newsfirstkannada.com

ಶಿವರಾತ್ರಿ ಮೆರವಣಿಗೆಯಲ್ಲಿ ಮಹಾ ದುರಂತ.. 14 ಮಕ್ಕಳಿಗೆ ಗಂಭೀರ ಗಾಯ; ಆಸ್ಪತ್ರೆಯಲ್ಲಿ ನರಳಾಟ

Share :

Published March 8, 2024 at 4:08pm

Update March 8, 2024 at 4:10pm

    ಮೆರವಣಿಗೆಯಲ್ಲಿ 20-22 ಅಡಿ ಉದ್ದದ ಪೈಪ್ ಹಿಡಿದಿದ್ದ ಬಾಲಕ

    ಕಬ್ಬಿಣದ ಪೈಪ್‌ಗೆ ಹೈಟೆನ್ಷನ್ ವೈಯರ್ ತಗುಲಿ ಕರೆಂಟ್‌ ಶಾಕ್‌!

    ಶೇಕಡಾ 100ರಷ್ಟು ಸುಟ್ಟ ಗಾಯಗಳಾದ ಮಕ್ಕಳ ಸ್ಥಿತಿ ಚಿಂತಾಜನಕ

ಶಿವರಾತ್ರಿ ಮೆರವಣೆಗೆ ವೇಳೆ ರಾಜಸ್ಥಾನದ ಕೋಟಾದಲ್ಲಿ ಮಹಾ ದುರಂತ ಸಂಭವಿಸಿದೆ. ಮೆರವಣಿಗೆ ತೆರಳುವಾಗ ವಿದ್ಯುತ್‌ ತಂತಿ ತಗುಲಿದ್ದು, 14 ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ಅಸ್ವಸ್ಥರಾದ ಮಕ್ಕಳನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಕರೆಂಟ್ ಶಾಕ್‌ಗೆ ಒಳಗಾದ 14 ಮಕ್ಕಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕೋಟಾದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯಲ್ಲಿ ಓರ್ವ ಬಾಲಕ 20-22 ಅಡಿ ಉದ್ದದ ಪೈಪ್ ಅನ್ನು ಎತ್ತಿ ಕೊಂಡಿದ್ದ. ಈ ಪೈಪ್‌ಗೆ ಹೈಟೆನ್ಷನ್ ವೈಯರ್ ತಗುಲಿದ್ದು, ವಿದ್ಯುತ್ ಅವಘಡ ಸಂಭವಿಸಿದೆ. ಗಾಯಗೊಂಡ ಮಕ್ಕಳನ್ನು MBS ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಉನ್ನತ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ.

ರಾಜಸ್ಥಾನದ ಕೋಟಾ ಪ್ರದೇಶ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿನಿಧಿಸುವ ಸಂಸತ್ ಕ್ಷೇತ್ರ. ವಿದ್ಯುತ್ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗಾಯಗೊಂಡವರಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ.

ಶಿವರಾತ್ರಿ ಮೆರವಣಿಗೆಯಲ್ಲಿದ್ದವರ ಪೈಕಿ 14 ವರ್ಷದ ಹಲವು ಮಕ್ಕಳಿಗೆ ಕರೆಂಟ್ ಶಾಕ್ ಹೊಡೆದಿದೆ. ಹೈಟೆನ್ಷನ್ ವೈಯರ್ ತಗುಲಿದ ಓರ್ವ ಬಾಲಕನಿಗೆ ಶೇಕಡಾ 100ರಷ್ಟು ಸುಟ್ಟ ಗಾಯಗಳಾಗಿದೆ. ಈ ಬಾಲಕ ಬದುಕುವ ಸಾಧ್ಯತೆ ಕ್ಷಿಣಿಸಿದ್ದು, ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಶಿವರಾತ್ರಿ ಹಬ್ಬದ ದಿನವೇ ಸಂಭವಿಸಿದ ಭೀಕರ ದುರಂತಕ್ಕೆ ಕೋಟಾದ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವರಾತ್ರಿ ಮೆರವಣಿಗೆಯಲ್ಲಿ ಮಹಾ ದುರಂತ.. 14 ಮಕ್ಕಳಿಗೆ ಗಂಭೀರ ಗಾಯ; ಆಸ್ಪತ್ರೆಯಲ್ಲಿ ನರಳಾಟ

https://newsfirstlive.com/wp-content/uploads/2024/03/Kota-Shiv-Baraat.jpg

Load More