ಮಹಿಳೆ ಜೀವ ತೆಗೆದ ಕೇಸ್​; ನಟ ಅಲ್ಲು ಅರ್ಜುನ್​ಗೆ 14 ದಿನ ನ್ಯಾಯಾಂಗ ಬಂಧನ

author-image
Ganesh Nachikethu
Updated On
ಅಲ್ಲು ಅರ್ಜುನ್‌ಗೆ ಎದುರಾಯ್ತು ಕಾನೂನು ಸಂಕಷ್ಟ.. ಪುಷ್ಪಾ 2 ಪ್ರಮೋಷನ್ ವೇಳೆ ದೊಡ್ಡ ಯಡವಟ್ಟು!
Advertisment
  • ಪುಷ್ಪ-2 ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಬಲಿ ಕೇಸ್​​
  • ನಟ ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿದ ಪೊಲೀಸ್ರು
  • 14 ದಿನಗಳ ಕಾಲ ಅಲ್ಲು ಅರ್ಜುನ್​ ಅವರಿಗೆ ನ್ಯಾಯಾಂಗ ಬಂಧನ

ಹೈದರಾಬಾದ್​​: ಪುಷ್ಪ-2 ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಬಲಿಯಾಗಿದ್ದ ಕೇಸ್​​ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್​ ಮಾಡಿದ ನಂತರ ಪೊಲೀಸ್ರು ಅಲ್ಲು ಅರ್ಜುನ್​ ಅವರನ್ನು ಹೈದರಾಬಾದ್​​ ನಾಂಪಲ್ಲಿ ಕೋರ್ಟ್​​ನಲ್ಲಿ ಹಾಜರುಪಡಿಸಿದ್ರು. ಕೋರ್ಟ್​ ಈಗ ಮಹತ್ವದ ಆದೇಶ ಹೊರಡಿಸಿದ್ದು, 14 ದಿನಗಳ ಕಾಲ ಅಲ್ಲು ಅರ್ಜುನ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಅಲ್ಲು ಅರ್ಜು ಅರೆಸ್ಟ್​

ಇಂದು ಬೆಳಿಗ್ಗೆ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್​ ಮನೆಗೆ ಹೋಗಿ ಅರೆಸ್ಟ್​ ಮಾಡಿದ್ದಾರೆ. ಕಾಫಿ ಕುಡಿಯುತ್ತಿದ್ದ ಅಲ್ಲು ಅರ್ಜುನ್​ ಅವರನ್ನು ಪೊಲೀಸ್ರು ಬಂಧಿಸಿದ್ದಾರೆ. ಮೃತ ಮಹಿಳೆ ರೇವತಿ ಪತಿ ನೀಡಿದ ದೂರಿನ ಆಧಾರದ ಮೇರೆಗೆ ಅಲ್ಲು ಅರ್ಜುನ್​ ಅವರನ್ನು ಅರೆಸ್ಟ್​ ಮಾಡಲಾಗಿದೆ.

ಈಗಾಗಲೇ ಕೇಸ್​ ಸಂಬಂಧ ಸಂಧ್ಯಾ ಥಿಯೇಟರ್​ ಮಾಲೀಕ, ಮ್ಯಾನೇಜರ್ ಹಾಗೂ ಅಲ್ಲು ಅರ್ಜುನ್ ಜೊತೆಗೆ ಇದ್ದ ಬೌನ್ಸರ್​ಗಳನ್ನು ಬಂಧಿಸಲಾಗಿದೆ. ಅಲ್ಲು ಅರ್ಜುನ್ ವಿರುದ್ಧ 105, 118 (1) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಸೆಕ್ಷನ್​ ಪ್ರಕಾರ ತಪ್ಪು ಸಾಬೀತಾದ್ರೆ ಸುಮಾರು 10 ವರ್ಷ ಜೈಲು ಶಿಕ್ಷೆ ಆಗಲಿದೆ.

ಇದನ್ನೂ ಓದಿ:ಕೋರ್ಟ್​​ನಲ್ಲಿ ಹೀಗಾದರೆ ಜೈಲೇ ಗತಿ.. ಅಲ್ಲು ಅರ್ಜುನ್​​​​​ ಯಾವ ಜೈಲು ಸೇರ್ತಾರೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment