ಸರ್ಕಾರದಿಂದ ಆಘಾತಕಾರಿ ಮಾಹಿತಿ: ಈ ಜಿಲ್ಲೆಯಲ್ಲಿ 14 ಅಪ್ರಾಪ್ತೆಯರು ಗರ್ಭಿಣಿಯರು..

author-image
Ganesh
Updated On
ಐದು ಹೆಣ್ಣು ಮಕ್ಕಳು.. ಮುಂದಿನ ಮಗು ಗಂಡೋ ಹೆಣ್ಣೋ ತಿಳಿಯಲು ಮುಂದಾಗಿದ್ದ ಗಂಡನಿಗೆ ಶಾಕ್​; ಆಗಿದ್ದೇನು..?
Advertisment
  • ಇದು ರಾಜ್ಯ ಸರ್ಕಾರವೇ ಕೊಟ್ಟ ಅಧಿಕೃತ ಮಾಹಿತಿ
  • ಬಾಲ್ಯ ವಿವಾಹ ಪದ್ಧತಿ ಜೀವಂತ ಇರೋದಕ್ಕೆ ಸಾಕ್ಷಿ ಇದು
  • ಮದುವೆ ಹೆಸರಿನಲ್ಲೂ ಲೈಂಗಿಕ ಸಂಬಂಧ ಕಾನೂನು ಬಾಹೀರ

ಮಹಾರಾಷ್ಟ್ರದ ಬೀಡ್ ಜಿಲ್ಲೆ ರಾಜ್ಯ ಹಾಗೂ ದೇಶಕ್ಕೆ ಘಟಾನುಘಟಿ ನಾಯಕರನ್ನ ಕೊಡುಗೆಯಾಗಿ ನೀಡಿದೆ. ಇಂಥ ಜಿಲ್ಲೆಯಲ್ಲಿ ಅನಿಷ್ಟ ಪದ್ದತಿಯೊಂದು ಜಾರಿಯಲ್ಲಿದೆ ಅಂತಾ ಅಲ್ಲಿನ ಸರ್ಕಾರ ಅಧಿಕೃತವಾಗಿ ಅಸೆಂಬ್ಲಿಯಲ್ಲೇ ಒಪ್ಪಿಕೊಂಡಿದೆ.

ಸರ್ಕಾರವೇ ಒಪ್ಪಿಕೊಂಡಿದೆ

ಇಂದಿಗೂ ಬೀಡ್ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ದತಿ ಅವ್ಯಾಹತವಾಗಿ ಮುಂದುವರಿದಿದೆ. ಮಹಾರಾಷ್ಟ್ರದ ಆರೋಗ್ಯ ಸಚಿವ ಪ್ರಕಾಶ್ ಅಂಬಟೀಕರ್, ಅಸೆಂಬ್ಲಿಗೆ ಲಿಖಿತ ಉತ್ತರ ನೀಡಿದ್ದಾರೆ. ಬೀಡ್ ಜಿಲ್ಲೆಯಲ್ಲಿ 2024ರ ಏಪ್ರಿಲ್ ನಿಂದ 2025ರ ಮಾರ್ಚ್ ವರೆಗೆ ಬಾಲ್ಯ ವಿವಾಹದಿಂದ 14 ಮಂದಿ ಹುಡುಗಿಯರು ಗರ್ಭೀಣಿಯರಾಗಿದ್ದರು. ಇವರ ಪೈಕಿ 7 ಮಂದಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಹಾರಾಷ್ಟ್ರ ಶಾಸಕರಾದ ಅಮೋಲ್ ಕಟಾಲ್ ಮತ್ತು ಅಮಿತ್ ಸತಾಂ ಅವರು ಅಸೆಂಬ್ಲಿಯಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗಳಿಗೆ ಲಿಖಿತ ಉತ್ತರವನ್ನು ಆರೋಗ್ಯ ಸಚಿವ ಪ್ರಕಾಶ್ ಅಂಬಟೀಕರ್ ಅಸೆಂಬ್ಲಿಯಲ್ಲಿ ನೀಡಿದ್ದಾರೆ.

