ ಆರೋಪಿಗಳ ಬಗ್ಗೆ ಕಮೀಷನರ್​ಗೆ ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಮಗನಿಂದ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಗೊತ್ತಿರಲಿಲ್ಲ -ಪವನ್ ತಾಯಿ ಕಣ್ಣೀರು

publive-image

ತಾವೇ ಸರೆಂಡರ್ ಆಗಿದ್ದಾರೆ ಅಂದ್ರೆ ಅನುಮಾನ ಇದೆ ಎಂದ ಕಮಿಷನರ್ ಡಿಸಿಪಿ ಗಿರೀಶ್ ಅವರನ್ನು ಠಾಣೆಗೆ ಕಳುಹಿಸಿದ್ದರು. ಡಿಸಿಪಿ ಗಿರೀಶ್ ಕಾಮಾಕ್ಷಿಪಾಳ್ಯ ಠಾಣೆಗೆ ಆಗಮಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿಗಳ ಬಾಯಲ್ಲಿ ಕೇಳಿ ನಟ ದರ್ಶನ್ ಹೆಸರು ಕೇಳಿಬಂದಿದೆ. ದರ್ಶನ್ ಹೆಸರು ಕೇಳುತ್ತಲೇ ಪೊಲೀಸರು ತನಿಖೆಯ ತೀವ್ರತೆಯನ್ನು ಮತ್ತಷ್ಟು ಬದಲಾಯಿಸಿ, ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

Advertisment

ನಾಲ್ವರು ಆರೋಪಿಗಳ ಮೊಬೈಲ್ ವಶಕ್ಕೆ ಪಡೆದು ಖುದ್ದಾಗಿ ಪರಿಶೀಲನೆ ಮಾಡಿದ್ದಾರೆ. ನಂತರ ಸಿಡಿಆರ್ ತೆಗೆದು ಕಾಲ್ ಡಿಟೇಲ್ಸ್​ ಪರಿಶೀಲಿಸಿದ್ದಾರೆ. ಬಳಿಕ ಘಟನಾ ಸ್ಥಳದ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ. ಎವಿಡೆನ್ಸ್ ಲಭ್ಯವಾಗುತ್ತಿದ್ದಂತೆ ಪೊಲೀಸರಿಂದ ಆ್ಯಕ್ಷನ್ ಶುರುವಾಗಿತ್ತು.

ಇದನ್ನೂ ಓದಿ:Rain Alert: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದ ಭರ್ಜರಿ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ

publive-image

ರೋಚಕ ‘ಆಪರೇಷನ್ ಡಿ’ ಹೇಗಿತ್ತು..?
ದರ್ಶನ್ ಬಂಧನಕ್ಕೆ ತಾಂತ್ರಿಕ ಎವಿಡೆನ್ಸ್ ಸಿಗುತ್ತಿದ್ದಂತೆ ಬೇಟೆ ಶುರು ಮಾಡಿದ್ದರು. ಜೂನ್ 10ರಂದು ತಾಂತ್ರಿಕ ಸಾಕ್ಷ್ಯಗಳನ್ನ ಪೊಲೀಸರು ಕೆಲ ಹಾಕಿದ್ದರು. ಮರುದಿನ ಜೂನ್ 11ಕ್ಕೆ ಬೆಳಗ್ಗೆಯೇ ಮೈಸೂರಿಗೆ ಪೊಲೀಸರು ದೌಡಾಯಿಸಿದ್ದರು. ವಿಜಯನಗರ ಎಸಿಪಿ ಚಂದನ್ ಅಂಡ್ ಟೀಂ ನೇರವಾಗಿ ನಟ ದರ್ಶನ್ ವರ್ಕೌಟ್ ಮಾಡುತ್ತಿದ್ದ ಜಿಮ್​ಗೆ ಎಂಟ್ರಿ ಕೊಟ್ಟಿತ್ತು. ಎಂಟ್ರಿ ಆಗುತ್ತಿದ್ದಂತೆ ಮುಲಾಜಿಲ್ಲದೆ ದರ್ಶನ್ ಅವರನ್ನು ಕರೆತಂದಿದ್ದರು. ಈ ವೇಳೆ ನನ್ನ ಪ್ರೈವೇಟ್ ವಾಹನದಲ್ಲೇ ಬರ್ತೀನಿ ಎಂದು ದರ್ಶನ್ ಹೇಳ್ತಾರೆ. ಮರ್ಯಾದೆ ಪ್ರಶ್ನೆ ಎಂದು ಪ್ರೈವೇಟ್ ಗಾಡೀಲಿ ಬರ್ತೀನಿ ಎಂದಿದ್ದರು. ದರ್ಶನ್ ಮನವಿಗೆ ಕ್ಯಾರೆ ಎನ್ನದೆ ಪೊಲೀಸ್ ಜೀಪ್ ಹತ್ತಿಸಿಕೊಂಡು ಪೊಲೀಸರು ಬಂದಿದ್ದರು.

Advertisment

ಇದನ್ನೂ ಓದಿ:ಬೆಳ್ಳಂಬೆಳಗ್ಗೆ.. ಬೆಂಗಳೂರು-ಮೈಸೂರು‌ ಎಕ್ಸ್​​ಪ್ರೆಸ್ ವೇನಲ್ಲಿ ಸರಣಿ ಅಪಘಾತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment