ಪೋಷಕರೇ ಎಚ್ಚರ.. ಮನೆ ಬಳಿ ಆಟವಾಡುತ್ತಿದ್ದಾಗಲೇ ಪ್ರಾಣಬಿಟ್ಟ ಬಾಲಕ; ಆಗಿದ್ದೇನು..?

author-image
Veena Gangani
Updated On
ಪೋಷಕರೇ ಎಚ್ಚರ.. ಮನೆ ಬಳಿ ಆಟವಾಡುತ್ತಿದ್ದಾಗಲೇ ಪ್ರಾಣಬಿಟ್ಟ ಬಾಲಕ; ಆಗಿದ್ದೇನು..?
Advertisment
  • ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿಯಲ್ಲಿ ಅವಘಡ
  • 13 ವರ್ಷದ ಅಚುತ್‌ಕುಮಾರ್ ಸಾವಿಗೀಡಾದ ಬಾಲಕ
  • ಮಗನನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಪೋಷಕರು

ತುಮಕೂರು: ಮಕ್ಕಳಿಂದ ಮನೆಯಲ್ಲಿ ಪೋಷಕರು ಎಷ್ಟು ಎಚ್ಚರದಿಂದ ಇದ್ದರು ಕಡಿಮೆನೇ. ಏಕೆಂದರೆ ಪೋಷಕರು ಎಷ್ಟೇ ಕೆಲಸದಲ್ಲಿ ಬ್ಯುಸಿಯಾಗಿದ್ದರು ಮಕ್ಕಳ ಬಗ್ಗೆ ಗಮನ ಹರಿಸಲೇಬೇಕು. ಇಲ್ಲವಾದರೇ ಮಕ್ಕಳಿಗೆ ಪ್ರಾಣಕ್ಕೆ ಆಪತ್ತು ಬರಬಹುದು. ಇದಕ್ಕೆ ಸಾಕ್ಷಿ ಎಂಬಂತೆ ವಿದ್ಯುತ್ ಶಾಕ್​ನಿಂದ ಬಾಲಕ ಬಲಿಯಾಗಿರೋ ಘಟನೆ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದಿದೆ. ಅಚುತ್‌ ಕುಮಾರ್ (13) ಮೃತ ಬಾಲಕ.

ಇದನ್ನೂ ಓದಿ: Monsoon rain ಕರ್ನಾಟಕದಲ್ಲಿ ಮಾತ್ರ ಮಳೆನಾ.. ಪಕ್ಕದ ರಾಜ್ಯಗಳ ಪರಿಸ್ಥಿತಿಗಳು ಹೇಗಿವೆ..?

publive-image

ಬಾಲಕ ಅಚುತ್‌ ಕುಮಾರ್ ಮನೆ ಬಳಿ ಆಟವಾಡಿಕೊಂಡಿದ್ದ. ಈ ವೇಳೆ ಮನೆಗೆ ಎಳೆದಿದ್ದ ವಿದ್ಯುತ್ ವೈರ್ ಸ್ಕಿನ್ ಆಗಿತ್ತು. ಮನೆ ಮೇಲೆನ ಶೀಟ್​ಗೆ ವೈಯರ್ ತಗುಲಿದೆ. ಬಳಿಕ ಮನೆ ಹೊರಭಾಗದ ಕಬ್ಬಿಣಕ್ಕೆ ವಿದ್ಯುತ್ ಪಸರಿಸಿದೆ. ಈ ವೇಳೆ ಮನೆಯ ಮೆಟ್ಟಿಲಿನ ಗ್ರಿಲ್ ಮುಟ್ಟಿದಾಗ ಏಕಾಏಕಿ ಬಾಲಕನಿಗೆ ವಿದ್ಯುತ್ ಶಾಕ್ ತಗುಲಿದೆ. ಪರಿಣಾಮ ​ಬಾಲಕ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

publive-image

ಇನ್ನೂ ಮಗನನ್ನು ಕಳೆದುಕೊಂಡಿದ್ದಕ್ಕೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕನಾಯಕನಹಳ್ಳಿಯಲ್ಲಿ ಪದೇ ಪದೇ ವಿದ್ಯುತ್ ಅವಘಡಗಳು ಸಂಭವಿಸುತ್ತಲೇ ಇವೆ. ಈಗಾಗಲೇ ವಿದ್ಯುತ್ ಅವಘಡದಿಂದ ಇಬ್ಬರು ಜೀವಬಿಟ್ಟಿದ್ದರು. ಇದೀಗ ಮತ್ತೆ 13 ವರ್ಷದ ಬಾಲಕ ನಿಧನ ಆಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment