/newsfirstlive-kannada/media/post_attachments/wp-content/uploads/2025/04/pakistani.jpg)
ಉತ್ತರ ಕನ್ನಡ: ಪಹಲ್ಗಾಮ್ ದಾಳಿ ಬೆನ್ನಲ್ಲೇ ಉಗ್ರ ಪೋಷಕ ಪಾಕಿಸ್ತಾನದ ವಿರುದ್ಧ ಭಾರತ ಸರ್ಕಾರ ಕಠಿಣ ನಿಲುವು ತಾಳಿದೆ. ಕೇಂದ್ರ ಸರ್ಕಾರದ ನಿರ್ಧಾರದಂತೆ ಮೇ 1ರೊಳಗಾಗಿ ಪಾಕಿಸ್ತಾನದಲ್ಲಿರುವ ಭಾರತೀಯರು ತವರಿಗೆ ಮರಳಬೇಕು. ಭಾರತದಲ್ಲಿರುವ ಪಾಕಿಸ್ತಾನಿಯರೂ ಕೂಡಲೇ ಇಲ್ಲಿಂದ ತೆರಳಬೇಕು ಎಂದು ಸೂಚನೆ ನೀಡಲಾಗಿದೆ. ಅಂತೆಯೇ ವೀಸಾ ಕ್ಯಾನ್ಸಲ್ ಆಗಲಿದೆ.
ಭಟ್ಕಳದಲ್ಲಿ 14 ಪಾಕಿಸ್ತಾನಿಯರು..!
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹದಿನಾಲ್ಕು ಮಂದಿ ಪಾಕಿಸ್ತಾನಿಯರಿದ್ದಾರೆ. 14 ಮಂದಿಯಲ್ಲಿ 10 ಮಹಿಳೆಯರು ಭಟ್ಕಳದ ಪುರುಷರನ್ನು ಮದುವೆ ಆಗಿದ್ದಾರೆ. ಈ 10 ಮಹಿಳೆಯರಿಗೆ ಪಾಕಿಸ್ತಾನದಲ್ಲಿ ಹುಟ್ಟಿದ ಮೂವರು ಮಕ್ಕಳಿದ್ದಾರೆ. ಇನ್ನು ಓರ್ವ ಮಹಿಳೆ ಬಾಂಗ್ಲಾದೇಶ ವಲಸಿಗರಾಗಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ. ಮಾಹಿತಿಗಳ ಪ್ರಕಾರ, ಇವರು ಸರ್ಕಾರದ ಆದೇಶದಂತೆ ದೇಶ ತೊರೆಯೋದು ಅನುಮಾನ ಎಂದು ಹೇಳಲಾಗಿದೆ.
ಇವರುಗಳು ದೀರ್ಘಕಾಲದ ವೀಸಾ ಪಡೆದು ಭಟ್ಕಳದಲ್ಲಿ ನೆಲೆಸಿದ್ದಾರೆ. ಎರಡು ವರ್ಷಕ್ಕೆ ನವೀಕರಿಸಬೇಕಾದ ವಿಸಾ ಪಡೆದು ನೆಲೆಸುತ್ತಿದ್ದಾರೆ. ಪಾಕಿಸ್ತಾನ ಮಹಿಳೆಯರಿಗೆ ಹುಟ್ಟಿದ ಮಕ್ಕಳಿಗೆ ಭಾರತದ ಪೌರತ್ವ ನೀಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವಿಲ್ಲ. ಪಹಲ್ಗಾಮ್ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಭಾರತ ತೊರೆಯುವಂತೆ ಹೇಳಿದೆ. ಈ ಮಹಿಳೆಯರು ಏನು ಮಾಡುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಪ್ರಾಣ ಪಣಕ್ಕಿಟ್ಟು ಮಗು ರಕ್ಷಿಸಿದ ಟೂರಿಸ್ಟ್ ಗೈಡ್.. ಇದು ಮನಮಿಡಿಯುವ ಸ್ಟೋರಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