newsfirstkannada.com

ಉತ್ತರಖಾಂಡ್ ದುರಂತದಲ್ಲಿ 9 ಮಂದಿ ಕನ್ನಡಿಗರು ಸಾವು; ಸೇಫಾಗಿ ಬೆಂಗಳೂರಿಗೆ ಬಂದ 13 ಮಂದಿ!

Share :

Published June 6, 2024 at 11:19pm

Update June 6, 2024 at 11:21pm

  ಉತ್ತರಕಾಶಿ ಜಿಲ್ಲೆಯ ಸಹಸ್ತ್ರತಾಲ್ ಟ್ರಕ್ಕಿಂಗ್​ಗೆ ಹೋಗಿದ್ದ 22 ಮಂದಿ

  ಕರ್ನಾಟಕದ 5, ಮಹಾರಾಷ್ಟ್ರದ ಮೂವರು ಸೇರಿ 9 ಮಂದಿ ಸಾವು

  ಈಗಾಗಲೇ ಉತ್ತರಾಖಂಡ್ ತಲುಪಿರುವ ಸಚಿವ ಕೃಷ್ಣಬೈರೇಗೌಡ

ರಾಜ್ಯದ 21 ಚಾರಣಿಗರು ಹಾಗೂ ಓರ್ವ ಗೈಡ್​ ಒಳಗೊಂಡ ತಂಡ ಮೇ 28ರಂದು ಉತ್ತರಾಖಂಡಕ್ಕೆ ಟ್ರಕ್ಕಿಂಗ್​ಗೆ ಹೋಗಿದ್ದರು. ಆದ್ರೆ, ದುರಂತ ಅಂದ್ರೆ ಜೂನ್ 4ರಂದು​ ಟ್ರಕ್ಕಿಂಗ್​ ಹೋದವರಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ಮೃತದೇಹವನ್ನ ಉತ್ತರಕಾಶಿಯಿಂದ ಡೆಹ್ರಾಡೂನ್​ಗೆ ಸಾಗಿಸಿದ್ದು, ಇದೀಗ 13 ಪ್ರವಾಸಿಗರು ಬೆಂಗಳೂರಿಗೆ ಆಗಮಿಸಿದ್ದಾರೆ.

ಇದನ್ನೂ ಓದಿ: VIDEO: ಏರ್‌ಪೋರ್ಟ್‌ನಲ್ಲಿ ಕಂಗನಾ ರನೌತ್‌ಗೆ ಕಪಾಳ ಮೋಕ್ಷ; ಅಸಲಿಗೆ ಆಗಿದ್ದೇನು?

ಮೇ 28ರಂದು ಬೆಂಗಳೂರಿನಿಂದ ಖುಷಿ ಖುಷಿಯಾಗಿ ಚಾರಣಕ್ಕೆ ಹೊರಟ್ಟಿದ್ದವರ ಪಾಲಿಗೆ ಯಮನ ದರ್ಶನವಾಗಿತ್ತು. ಟ್ರಕ್ಕಿಂಗ್​ ಹೊರಟ 22 ಮಂದಿಯಲ್ಲಿ 9 ಮಂದಿ ಸಾವಿಗೀಡಾಗಿದ್ದು, 13 ಜನರನ್ನು ರಕ್ಷಣೆ ಮಾಡಲಾಗಿದೆ. ಸದ್ಯ 13 ಜನ ಪ್ರವಾಸಿಗರು ಬೆಂಗಳೂರಿಗೆ ಬಂದು ತಲುಪಿದ್ದಾರೆ. ಇನ್ನು, ಖುದ್ದು ಕಂದಾಯ ಸಚಿವರೇ ಉತ್ತರಕಾಶಿಗೆ ಭೇಟಿ ನೀಡಿದ್ದು, ಉತ್ತರಾಖಂಡ್ ಸಿಎಸ್ ಜೊತೆ ಮಾತುಕತೆ ನಡೆಸಿ, ಮೃತದೇಹ ರಾಜ್ಯಕ್ಕೆ ಸಾಗಿಸಲು ವಿಮಾನ ವ್ಯವಸ್ಥೆ ಕಲ್ಪಿಸಿದ್ದಾರೆ.

