newsfirstkannada.com

ಬಸ್​ನಲ್ಲಿ ದಾಖಲೆ ಇಲ್ಲದ 14 ಲಕ್ಷ ರೂ. ಸಾಗಾಟ; ವ್ಯಕ್ತಿ ಪೊಲೀಸ್​ ವಶಕ್ಕೆ!

Share :

Published March 21, 2024 at 10:54pm

    ತಪಾಸಣೆ ವೇಳೆ ದಾಖಲೆ ಇಲ್ಲದ 14 ಲಕ್ಷ ನಗದು ವಶಕ್ಕೆ

    ಜಿಲ್ಲೆಯ ನಿಪ್ಪಾಣಿ ಗಡಿಯ ಕೊಗನೋಳ್ಳಿ ಟೋಲ್ ಬಳಿ ಘಟನೆ

    ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುತ್ತಿದ್ದ ಬಸ್​ನಲ್ಲಿ ಹಣ

ಚಿಕ್ಕೋಡಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.

ಹೌದು, ನಿಪ್ಪಾಣಿ ಗಡಿಯ ಕೊಗನೋಳ್ಳಿ ಟೋಲ್ ಬಳಿ ದಾಖಲೆ ಇಲ್ಲದೇ 14 ಲಕ್ಷ ಸಾಗಿಸುತ್ತಿದ್ದ ಹಣವನ್ನು ಪೋಲಿಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಗಡಿ ಚೆಕ್‌ ಪೋಸ್ಟ್​ಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ನಿಸಾರ್ ಎಂಬಾತನ ಬಳಿ ಹಣ ಪತ್ತೆಯಾಗಿದೆ. ವಿಚಾರಣೆ ವೇಳೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 14 ಲಕ್ಷ ಹಣ ಎಂದು ಗೊತ್ತಾಗಿದೆ. ಹೀಗಾಗಿ ಆ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ  ಈ ಕೇಸ್​ ಸಂಬಂಧ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​ನಲ್ಲಿ ದಾಖಲೆ ಇಲ್ಲದ 14 ಲಕ್ಷ ರೂ. ಸಾಗಾಟ; ವ್ಯಕ್ತಿ ಪೊಲೀಸ್​ ವಶಕ್ಕೆ!

https://newsfirstlive.com/wp-content/uploads/2024/03/money-1.jpg

Load More