newsfirstkannada.com

ಹಾರಂಗಿ ನಾಲೆಯಲ್ಲಿ ಏಡಿ ಹಿಡಿಯೋ ದುಸ್ಸಾಹಸ.. ನಾಪತ್ತೆಯಾಗಿದ್ದ ಶಾಲಾ ಬಾಲಕನ ಶವ ಮಾದಲಾಪುರದಲ್ಲಿ ಪತ್ತೆ

Share :

Published August 23, 2023 at 3:56pm

  ಏಡಿ ಹಿಡಿಯಲು ಹೋಗಿದ್ದಾಗ ನೀರುಪಾಲಾದ ಬಾಲಕ

  ಬ್ಯಾಡಗೊಟ್ಟ ಗ್ರಾಮದ ಅನಿತ್ (14) ಮೃತ ವಿದ್ಯಾರ್ಥಿ

  ನೂರು‌ ಮೀಟರ್ ದೂರದ ಮಾದಲಾಪುರದಲ್ಲಿ ಶವ ಪತ್ತೆ

ಕೊಡಗು: ಹಾರಂಗಿ ನಾಲೆಯಲ್ಲಿ ಕಾಣೆಯಾಗಿದ್ದ ಶಾಲಾ ಬಾಲಕನ ಶವ ಮಾದಲಾಪುರದಲ್ಲಿ ಪತ್ತೆಯಾಗಿರೋ ಘಟನೆ ಕುಶಾಲನಗರ ತಾಲೂಕಿನ ಬ್ಯಾಡಗೊಟ್ಟ ಗ್ರಾಮದಲ್ಲಿ ನಡೆದಿದೆ. ಬ್ಯಾಡಗೊಟ್ಟ ಗ್ರಾಮದ ಅನಿತ್ (14) ಮೃತ ವಿದ್ಯಾರ್ಥಿ.

ಮೃತ ವಿದ್ಯಾರ್ಥಿಯು ಏಡಿ ಹಿಡಿಯಲು ಹೋಗಿದ್ದಾಗ ಆಯತಪ್ಪಿ ನೀರು ಪಾಲಾಗಿದ್ದಾನೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಕಾರ್ಯಚರಣೆ ನಡೆಸಿದ್ದಾರೆ. ನಾಲೆಯಲ್ಲಿದ್ದ ನೀರನ್ನು ಸ್ಥಗಿತಗೊಳಿಸಿ ಶೋಧಕಾರ್ಯ ನಡೆಸಿದ್ದಾರೆ.

ಇನ್ನು, ವಿದ್ಯಾರ್ಥಿ ಕಾಣೆಯಾದ ಜಾಗದಿಂದ ಬಿಟ್ಟು, ನೂರು‌ ಮೀಟರ್ ದೂರದ ಮಾದಲಾಪುರದಲ್ಲಿ ಶವ ಪತ್ತೆಯಾಗಿದೆ. ಮೃತ ವಿದ್ಯಾರ್ಥಿ ಸದ್ಗುರು ಅಪ್ಪಯ್ಯಸ್ವಾಮಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಘಟನೆಯು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹಾರಂಗಿ ನಾಲೆಯಲ್ಲಿ ಏಡಿ ಹಿಡಿಯೋ ದುಸ್ಸಾಹಸ.. ನಾಪತ್ತೆಯಾಗಿದ್ದ ಶಾಲಾ ಬಾಲಕನ ಶವ ಮಾದಲಾಪುರದಲ್ಲಿ ಪತ್ತೆ

https://newsfirstlive.com/wp-content/uploads/2023/08/death-6-1.jpg

Load More