/newsfirstlive-kannada/media/post_attachments/wp-content/uploads/2025/03/YAMUNA-CLEANING.jpg)
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ದಾಖಲಿಸಿ ಸರ್ಕಾರವನ್ನು ರಚನೆ ಮಾಡಿಯಾಗಿದೆ. ಈಗ ಚುನಾವಣೆಗೂ ಮುಂಚೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಒಂದೊಂದು ಹೆಜ್ಜೆಯನ್ನು ಮುಂದಿಡುತ್ತಿದೆ. ಅದರ ಮೊದಲ ಮೆಟ್ಟಿಲಾಗಿ ಈಗ ಯಮುನಾ ನದಿಯನ್ನು ಶುದ್ಧಗೊಳಿಸುವ ಕಾರ್ಯಕ್ಕೆ ಇಳಿದಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಯಮುನಾ ನದಿಯನ್ನು ಕುಡಿಯಲು ಯೋಗ್ಯ ನೀರಾಗುವ ನದಿಯಾಗಿ ಬದಲಾಯಿಸುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿತ್ತು. ಆ ನಿಟ್ಟಿನಲ್ಲಿ ಈಗ ಮೊದಲ ಹೆಜ್ಜೆಯನ್ನು ಇಟ್ಟಿದೆ.
ಯಮುನಾ ನದಿಗೆ ಎಲ್ಲಾ ಡ್ರೈನ್ಸ್​ ವಾಟಟರ್​ ಸೆವೆಜ್ ಟ್ರೇಟ್ಮೆಂಟ್ ಪ್ಲಾಂಟ್​ನೊಂದಿಗೆ ಸಂಪರ್ಕ ಹೊಂದಿವೆ. ಅದರ ಪ್ರಮಾಣ ನದಿಯಲ್ಲಿ ತ್ಯಾಜ್ಯ ನೀರು ಹರಿಯುವುದನ್ನು ತಡೆಗಟ್ಟಲು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸದ್ಯ ದೆಹಲಿಯ ಬಿಜೆಪಿ ಸರ್ಕಾರ ಯಮುನೆಯನ್ನು ಶುದ್ಧಗೊಳಿಸಲು ಸಜ್ಜಾಗಿದ್ದು. ಕಳೆದ 10 ದಿನಗಳಿಂದ ಯಮುನಾ ನದಿಯಿಂದ ತ್ಯಾಜ್ಯವನ್ನು ತೆಗೆಯುವ ಕಾರ್ಯ ಆರಂಭಗೊಂಡಿದೆ. ಈ ಹತ್ತು ದಿನಗಳಲ್ಲಿ ಸುಮಾರು 1300 ಮೆಟ್ರಿಕ್ ಟನ್ ಕಸವನ್ನು ಯಮುನಾ ನದಿಯಿಂದ ಆಚೆ ತೆಗೆಯಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಇದನ್ನೂ ಓದಿ:ಭಾರತದ ಈ ರಾಜ್ಯದಲ್ಲಿದ ನಾಗಲೋಕ.. ಇಲ್ಲಿ ಎಷ್ಟು ಪ್ರಬೇಧದ ಸರ್ಪಗಳಿವೆ ಗೊತ್ತಾ?
ಅದು ಅಲ್ಲದೇ ಕೈಗಾರಿಕೋದ್ಯಮಗಳ ಕಾರ್ಖಾನೆಗಳ ತ್ಯಾಜ್ಯಗಳು ಯಮುನಾ ನದಿಯನ್ನು ಸೇರದಂತೆ ಕಾರ್ಖಾನೆಯ ಸುತ್ತಲು ಪ್ಲಾಂಟ್​ಗಳನ್ನು ಇನ್​ಸ್ಟಾಲ್ ಮಾಡಲಾಗುವುದು ಹಾಗೂ ಫ್ಯಾಕ್ಟರಿಗಳಿಂದ ಹೊರಬರುವು ರಾಸಾಯನಿಕ ತ್ಯಾಜ್ಯಗಳು ಅದರಲ್ಲಿಯೇ ಬೀಳುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವ ವರ್ಮಾ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/03/YAMUNA-CLEANING-1.jpg)
ಅದು ಮಾತ್ರವಲ್ಲ ಕಳೆದ ಬಾರಿ ದೆಹಲಿಯಲ್ಲಾದಂತಹ ಪ್ರವಾಹವನ್ನು ತಡೆಯಲು ಐಟಿಒ ಬ್ಯಾರೇಜ್​ ಗೇಟ್​​ಗಳ ನಿರ್ಮಾಣಕ್ಕೂ ನಾವು ಸಿದ್ಧತೆಯನ್ನು ನಡೆಸಿದ್ದೇವೆ. ಯಮುನಾ ನದಿ ತೀರವನ್ನು ಕೂಡ ಸ್ವಚ್ಛಗೊಳಿಸಬೇಕಿದೆ. ಅಲ್ಲಿ ಹಸಿರು ವಲಯ ಅಂದ್ರೆ ಗ್ರೀನ್ ಝೋನ್ ನಿರ್ಮಿಸುವ ನಿಟ್ಟಿನಲ್ಲಿ ನಾವು ದೆಹಲಿ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಸೇರಿ ಕಾರ್ಯವನ್ನು ಮಾಡಲಿದ್ದೇವೆ ಎಂದು ನೀರಾವರಿ ಹಾಗೂ ಆಹಾರ ಭದ್ರತಾ ಸಚಿವ ಪರ್ವೇಶ್ ವರ್ಮಾ ಹೇಳದ್ದಾರೆ.
ಇದು ಕೇವಲ ದೆಹಲಿ ಬಿಜೆಪಿ ಸರ್ಕಾರದಿಂದ ಮಾತ್ರ ನಡೆಯುತ್ತಿರುವ ಕಾರ್ಯವಲ್ಲ. ನಮ್ಮ ಈ ಕಾರ್ಯಕ್ಕೆ ಪ್ರಧಾನಿ ಮಂತ್ರಿಯವರ ಕಾರ್ಯಲಯವೂ ಕೂಡ ಕೈಜೋಡಿಸಿದೆ. ಹೀಗಾಗಿ ಆದಷ್ಟು ಬೇಗೆ ಯಮುನೆ ಶುದ್ಧವಾಗಿ ಹರಿಯಲಿದ್ದಾಳೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us