/newsfirstlive-kannada/media/post_attachments/wp-content/uploads/2024/11/Vaibhav.jpg)
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿನಲ್ಲಿ ಹೊಸ ಇತಿಹಾಸ ದಾಖಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡ ಕೇವಲ 13 ವರ್ಷದ ಹುಡುಗನ ಮೇಲೆ ಕೋಟಿ ಕೋಟಿ ಸುರಿದಿದೆ.
ಟೀಮ್ ಇಂಡಿಯಾದ ಅಂಡರ್ 19 ಕ್ರಿಕೆಟರ್ ಇವರು. ಹೆಸರು ವೈಭವ್ ಸೂರ್ಯವಂಶಿ. ಇವರು 2011 ಮಾರ್ಚ್ 27ನೇ ತಾರೀಕು ಜನಿಸಿದ್ರು. ವೈಭವ್ ಅವರಿಗೆ 13 ವರ್ಷ 243 ದಿನಗಳಾಗಿವೆ. ಲೆಫ್ಟ್ ಹ್ಯಾಂಡ್ ಬ್ಯಾಟರ್ ಆಗಿದ್ದು, ಜತೆಗೆ ಸ್ಲೋ ಲೆಫ್ಟ್ ಆರ್ಮ್ ಬೌಲರ್ ಕೂಡ ಹೌದು.
ವೈಭವ್ ಸೂರ್ಯವಂಶಿಗೆ ಭಾರೀ ಪೈಪೋಟಿ
ಇನ್ನು, ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಫಸ್ಟ್ ಬಿಡ್ ಮಾಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡ. ಬಳಿಕ 13 ವರ್ಷದ ಹುಡುಗನ ಹಿಂದೆ ಬಿದ್ದಿದ್ದು ರಾಜಸ್ಥಾನ್ ರಾಯಲ್ಸ್ ಟೀಮ್. ಕೊನೆಗೂ 1.10 ಕೋಟಿ ನೀಡಿ ಇವರನ್ನು ರಾಜಸ್ಥಾನ್ ರಾಯಲ್ಸ್ ಖರೀದಿ ಮಾಡಿದೆ.
ಯಾರು ಈ ವೈಭವ್?
ಇವರು ಮೂಲತಃ ಬಿಹಾರದವರು. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸೋ ಇವರು ಭಾರತ ಅಂಡರ್ 19 ತಂಡದ ಪರ ಆಡುತ್ತಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 5 ಪಂದ್ಯ ಆಡಿದ್ದು, 100 ರನ್ ಕಲೆ ಹಾಕಿದ್ದಾರೆ. ಈ ಪೈಕಿ 18 ಫೋರ್, 1 ಸಿಕ್ಸರ್ ಚಚ್ಚಿದ್ರು. ಒಂದು ಟಿ20 ಪಂದ್ಯ ಆಡಿದ್ದು, 13 ರನ್ ಗಳಿಸಿದ್ರು.
ಇದನ್ನೂ ಓದಿ: ಅವಕಾಶ ಇದ್ರೂ ವಿಲ್ ಜಾಕ್ಸ್ ಖರೀದಿ ಮಾಡದ ಆರ್ಸಿಬಿ; ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