newsfirstkannada.com

ಮದ್ವೆ ಮಾಡಿಲ್ಲ ಅಂದ್ರೆ ಶಾಲೆಗೆ ಹೋಗಲ್ಲ ಎಂದ ಮಗ.. 13 ವರ್ಷದ ಸುಪುತ್ರನ ಹಠಕ್ಕೆ ಮಣಿದ ಪೋಷಕರು..!

Share :

Published February 24, 2024 at 2:07pm

    ಕಾನೂನು ಮೀರಿ ಮಕ್ಕಳಿಗೆ ಮದುವೆ ಮಾಡಿದ ಪೋಷಕರು

    ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ ವಿಡಿಯೋ

    ಮಕ್ಕಳ ಮದುವೆ ಬಗ್ಗೆ ನಡೀತಿರೋ ಚರ್ಚೆಗಳು ಏನೇನು ಗೊತ್ತಾ?

ಮದುವೆ ಆಗಲು ಸರಿಯಾದ ವಯಸ್ಸು ಎಷ್ಟಿರಬೇಕು ಎಂದು ಈಗಲೂ ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ಪ್ರತಿಯೊಬ್ಬರ ನಿಲುವು ಕೂಡ ಭಿನ್ನ, ವಿಭಿನ್ನವಾಗಿದೆ. ಅಭಿಪ್ರಾಯಗಳು ವಿಭಿನ್ನವಾಗಿದ್ದರೂ ಸಹ, ಕೆಲವು ಭಾಗಗಳಲ್ಲಿ ತಮ್ಮ ಹಳೆಯ ಸಂಪ್ರದಾಯಗಳಂತೆ ಮದುವೆಯ ವಯಸ್ಸು ಮತ್ತು ವಿವಾಹ ಕಾರ್ಯಕ್ರಮಗಳನ್ನು ನಿರ್ಧರಿಸುವ ಅನೇಕ ಸಮಾಜಗಳಿವೆ. ಆದರೆ ಮಗುವಿನ ಹಠಮಾರಿತನಕ್ಕೆ ಪೋಷಕರು ಬಲವಂತವಾಗಿ ಮದುವೆ ಮಾಡಿಸಿರೋದನ್ನು ನೀವು ಎಲ್ಲಿಯೂ ಕೇಳಿರಲ್ಲಿಕ್ಕಿಲ್ಲ.

ಅದೂ ಮದುವೆಯ ನಿಗದಿತ ವಯಸ್ಸಿನಲ್ಲಿ ಅಲ್ಲ, ಕೇವಲ 13 ವರ್ಷಕ್ಕೆ. ಹೌದು, ಪಾಕಿಸ್ತಾನದಲ್ಲಿ ಇಂತಹದ್ದೊಂದು ಮದುವೆ ನಡೆದಿದೆ. ಇಬ್ಬರು ಮಕ್ಕಳು ವಧು-ವರರಾಗಿ ಮದುವೆಯಾಗಿದ್ದಾರೆ. ಮದುವೆ ಸಂಭ್ರಮದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಪಾಕ್​​ನಲ್ಲಿ ನಡೆದ ಈ ಮದುವೆಯ ವಿಡಿಯೋವನ್ನು ಸಲಾಮ್ ಪಾಕಿಸ್ತಾನ್ ಎಂಬ ಇನ್‌ಸ್ಟಾಗ್ರಾಮ್ ಹಂಚಿಕೊಂಡಿದೆ. ವಿಡಿಯೋದಲ್ಲಿ 13 ವರ್ಷದ ಮಗು ವರನಂತೆ ಪೋಸ್ ನೀಡುತ್ತಿದೆ. ವಧುವಿಗೆ ಕೇವಲ 12 ವರ್ಷ. ಕೆಲವು ಸುದ್ದಿಗಳ ಪ್ರಕಾರ, ಈ ಮಗು ಹೆತ್ತವರ ಬಳಿ ಮದುವೆ ಮಾಡಿಸುವಂತೆ ಹಠ ಮಾಡುತ್ತಿದ್ದನಂತೆ. ಮದುವೆ ಮಾಡದಿದ್ದರೆ ನಾನು ಸ್ಕೂಲ್​​ಗೆ ಹೋಗೋದಿಲ್ಲ ಎಂದು ಷರತ್ತು ಹಾಕಿದ್ದನಂತೆ. ಕೊನೆಗೂ ಮಗುವಿನ ಒತ್ತಾಯಕ್ಕೆ ಮಣಿದ ಪಾಲಕರು, ಇಬ್ಬರಿಗೂ ಮದುವೆ ಮಾಡಿದ್ದಾರೆ.

ಆದರೆ ಪಾಕಿಸ್ತಾನದಲ್ಲಿ ಮದುವೆಯ ವಯಸ್ಸು ಗಂಡುಮಕ್ಕಳಿಗೆ 18 ವರ್ಷಗಳು ಮತ್ತು ಹುಡುಗಿಯರಿಗೆ 16 ವರ್ಷ. ವೀಡಿಯೊ ವೈರಲ್ ಬೆನ್ನಲ್ಲೇ ಬಳಕೆದಾರರು ಇಂದು ತುಂಬಾ ಓವರ್ ಆಯ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಪ್ರೌಢಾವಸ್ಥೆ ಪಡೆಯದೆ ಮದುವೆಯಾಗುವುದಕ್ಕೆ ನಿಷೇಧ ಇದೆ. ಒಂದು ವೇಳೆ ಅವರು ಮದುವೆಯಾದರೂ ಕಾನೂನುಬದ್ಧವೆಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇದು ಆತನ ಸುಮ್ಮನಿರಿಸಲು ಮಾಡಿದ ಮದುವೆಯೂ ಆಗಿರಬಹುದು ಎಂದು ಕೆಲವರು ಕಮೆಂಟ್ ಮಾಡ್ತಿದ್ದಾರೆ.

View this post on Instagram

A post shared by Salaam! Pakistan (@salaam_pakistan)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ವೆ ಮಾಡಿಲ್ಲ ಅಂದ್ರೆ ಶಾಲೆಗೆ ಹೋಗಲ್ಲ ಎಂದ ಮಗ.. 13 ವರ್ಷದ ಸುಪುತ್ರನ ಹಠಕ್ಕೆ ಮಣಿದ ಪೋಷಕರು..!

https://newsfirstlive.com/wp-content/uploads/2024/02/MARRIAGE-2.jpg

Load More