ಇದನ್ನೂ ಓದಿ: ಅಮೃತಧಾರೆ ಸೀರಿಯಲ್​ ನಟಿಗೆ ಚಾಕು ಇರಿತ.. ಬೆಂಗಳೂರಲ್ಲಿ ಪತಿಯಿಂದಲೇ ಬರ್ಬರ ಕೃತ್ಯ

ಸಚಿವರ ಉತ್ತರ ಮಹಾರಾಷ್ಟ್ರದಲ್ಲಿ 2025ರಲ್ಲೂ ಇನ್ನೂ ಆಸ್ತಿತ್ವದಲ್ಲಿರುವ ಅನಿಷ್ಟ ಬಾಲ್ಯವಿವಾಹ ಪದ್ದತಿಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳು ಬಾಲ್ಯ ವಿವಾಹ ಪದ್ದತಿ ಕಂಡರೂ ಕಾಣದಂತೆ ಜಾಣ ಮೌನ ವಹಿಸಿರೋದನ್ನ ಎತ್ತಿ ತೋರಿಸುತ್ತದೆ. ಬಾಲ್ಯ ವಿವಾಹ ಕಾನೂನಿನಡಿ ನಿಷೇಧಿಸಿದ್ದರೂ ಮಹಾರಾಷ್ಟ್ರದ ಗ್ರಾಮೀಣಾ ಭಾಗದಲ್ಲಿ ಬಾಲ್ಯ ವಿವಾಹ ಪದ್ದತಿ ಅಳವಾಗಿ ಬೇರೂರಿರೋದು ಸಚಿವರು ನೀಡಿದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

ಮದುವೆ ಹೆಸರಿನಲ್ಲೂ ಲೈಂಗಿಕ ಸಂಬಂಧ ಕಾನೂನು ಬಾಹೀರ

ಅಪ್ರಾಪ್ತ ಬಾಲಕಿಯರು ಗರ್ಭೀಣಿಯರಾಗಿರುವುದನ್ನು ಅಧಿಕೃತವಾಗಿ ಲೈಂಗಿಕ ದೌರ್ಜನ್ಯ ಎಂದು ದಾಖಲೆಗಳಲ್ಲಿ ದಾಖಲಿಸಿಕೊಂಡಿಲ್ಲ. ಮಹಾರಾಷ್ಟ್ರದ ರೀಪ್ರೊಡಕ್ಟೀವ್ ಅಂಡ್ ಚೈಲ್ಡ್ ಹೆಲ್ತ್ ಪೋರ್ಟಲ್ ನಲ್ಲಿ ಅಪ್ರಾಪ್ತರು ಮಕ್ಕಳಿಗೆ ಜನ್ಮ ನೀಡುವುದನ್ನು ಲೈಂಗಿಕ ಹಿಂಸಾಚಾರ ಎಂದು ದಾಖಲಿಸಿಕೊಳ್ಳಲು ಅವಕಾಶವಿಲ್ಲ. ಯುವತಿ ಅಥವಾ ಬಾಲಕಿ ಗರ್ಭೀಣಿಯಾದರೆ ಅವರನ್ನು ಗರ್ಭೀಣಿ ತಾಯಿ ಎಂದು ಗಂಡನ ಹೆಸರಿನ ಜೊತೆ ದಾಖಲಿಸಿಕೊಳ್ಳಲಾಗುತ್ತೆ. ಈ ಪೋರ್ಟಲ್​ನಲ್ಲಿ ಯುವತಿ ಅಥವಾ ಬಾಲಕಿಯ ವಯಸ್ಸನ್ನು ಆಧಾರ್ ಕಾರ್ಡ್ ಮೂಲಕ ವೆರಿಫೈ ಮಾಡಲಾಗುತ್ತದೆ.

ಇದನ್ನೂ ಓದಿ: ವೈದ್ಯರಿಂದ ವೈದ್ಯೆಗೆ ಗರ್ಭಪಾತ ಮಾಡಿಸಿದ ಆರೋಪ; ಮೈಸೂರಲ್ಲಿ ಮದ್ವೆಯಾಗಿ 2 ತಿಂಗಳಲ್ಲಿ ಮೋಸ..

ಮಹಾರಾಷ್ಟ್ರದಲ್ಲಿ ಕಾನೂನಿನ ಲೋಪದೋಷ ಬಳಸಿಕೊಂಡು ಅಪ್ರಾಪ್ತರಿಗೆ ಮದುವೆ ಮಾಡಲಾಗುತ್ತಿದೆ. ಭಾರತದಲ್ಲಿ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರ ಜೊತೆ ಲೈಂಗಿಕ ಸಂಬಂಧ ಕಾನೂನು ಬಾಹಿರ. ಮದುವೆ ಹೆಸರಿನಲ್ಲೂ ಅಪ್ರಾಪ್ತ ಬಾಲಕಿಯರ ಜೊತೆ ಲೈಂಗಿಕ ಸಂಬಂಧ ಬೆಳೆಸುವಂತಿಲ್ಲ. ಸರ್ಕಾರ ಅಧಿಕೃತವಾಗಿ ಬೀಡ್ ಜಿಲ್ಲೆಯೊಂದರಲ್ಲೇ 14 ಮಂದಿ ಅಪ್ರಾಪ್ತ ಹುಡುಗಿಯರು ಗರ್ಭೀಣಿಯರಾಗಿದ್ದಾರೆ ಎಂದು ಹೇಳಿದೆ. ವಾಸ್ತವ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರರು ಹೇಳುತ್ತಾರೆ. ಗ್ರಾಮೀಣಾ ಭಾಗದಲ್ಲಿ ಅಪ್ರಾಪ್ತ ವಿವಾಹಗಳು, ಗರ್ಭೀಣಿಯರಾಗುವುದು ಸರ್ಕಾರಿ ದಾಖಲೆಗಳಲ್ಲಿ ದಾಖಲಾಗಲ್ಲ.