ಕರ್ನಾಟಕ ಪರ್ವತಾರೋಹಣ ಸಂಘದ ವತಿಯಿಂದ ಹೋಗಿದ್ದ ಟೀಂ, ಉತ್ತರಕಾಶಿಯಿಂದ 35 ಕಿ.ಮೀ ದೂರದ ಸಹಸ್ತ್ರತಾಲ್​ ಮಯಳಿಗೆ ಎಂಟ್ರಿಕೊಟ್ಟಿತ್ತು. ಸಹಸ್ತ್ರತಾಲ್​ನ ಎತ್ತರದ ಪ್ರದೇಶದಲ್ಲಿ ಜೂ.4 ರಂದು ಬೆಳಗ್ಗೆ ಚಾರಣ ಆರಂಭ ಮಾಡಿತ್ತು. ಲಾಂಬತಾಲ್ ಅನ್ನೋ ಕ್ಯಾಂಪ್​ನಿಂದ ಸಹಸ್ತ್ರತಾಲ್ ಸರೋವರಕ್ಕೆ ಭೇಟಿ ನೀಡಿತ್ತು. ಚಾರಣದ ಗಮ್ಯಸ್ಥಾನವನ್ನು ತಲುಪಿ ಮತ್ತೆ ಶಿಬಿರಕ್ಕೆ ತಂಡ ಹಿಂದಿರುಗಿದೆ. ಆದ್ರೆ, ಅಲ್ಲಿಂದ ವಾಪಸ್ ಬರಲು ಸಾಧ್ಯವಾಗದೆ ಪ್ರವಾಸಿಗರಿಗೆ ದಾರಿ ಮಿಸ್ ಆಗಿದೆ. ಹಿಮ ಚಂಡಮಾರುತದಿಂದಾಗಿ ಸಂಪೂರ್ಣ ಹದಗೆಟ್ಟಿದ್ದರಿಂದ ಸಂಕಷ್ಟ ಎದುರಾಗಿದೆ.
ಹೀಗಾಗಿ ಎಲ್ಲಾ ಚಾರಣಿಗರು ಅದೇ ಸ್ಥಳದಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ. ರಾತ್ರಿ ಚಳಿ ಮತ್ತು ಅನಾನುಕೂಲ ವಾತಾವರಣದಿಂದ ಮುಂದೆ ಸಾಗಲಾರದೇ ಕುಳಿತಲ್ಲಿಯೇ ಸಾವಿಗೀಡಾಗಿದ್ದಾರೆ.

ಮರು ದಿನ ಬೆಳಿಗ್ಗೆ ಅವರ ಜೊತೆಗೆ ಇದ್ದ ಗೈಡ್ ಸುರಕ್ಷಿತ ಸ್ಥಳಕ್ಕೆ ಹೊರಟಿದ್ದಾನೆ. ಫೋನ್ ಮೂಲಕ ಸಂಪರ್ಕ ಮಾಡಿ ವಿಷಯ ಮುಟ್ಟಿಸಿದ್ದಾನೆ. ಬಳಿಕ ಬದುಕುಳಿದ ಕೆಲ ಪ್ರವಾಸಿಗರು ತಮ್ಮ ಟೆಂಟ್​ಗೆ ಬಂದು ಊಟ ಮಾಡಿ ವಿಶ್ರಾಂತಿ ಪಡೆದಿದ್ದಾರೆ. 4ನೇ ತಾರಿಖು ರಾತ್ರಿ ಕೂಡ ಟೆಂಟ್​ನಲ್ಲಿಯೇ ಕೆಲವರು ಮೃತಪಟ್ಟಿದ್ದಾರೆ.

ಇನ್ನು, ಭಾರತೀಯ ವಾಯು ಸೇನೆ ಹಾಗೂ SDRF ತಂಡ ಸತತ ಪ್ರಯತ್ನದಿಂದ 13 ಮಂದಿ ಬಚಾವ್​ ಆಗಿದ್ದು, ಮೃತದೇಹಗಳು ಕೂಡ ಪತ್ತೆಯಾಗಿದೆ. ಮೃತಪಟ್ಟವರ ಪೈಕಿ ಕರ್ನಾಟಕದ ಐವರು, ಮಹಾರಾಷ್ಟ್ರದ ಮೂವರು, ಇನ್ನೊಬ್ಬರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಖಾಂಡ್ ದುರಂತದಲ್ಲಿ 9 ಮಂದಿ ಕನ್ನಡಿಗರು ಸಾವು; ಸೇಫಾಗಿ ಬೆಂಗಳೂರಿಗೆ ಬಂದ 13 ಮಂದಿ!

https://newsfirstlive.com/wp-content/uploads/2024/06/uttarkahand2.jpg

Load More