ಕಠಿಣ ಕ್ರಮದ ಭರವಸೆ

ಮಹಾರಾಷ್ಟ್ರದಲ್ಲಿ ಬಾಲ್ಯ ವಿವಾಹ ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವ ಪ್ರಕಾಶ್ ಅಂಬಟೀಕರ್ ಭರವಸೆ ನೀಡಿದ್ದಾರೆ. ಮಕ್ಕಳ ವಿವಾಹ ತಡೆ ಕಾಯಿದೆ, 2006ರಡಿ ಎಲ್ಲ ಬಾಲ್ಯ ವಿವಾಹ ತಡೆಯಲು ಎಲ್ಲ ಆರೋಗ್ಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ಪ್ರಕಾಶ್ ಅಂಬಟೀಕರ್ ಹೇಳಿದ್ದಾರೆ.

ತಳಮಟ್ಟದಲ್ಲಿ ಬಾಲ್ಯ ವಿವಾಹಗಳ ಮೇಲೆ ಕಣ್ಣಿಡಲು ಗ್ರಾಮ ಸೇವಕರನ್ನು ಬಾಲ್ಯ ವಿವಾಹ ತಡೆ ಅಧಿಕಾರಿಗಳೆಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಇನ್ನೂ ನಗರ ಪ್ರದೇಶಗಳಲ್ಲಿ ಸಿಡಿಪಿಓ ಮತ್ತು ಅಂಗನವಾಡಿ ಮೇಲ್ವಿಚಾರಕರನ್ನು ಮೈನ್ ಮತ್ತು ಅಸಿಸ್ಟೆಂಟ್ ಬಾಲ್ಯ ವಿವಾಹ ತಡೆ ಅಧಿಕಾರಿಗಳೆಂದು ಘೋಷಿಸಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಮಕ್ಕಳ ರಕ್ಷಣಾ ಸೆಲ್ ಆರಂಭಿಸಲಾಗುತ್ತಿದೆ. ಸ್ಕೂಲ್, ಸರ್ಕಾರಿ ಕಚೇರಿಗಳು, ಗ್ರಾಮ ಸಮುದಾಯ ಹಾಲ್ ಗಳು ಬಾಲ್ಯ ವಿವಾಹ ತಡೆ ಜಾಗೃತಿ ಮೂಢಿಸುವ ಕಾರ್ಯಕ್ರಮ ನಡೆಸಬೇಕೆಂದು ಸರ್ಕಾರ ಸೂಚನೆ ನೀಡಿದೆ.

ಇದನ್ನೂ ಓದಿ: ಹಿಂದೂಸ್ತಾನ್ ಯೂನಿಲಿವರ್​ಗೆ ಸಿಇಓ ಆಗಿ ಪ್ರಿಯಾ ನಾಯರ್ ನೇಮಕ; ಶೇ.5 ರಷ್ಟು ಷೇರುಬೆಲೆ ಏರಿಕೆ!

ಕರ್ನಾಟಕದ ಉತ್ತರ ಭಾಗದಲ್ಲಿ ಬಾಲ್ಯ ವಿವಾಹ ಪದ್ದತಿ ಇನ್ನೂ ಜೀವಂತವಾಗಿದೆ. ಆಗಾಗ ಕರ್ನಾಟಕದಲ್ಲೂ ಬಾಲ್ಯ ವಿವಾಹ ಪದ್ದತಿ ಆಸ್ತಿತ್ವದಲ್ಲಿರೋದು ಬೆಳಕಿಗೆ ಬರುತ್ತೆ. ಎಲ್ಲವನ್ನೂ ಕಾನೂನು ಜಾರಿಗೆ ತಂದೇ ನಿಯಂತ್ರಿಸಲಾಗಲ್ಲ. ಜನರೆ ಜಾಗೃತರಾಗಬೇಕು. ಅನಿಷ್ಟ ಪದ್ದತಿ ನಿಲ್ಲಿಸಲು ಜನರೇ ತೀರ್ಮಾನ ಕೈಗೊಳ್ಳಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment